More

    ಕೇಂದ್ರ ಸರ್ಕಾರದಿಂದ ಜಿಎಸ್​​ಟಿ ಬಾಬ್ತು 75,000 ಕೋಟಿ ರೂ. ಬಿಡುಗಡೆ

    ನವದೆಹಲಿ: ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್​​ಟಿ ಆದಾಯದಲ್ಲಿನ ಕೊರತೆ ಸರಿದೂಗಿಸಲು ಕೇಂದ್ರ ಸರ್ಕಾರ 75 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಗುರುವಾರ ತಿಳಿಸಿದೆ. ಮೇ 28ರಂದು ನಡೆದಿದ್ದ ಜಿಎಸ್​​ಟಿ ಕೌನ್ಸಿಲ್ ಸಭೆಯಲ್ಲಿ ಕೇಂದ್ರ 1.59 ಲಕ್ಷ ಕೋಟಿ ಸಾಲ ಪಡೆದು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದ ಪ್ರಕಾರ ಈ ಪ್ರಕ್ರಿಯೆ ನಡೆಸಿದೆ.

    ಪ್ರತಿ ಎರಡು ತಿಂಗಳಿಗೊಮ್ಮೆ ಜಿಎಸ್​ಟಿ ಸೆಸ್​ ಸಂಗ್ರಹಾನುಸಾರ ಬಿಡುಗಡೆ ಮಾಡುವ ಮೊತ್ತಕ್ಕೆ ಹೊರತಾಗಿ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಪರಿಸ್ಥಿತಿ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಗಳು ಮಹತ್ವದ ಪಾತ್ರ ವಹಿಸುತ್ತಿವೆ. ಅವುಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬ್ಯಾಕ್​ ಟು ಬ್ಯಾಕ್​ ಲೋನ್ ಫೆಸಿಲಿಟಿ ಅಡಿ ಈ ಮೊತ್ತವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಇದು ಒಟ್ಟಾರೆ ಕೊರತೆ ಮೊತ್ತದ ಅರ್ಧದಷ್ಟು ಹಣವಾಗಿದ್ದು, ಇದನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನು 2021-22ರ ದ್ವಿತೀಯಾರ್ಧದಲ್ಲಿ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

    ಪೊಲೀಸ್ ಠಾಣೆಗೆ ಹತ್ತಿರದಲ್ಲೇ ಆರ್​ಟಿಐ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

    ಗುಡ್ಡ ಕುಸಿದು ಮನೆಯಂಗಳಕ್ಕೇ ಜಾರಿ ಬಿದ್ದ ಬಂಡೆ; ಅಪಾಯದಲ್ಲಿದೆ ಗುಡ್ಡದ ಮೇಲಿನ ಶಾಲೆ..

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts