More

    ಕೇಂದ್ರ ಬಜೆಟ್ 2020| ಆದಾಯ ತೆರಿಗೆ ವಿಚಾರದಲ್ಲಿ ಬಿಗ್ ರಿಲೀಫ್​ ನೀಡಲಿದೆ ಕೇಂದ್ರ ಸರ್ಕಾರ ಎನ್ನುತ್ತಿವೆ ವರದಿಗಳು..

    ನವದೆಹಲಿ: ಕೇಂದ್ರ ಬಜೆಟ್ 2020ಕ್ಕೆ ದಿನಗಣನೆ ಆರಂಭವಾಗಿದ್ದು, ಆದಾಯ ತೆರಿಗೆ ವಿಚಾರದಲ್ಲಿ ಈ ಸಲ ತೆರಿಗೆ ಪಾವತಿದಾರರಿಗೆ ಭಾರಿ ರಿಲೀಫ್ ಕೊಡಲಿದೆ ಕೇಂದ್ರ ಸರ್ಕಾರ ಎಂಬ ಸುದ್ದಿ ಹರಡಿದೆ.

    ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. ಹಿಂದೆ 5 ಲಕ್ಷ ರೂಪಾಯಿ ತನಕ ಆದಾಯ ಇರುವಂಥವರು ಶೇಕಡ 5 ಆದಾಯ ತೆರಿಗೆ ಪಾವತಿಸುತ್ತಿದ್ದರು. ಈ ಸ್ಲ್ಯಾಬ್​ನಲ್ಲಿ ಆದಾಯ ಮಿತಿಯನ್ನು ಹೆಚ್ಚಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎನ್ನುತ್ತಿವೆ ಸುದ್ದಿಗಳು..

    ವರದಿಗಳ ಪ್ರಕಾರ, ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್​ನಲ್ಲಿ ಈ ವಿಷಯ ಒಳಗೊಳ್ಳಲಿದೆ. ಆದಾಯ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿ ಎರಡು ಮಹತ್ವದ ಪರಿಷ್ಕರಣೆಗಳು ಇದರಲ್ಲಿವೆ.ಪ್ರಸ್ತಾವಿತ ಪರಿಷ್ಕರಣೆ ಪ್ರಕಾರ, ಶೇಕಡ 5ರ ತೆರಿಗೆ ಸ್ಲ್ಯಾಬ್​ನ ಆದಾಯ ಮಿತಿಯನ್ನು 7 ಲಕ್ಷ ರೂಪಾಯಿಗೂ, ಶೇಕಡ 10ರ ತೆರಿಗೆಯ ಸ್ಲ್ಯಾಬ್​ನ ಆದಾಯ ಮಿತಿ 7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕವೂ ಆಗುವ ಸಾಧ್ಯತೆ ಇದೆ.

    ಕಳೆದ ಬಜೆಟ್​ನಲ್ಲಿ ವಾರ್ಷಿಕ 5 ಲಕ್ಷವರೆಗಿನ ಆದಾಯಕ್ಕೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯನ್ನು ಸರ್ಕಾರ ಘೋಷಿಸಿತ್ತು. ಈಗಿರುವ ಆದಾಯ ತೆರಿಗೆ ವ್ಯವಸ್ಥೆ ಪ್ರಕಾರ, 2.5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಯಾವುದೇ ವೈಯಕ್ತಿಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 5, 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 20, 10 ಲಕ್ಷ ರೂಪಾಯಿಗೂ ಹೆಚ್ಚು ಆದಾಯಕ್ಕೆ ಶೇಕಡ 30 ತೆರಿಗೆ ಪಾವತಿಸಬೇಕಾಗಿದೆ. ಇದಲ್ಲದೆ, 50 ಲಕ್ಷ ರೂಪಾಯಿಗೂ ಅಧಿಕ ಆದಾಯ ಹೊಂದಿದವರಿಗೆ ಸರ್ಚಾರ್ಜನ್ನೂ ಸರ್ಕಾರ ವಿಧಿಸುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts