More

    ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವೀಯಲು ಹಿಂಜರಿಯ ಬೇಕಿಲ್ಲ; ಉಪಕಾರಿಗಳ ರಕ್ಷಣೆಗಿದೆ ಹೊಸ ಕಾನೂನು

    ನವದೆಹಲಿ: ರಸ್ತೆ ಅಪಘಾತದ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸೋದಕ್ಕೆ ಇನ್ನು ಯಾರೂ ಹಿಂದೆ ಮುಂದೆ ನೋಡಬೇಕಾಗಿಲ್ಲ. ಕಾನೂನು ಸಂಕಷ್ಟಕ್ಕೆ ಬಲಿಯಾಗದಂತೆ ಉಪಕಾರಿಗಳ ರಕ್ಷಣೆಗೆ ಹೊಸ ಕಾನೂನನ್ನು ಜಾರಿಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುವಾರ ಅಧಿಸೂಚನೆ ಹೊರಡಿಸಿದೆ.

    ಅಪಘಾತದಲ್ಲಿ ನೆರವಾಗುವಂಥವರನ್ನು ಗೌರವದಿಂದ ಕಾಣಬೇಕು. ಅವರು ಯಾವುದೇ ಜಾತಿ, ಧರ್ಮ, ರಾಷ್ಟ್ರ ಅಥವಾ ಲಿಂಗದವರಾದರೂ ತಾರತಮ್ಯ ಮಾಡಬಾರದು ಎಂಬ ಅಂಶವನ್ನು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಯಾವನೇ ಪೊಲೀಸ್ ಅಧಿಕಾರಿ ಅಥವಾ ಇತರೆ ಯಾರೇ ಆಗಲಿ ಉಪಕಾರಿಯ ವೈಯಕ್ತಿಕ ಮಾಹಿತಿ ಅಂದರೆ ಹೆಸರು, ಗುರುತು ಪರಿಚಯ, ವಿಳಾಸ ಅಥವಾ ಅಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಒತ್ತಡ ಹೇರುವಂತಿಲ್ಲ. ಆದರೆ, ಅದನ್ನು ಅವರು ಸ್ವಯಂ ಬಹಿರಂಗ ಪಡಿಸಿದರೆ ತಕರಾರು ಏನೂ ಇಲ್ಲ.

    ಇದನ್ನೂ ಓದಿ: ಹರಪನಾಯಕನಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ; 250 ವರ್ಷಗಳ ಪುರಾತನ ಕಲ್ಲಿನ ಕೋಟೆ ಬಿರುಕು

    ಈ ನಿಯಮಾವಳಿಯ ಅಂಶಗಳನ್ನು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಬೇಕು. ಅಲ್ಲದೆ, ವೆಬ್​ಸೈಟ್​ಗಳಲ್ಲೂ ಪ್ರಕಟಿಸಬೇಕು. ಉಪಕಾರಿಗಳ ಹಕ್ಕುಗಳನ್ನೂ ಉಲ್ಲೇಖಿಸಬೇಕು. ಅಪಘಾತದ ಸಂದರ್ಭದಲ್ಲಿ ನೆರವಾದ ಉಪಕಾರಿಗಳ ಪೈಕಿ ಸಾಕ್ಷಿಯಾಗಲು ಯಾರಾದರೂ ಮುಂದೆ ಬಂದರೆ ಅಂಥ ಸಂದರ್ಭದಲ್ಲಿ ಹೊಸ ಕಾನೂನು ಪ್ರಕಾರ ಅವರನ್ನು ನಡೆಸಿಕೊಳ್ಳಬೇಕು ಎಂಬುದು ನಿಯಮದ ಸಾರ.

    ಇದನ್ನೂ ಓದಿ: ಕಂಗೆಡಿಸಿದ ಚರ್ಮಗಂಟು ರೋಗ ; ಕೋಲಾರ ಜಿಲ್ಲೆಯಲ್ಲಿ ಈವರೆಗೆ 34 ಜಾನುವಾರುಗಳಲ್ಲಿ ಪತ್ತೆ

    ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019ರಲ್ಲಿ 134ಎ ಎಂಬ ಹೊಸ ಸೆಕ್ಷನ್​ನಲ್ಲಿ “ಪ್ರೊಟೆಕ್ಷನ್ ಆಫ್ ಗುಡ್ ಸಮರಿಟನ್ಸ್” ಎಂಬ ಶೀರ್ಷಿಕೆಯಲ್ಲಿ ಹೊಸ ಕಾನೂನನ್ನು ಸೇರಿಸಲಾಗಿದೆ. ಅಪಘಾತದಲ್ಲಿ ಸಂತ್ರಸ್ತರು ಗಾಯಗೊಂಡಿದ್ದರೆ ಅಥವಾ ಮೃತಪಟ್ಟಿದ್ದರೆ ಆ ವಿಷಯವಾಗಿ ಉಪಕಾರಿಯನ್ನು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಯಲ್ಲಿ ಬಾಧ್ಯಸ್ಥ ಎಂದು ಪರಿಗಣಿಸಬಾರದು ಎಂಬ ಅಂಶ ಇದರಲ್ಲಿದೆ. (ಏಜೆನ್ಸೀಸ್)

    ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕ್: ಇಬ್ಬರು ಭಾರತೀಯ ಯೋಧರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts