More

    ಎಸ್‌ಟಿ ಮೀಸಲಾತಿಗಾಗಿ ಸರ್ಕಾರದ ಗಮಸೆಳೆಯಿರಿ, ಕಾಗಿನೆಲೆ ಗುರುಪೀಠದ ಶ್ರೀನಿರಂಜಾನಂದ ಪುರಿ ಸ್ವಾಮೀಜಿ ಸಲಹೆ

    ದಾಬಸ್‌ಪೇಟೆ: ಕುರುಬರ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೈಗೊಂಡಿರುವ ಪಾದಯಾತ್ರೆ ಸೋಮವಾರ ದಾಬಸ್‌ಪೇಟೆಯ ವಿದ್ಯಾಸ್ಫೂರ್ತಿ ಶಾಲೆಯಿಂದ ನೆಲಮಂಗಲ ತಾಲೂಕಿನ ಬೇಗೂರಿನತ್ತ ಸಾಗಿತು.

    ಇದೇ ವೇಳೆ ಬಿಲ್ಲಿಕೋಟೆಯಲ್ಲಿ ತಾಪಂ ಸದಸ್ಯ ಚಂದ್ರಶೇಖರ್ ಹಾಗೂ ಭಕ್ತರು, ಪೂರ್ಣಕುಂಭ ಕಲಶ ಹಾಗೂ ವೀರಗಾಸೆ ತಂಡದೊಂದಿಗೆ ಪಾದಯಾತ್ರಿಗಳನ್ನು ಸ್ವಾಗತಿಸಲಾಯಿತು.

    ಕಾಗಿನೆಲೆ ಗುರುಪೀಠದ ಶ್ರೀನಿರಂಜಾನಂದ ಪುರಿ ಸ್ವಾಮೀಜಿ ಮಾತನಾಡಿ, ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ಹೋರಾಟ ಆರಂಭಿಸಲಾಗಿದೆ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೇ ಮುಖಂಡರು ಎಚ್ಚೆತ್ತುಕೊಳ್ಳಬೇಕಿತ್ತು. ಇಂದಾದರೂ ಸಮುದಾಯದ ಮುಖಂಡರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನಸೆಳೆಯಬೇಕಿದೆ ಎಂದರು.

    ಪಾದಯಾತ್ರೆ 18 ದಿನಕ್ಕೆ ಕಾಲಿಟ್ಟಿದ್ದು, ಸುಮಾರು 380 ಕಿಮೀ ಸಾಗಿದ್ದೇವೆ. ಬೆಂಗಳೂರು ಹತ್ತಿರ ಬರುತ್ತಿದ್ದಂತೆ ಅನೇಕರು ಪಾದಯಾತ್ರೆಗೆ ಸೇರುತ್ತಿದ್ದಾರೆ ಎಂದರು.

    ಪಾದಯಾತ್ರೆಯಲ್ಲಿ ಭಾಗವಹಿಸಿದ ಸಚಿವ ಕೆ.ಎಸ್.ಈಶ್ಚರಪ್ಪ ಮಾತನಾಡಿ, ಎಸ್‌ಟಿ ಮೀಸಲಾತಿಗಾಗಿಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದೇವೆ. ೆ.7 ರಂದು ಕುರುಬರ ಶಕ್ತಿ ಪ್ರದರ್ಶನವಾಗುತ್ತದೆ ಎಂದರು.

    ಹಾಲುಮತದ ಕುಲಗುರು ಶ್ರೀ ರೇವಣ ಸಿದ್ದೇಶ್ವರ ಶಾಂತಮುನಿ ಸ್ವಾಮೀಜಿ, ಶ್ರೀ ಸೋಮೇಲಿಂಗೇಶ್ವರ ಸ್ವಾಮೀಜಿ, ಲಿಂಗಯ್ಯ ಕಾಣಿಕೇಯ ಮೈಲಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts