More

    ಸರ್ಕಾರಿ ನೌಕರರಿಗೆ ಉಚಿತ ಆರೋಗ್ಯ ಸೇವೆ: ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿಕೆ ತಿಂಗಳೊಳಗೆ ಮುಖ್ಯಮಂತ್ರಿಗಳಿಂದ ಚಾಲನೆ

    ಮಾಗಡಿ : ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೊಂದು ತಿಂಗಳೊಳಗೆ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.

    ಪಟ್ಟಣದ ಸಿದ್ಧಾರೂಢ ಕಲ್ಯಾಣ ಮಂಟಪದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರಿ ನೌಕರರು ಹಾಗೂ ಅವರನ್ನು ಅವಲಂಬಿಸಿರುವ ಅವರ ಕುಟುಂಬಗಳ 25 ಲಕ್ಷ ಮಂದಿಗೆ ಎಲ್ಲ ರೀತಿ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ ಎಂದರು.

    ತಾಲೂಕು ಅಧ್ಯಕ್ಷ ಎಂ.ಜಿ. ಶಿವರಾಮಯ್ಯ ಮಾತನಾಡಿ, ತಾಲೂಕಿನಲ್ಲಿ ಸಂಘಟನೆ ಬಲಿಷ್ಠವಾಗಿದೆ. ಸಂಘದ ಕಟ್ಟಡದಲ್ಲಿ ಸಭಾಂಗಣ ನಿರ್ಮಾಣಕ್ಕೆ ರಾಜ್ಯಾಧ್ಯಕ್ಷರು ಸರ್ಕಾರದ ಅನುದಾನ ಕೊಡಿಸುವಂತೆ ಮನವಿ ಮಾಡಿ, ತಾಲೂಕು ಮಟ್ಟದ ಕ್ರೀಡಾಕೂಟ, ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ನೌಕರರನ್ನು ಭಾಗವಹಿಸಿ ಬಹುಮಾನ ಗೆಲ್ಲಲಾಗಿದೆ. ಷಡಕ್ಷರಿ ಅವರು ರಾಜ್ಯಾಧ್ಯಕ್ಷರಾದ ನಂತರ ನೌಕರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಶಕ್ತಿ ತುಂಬಿದ್ದಾರೆ. ಮಾಗಡಿ ಸಂಘದ ಬಗ್ಗೆ ವಿಶೇಷ ಅಸಕ್ತಿ ಹೊಂದಿದ್ದಾರೆ ಎಂದರು.

    ಜಿಲ್ಲಾಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ತಿಮ್ಮೇಗೌಡ, ಮಾಲತೇಶ್, ಉಪಾಧ್ಯಕ್ಷ ಗಿರಿಗೌಡ, ಮಂಜುನಾಥ್, ಮೋಹನ್, ತಾ. ಕಾರ್ಯದರ್ಶಿ ಸಿ. ಪ್ರಕಾಶ್, ಖಜಾಂಚಿ ಎಚ್.ಸಿ. ಸುರೇಶ್, ರಾಜ್ಯ ಪರಿಷತ್ ಸದಸ್ಯ ಬಿ.ಧರಣೇಶ್, ಹಿರಿಯ ಉಪಾಧ್ಯಕ್ಷ ವೈ.ಎಸ್. ಶ್ರೀಧರ್ ಮೂರ್ತಿ, ಯೋಗೇಶ್, ಚೇತನ್,ಮಂಗಳಗೌರಮ್ಮ, ಪರಿಮಳ, ಜಯಲಕ್ಷ್ಮಮ್ಮ, ಜಯರಾಮು, ಕೆ.ಪಿ.ರಂಗಸ್ವಾಮಿ, ಬಸವರಾಜು ಇತರರು ಇದ್ದರು.

    ಸಂಘಟಿತರಾಗಿರುವುದು ಮುಖ್ಯ :  ಸಂಘದಲ್ಲಿನ ಭಿನ್ನಾಭಿಪ್ರಾಯ, ಗುಂಪುಗಾರಿಕೆ, ವ್ಯತ್ಯಾಸಗಳಿದ್ದರೆ ಸರ್ಕಾರಗಳು ನಮ್ಮನ್ನು ಆಟವಾಡಿಸುತ್ತವೆ. ನಾವು ಸಂಘಟಿತರಾಗಿರಬೇಕು. ಸಂಘಟನೆ ವಿರುದ್ದ ನಡೆದುಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅದು ಯಾರೇ ಆಗಲಿ ಅವರನ್ನು ಉಚ್ಚಾಟನೆ ಮಾಡಲಾಗುವುದು. ಸಂಘದಲ್ಲಿ ಒಡೆದು ಆಳುವ ನೀತಿ ಬೇಡ ಎಂದು ಜಿಲ್ಲಾಧ್ಯಕ್ಷರಿಗೆ ಷಡಾಕ್ಷರಿ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts