More

    ಸರ್ಕಾರಿ ನೌಕರನಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ

    ರಾಣೆಬೆನ್ನೂರ: ಅಕ್ರಮ ಆಸ್ತಿ ಹೊಂದಿದ ಸರ್ಕಾರಿ ನೌಕರನಿಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿ ಇಲ್ಲಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಎಸ್. ಜ್ಯೋತಿಶ್ರೀ ಬುಧವಾರ ತೀರ್ಪು ನೀಡಿದ್ದಾರೆ.

    ರಾಣೆಬೆನ್ನೂರ ತಾಪಂ ಕಿರಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ ಹೊನ್ನಪ್ಪ ಹರಮಗಟ್ಟಿ ಶಿಕ್ಷೆಗೊಳಗಾದ ಅಪರಾಧಿ.

    ರಾಜಶೇಖರ ತನ್ನ ಸೇವಾವಧಿಯಲ್ಲಿ 59,64,244 ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದರು. ಅವರ ಎಲ್ಲ ಮೂಲಗಳ ಆದಾಯ 16 ಲಕ್ಷ ರೂ. ಆಗಿತ್ತು. ಆದರೆ, ಅವರು ಮೂಲ ಆದಾಯಕ್ಕಿಂತ ಹೆಚ್ಚುವರಿಯಾಗಿ 43,64,244 ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದರು. ಈ ಬಗ್ಗೆ ಹಾವೇರಿ ಲೋಕಾಯುಕ್ತ ಠಾಣೆ ಪಿ.ಐ ಬಿ.ಎಸ್. ಅಸೋಡೆ 1-10-2005ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ತನಿಖೆ ಮುಕ್ತಾಯದ ನಂತರ 10-09-2008ರಂದು ಹಾವೇರಿ ಲೋಕಾಯುಕ್ತ ಠಾಣೆ ಪಿ.ಐ. ಜಿ. ಗುರುದತ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ಸಾಕ್ಷ್ಯಾಧಾರ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಬಿ. ಹುಳಪಲ್ಲೆ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts