More

    ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಮನೆಯಲ್ಲಿ ಕಂತೆ‌ ಕಂತೆ ಹಣ, ಬೆಳ್ಳಿ, ಚಿನ್ನ, ವಿದೇಶಿ ಕರೆನ್ಸಿಗಳು ಪತ್ತೆ!

    ಬೆಂಗಳೂರು: ವಿಧಾನಸಭಾ ಚುನಾವಣಾ ಚಟುವಟಿಕೆ ನಡುವೆಯೇ ಇಂದು ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆದಿದ್ದು, ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ತಂಡ ಬಿಸಿ ಮುಟ್ಟಿಸಿದೆ. ಈ ವೇಳೆ ಬೆಂಗಳೂರಿನ ಬಿಬಿಎಂಪಿ ಅಧಿಕಾರಿಯ ಮನೆಯಲ್ಲಿ ಭಾರೀ ಪ್ರಮಾಣ ಆಸ್ತಿ ಪತ್ತೆಯಾಗಿದೆ.

    ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಬಿಬಿಎಂಪಿ ಅಧಿಕಾರಿ ಗಂಗಾಧರಯ್ಯ ಅವರ ಮನೆ ಮೇಲೆ ಇಂದು ಮುಂಜಾನೆಯೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಗಂಗಾಧರಯ್ಯ ಬಿಬಿಎಂಪಿಯ ಟೌನ್ ಪ್ಲಾನಿಂಗ್ ಅಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಚೇರಿ ಯಲಹಂಕದಲ್ಲಿದೆ.

    ಇದನ್ನೂ ಓದಿ: ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು

    ಬೆಳಗ್ಗೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 15 ಜನ ಲೋಕಾಯುಕ್ತ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಮನೆ ಒಳಗಡೆ ಇರುವ ಕಾರಿನ ಒಳಗಡೆಯು ಪರಿಶೀಲನೆ ಮಾಡಿದ್ದಾರೆ. ಒಬ್ಬರು ಎಸ್ಪಿ, ಇಬ್ಬರು ಡಿವೈಎಸ್ಪಿ ಮತ್ತು ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ.

    ಕಂತೆ ‌ಕಂತೆ ಹಣ ಪತ್ತೆ

    ದಾಳಿಯ ವೇಳೆ ಗಂದಾಧರಯ್ಯ ಮನೆಯಲ್ಲಿ ಕಂತೆ‌ಕಂತೆ ಹಣ ಪತ್ತೆಯಾಗಿದೆ. ಅಲ್ಲದೆ, ಬೆಳ್ಳಿ, ಬಂಗಾರ, ಸೀರೆ, ಆಸ್ತಿ ಪತ್ರಗಳು ಹಾಗೂ ವಿದೇಶಿ ಕರೆನ್ಸಿಗಳು ಸಹ ಪತ್ತೆಯಾಗಿವೆ. ಸದ್ಯ ಹಣದ ಮೂಲದ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪತ್ತೆಯಾಗಿರುವ ಹಣದ ಅಂದಾಜು ಮೊತ್ತ 1.5 ಕೋಟಿ ರೂ. ಎಂದು ತಿಳಿದುಬಂದಿದೆ. 2 ಕೋಟಿ ರೂಪಾಯಿಗೂ ಹೆಚ್ಚಿನ ವಸ್ತುಗಳು ಪತ್ತೆಯಾಗಿವೆ.

    ಇದನ್ನೂ ಓದಿ: ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿಕೆ

    ಚುನಾವಣ ಕರ್ತವ್ಯಕ್ಕೂ ನೇಮಕ

    ಗಂಗಾಧರಯ್ಯಗೆ ಸೇರಿದ ಒಟ್ಟು 3 ಕಡೆ ದಾಳಿಯಾಗಿದೆ. ಬೆಂಗಳೂರಿನ ಕುರುಬರಹಳ್ಳಿ, ಯಲಹಂಕ ಮತ್ತು ಮಹಾಲಕ್ಷ್ಮೀ ಲೇಔಟ್​ನಲ್ಲಿ ದಾಳಿಯಾಗಿದ್ದು, ಎಸ್ಪಿ ಅಶೋಕ್ ನೇತೃತ್ವದಲ್ಲಿ ಇದೀಗ‌ ಪರಿಶೀಲನೆ ನಡೆಯುತ್ತಿದೆ. ಗಂಗಾಧರಯ್ಯ ಚುನಾವಣೆಯ ಕರ್ತವ್ಯಕ್ಕೂ ಸಹ ನೇಮಕವಾಗಿದ್ದ. ಕಾರಿನ ಮೇಲೆ ಬ್ಯಾಟರಾಯನಪುರ ವಿಧಾನಸಭಾ‌ ಕ್ಷೇತ್ರದ ಸ್ಟಿಕ್ಕರ್ ಪತ್ತೆಯಾಗಿದೆ.

    ಅಕ್ರಮ ಆಸ್ತಿ ಗಳಿಕೆ ಆರೋಪ: ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

    ರೋಡ್​ ಶೋ ನಡೆಸಿ ರೆಸಾರ್ಟ್​ಗೆ ತೆರಳಿದ ರಾಹುಲ್​ ಗಾಂಧಿ! ಜತೆಗೆ ಯಾರೆಲ್ಲಾ ಇದ್ರು?

    ಒಂದೇ ಹುಡುಗನ ಜತೆ 3 ಬಾರಿ ಬಾಲಕಿ ಎಸ್ಕೇಪ್​! ಪಾಲಕರನ್ನು ಪರಿ ಪರಿಯಾಗಿ ಬೇಡಿಕೊಂಡ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts