More

    ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಆರಂಭ ?

    ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಬಸ್​ ಸಂಚಾರ ಆರಂಭ ಬಹುತೇಕ ನಿಗದಿಯಾಗಿದೆ.

    ರಾಜ್ಯ ಸರ್ಕಾರ ಭಾನುವಾರವೇ ಈ ಕುರಿತ ನಿರ್ಣಯ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ, ಕೇಂದ್ರದಿಂದ ಮಾರ್ಗಸೂಚಿ ಬಿಡುಗಡೆ ವಿಳಂಬವಾದ ಹಿನ್ನೆಲೆ ಸೋಮವಾರ, ಮಂಗಳವಾರಕ್ಕೆ ಅನ್ವಯವಾಗುವಂತೆ ಲಾಕ್​ಡೌನ್​ ವಿಸ್ತರಿಸಿತ್ತು. ಭಾನುವಾರ ಸಂಜೆ ಕೇಂದ್ರ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿ, ಅಂತರ ಜಿಲ್ಲಾ ಬಸ್​ ಸಂಚಾರಕ್ಕೆ ಆರಂಭಿಸುವ ಅವಕಾಶವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಎರಡೂ ರಾಜ್ಯಗಳು ಒಪ್ಪಿದರೆ, ಅಂತರರಾಜ್ಯ ಬಸ್​ ಸಂಚಾರವನ್ನು ಆರಂಭಿಸಬಹುದು ಎಂದು ಹೇಳಿದೆ.

    ಇದನ್ನೂ ಓದಿ; ಇನ್ನಷ್ಟು ಹತ್ತಿರವಾಯ್ತು ಮೌಂಟ್​ ಎವರೆಸ್ಟ್​…!

    ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಹಿರಿಯ ಸಚಿವರ ಸಭೆಯಲ್ಲಿ ಬಸ್​ ಸಂಚಾರ ನಿರ್ಧಾರ ಹೊರಬೀಳಲಿದೆ. ಸಭೆಯಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ. ಅಂತರರಾಜ್ಯ ಹೊರತುಪಡಿಸಿ ರಾಜ್ಯದಲ್ಲಿ ಮಾತ್ರ ಓಡಾಟಕ್ಕೆ ಗ್ರೀನ್ ಸಿಗ್ನಲ್ ದೊರೆಯಲಿದೆ.

    ಆದರೆ, ಮಹಾರಾಷ್ಟ್ರ, ತಮಿಳುನಾಡು,ಆಂಧ್ರಪ್ರದೇಶ, ಕೇರಳ, ತೆಲಂಗಾಣ ಗಡಿಭಾಗದ ಕನ್ನಡಿಗರು ಮತ್ತಷ್ಟು ದಿನ ಕಾಯಬೇಕಾಗುತ್ತದೆ. ಗಡಿ ರಾಜ್ಯಗಳಲ್ಲಿ ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಅಂತರರಾಜ್ಯ ಬಸ್ ಸಂಚಾರ ಇನ್ನಷ್ಟು ವಿಳಂಬವಾಗಲಿದೆ.

    ಅರ್ಥಿಕ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ಬಸ್ ಸಂಚಾರ ಆರಂಭಿಸಲೇಬೇಕಾಗಿದೆ. ಹೀಗಾಗಿ 56 ದಿನಗಳ ಬಳಿಕ ಸರ್ಕಾರಿ ಬಸ್​ಗಳು ರಸ್ತೆಗೆ ಇಳಿಯಲಿವೆ.

    ಕೋವಿಡ್​ ಕಾಲದಲ್ಲಿ ರೈಲಿನಲ್ಲಿ ಸಂಚರಿಸುವುದೆಂದರೆ ವಿದೇಶ ಪ್ರಯಾಣಕ್ಕಿಂತೇನೂ ಕಡಿಮೆಯಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts