More

    ದರ್ಶನಕ್ಕೆ ರೆಡಿ ಈ ಗೋವಿಂದ; ಏ. 16ಕ್ಕೆ ಸಿನಿಮಾ ಬಿಡುಗಡೆ

    ಬೆಂಗಳೂರು: ಚಿತ್ರದ ಶೀರ್ಷಿಕೆಯೇ ‘ಗೋವಿಂದ ಗೋವಿಂದ’ ಆಗಿರುವುದರಿಂದ ಜಾಗಟೆ ಸದ್ದಿನ ಮೂಲಕವೇ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಂತ್ ಶೈಲೇಂದ್ರ, ರೂಪೇಶ್ ಶೆಟ್ಟಿ, ಭಾವನಾ ಮೆನನ್ ಮತ್ತು ಕವಿತಾ ಗೌಡ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಹಾಡುಗಳ ಜತೆಗೆ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿದೆ. ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಸಿಕ್ಕಿದ್ದು, ಏ. 16ಕ್ಕೆ ಚಿತ್ರ ಬಿಡುಗಡೆ ಆಗಲಿದೆ. ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್ ಮತ್ತು ರವಿ ಗರಣಿ ಪೊ›ಡಕ್ಷನ್ಸ್ ಸಹಯೋಗದೊಂದಿಗೆ ಈ ಸಿನಿಮಾ ನಿರ್ವಣವಾಗಿದ್ದು, ಕಾಮಿಡಿ ಮತ್ತು ಥ್ರಿಲ್ಲರ್ ಕಥೆಯ ಜತೆಗೆ ‘ಗೋವಿಂದನ’ ದರ್ಶನವಾಗಲಿದೆ.

    ‘ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಅದರಲ್ಲಿ ‘ಮಾಡರ್ನ್ ಸುಪ್ರಭಾತ …’ ಹಿಟ್ ಆಗಿದೆ. ಇನ್ನುಳಿದ ಹಾಡುಗಳನ್ನು ಜನ ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಿದೆ’ ಎನ್ನುತ್ತಾರೆ ಸಂಗೀತ ನಿರ್ದೇಶಕ ಹಿತನ್. ನಿರ್ದೇಶಕ ತಿಲಕ್ ಚೊಚ್ಚಲ ಸಿನಿಮಾ ನಿರ್ದೇಶನದ ಖುಷಿ ಹಂಚಿಕೊಂಡರು. ಸುಮಂತ್, ರೂಪೇಶ್, ಕವಿತಾ ಗೌಡ ಪಾತ್ರದ ಬಗ್ಗೆ ಮಾತನಾಡಿದರು. ರಾಜಕಾರಣಿ ರಾಜಣ್ಣ, ನಿರ್ದೇಶಕ ಲಿಂಗದೇವರು ಚಿತ್ರಕ್ಕೆ ಶುಭ ಕೋರಿದರು. ಪುಷ್ಕರ್ ಫಿಲಂಸ್ ಹಾಡುಗಳ ಹಕ್ಕನ್ನು ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts