More

    ಸಂಸತ್​ ಬಿಕ್ಕಟ್ಟಿಗೆ ಸರ್ಕಾರದ ಸೊಕ್ಕಿನ ವರ್ತನೆ ಕಾರಣ: ವಿಪಕ್ಷ ನಾಯಕರು

    ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲಿ ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್​ ವಿಚಾರವಾಗಿ ಮತ್ತು ರೈತರ ಬಗೆಗೆ ಚರ್ಚೆ ನಡೆಯಬೇಕೆಂದು ಒತ್ತಾಯಿಸಿ, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಈ ಬಗ್ಗೆ ಚರ್ಚೆಯಾಗಬೇಕೆಂಬ ವಿಪಕ್ಷಗಳ ಬೇಡಿಕೆಯನ್ನು ಒಪ್ಪದೆ ಬಿಕ್ಕಟ್ಟು ಸೃಷ್ಟಿಸಿರುವ ಹೊಣೆಗಾರಿಕೆ ಸರ್ಕಾರದ್ದೇ ಆಗಿದೆ ಎಂದು ವಿಪಕ್ಷ ನಾಯಕರು ಹೇಳಿದ್ದಾರೆ.

    ರಾಷ್ಟ್ರೀಯ ಭದ್ರತೆಯ ಕುರಿತು ಕಳವಳ ಮೂಡಿಸಿರುವ ಪೆಗಾಸಸ್ ವಿಚಾರವನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚಿಸಬೇಕು. ರೈತರ ವಿಷಯ ಹಾಗೂ ಪ್ರತಿಭಟನೆಗಳನ್ನೆದುರಿಸುತ್ತಿರುವ ಮೂರು ಕೃಷಿ ಕಾನೂನುಗಳ ಕುರಿತು ಸಮಗ್ರ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ನೀಡಿರುವ ಹೇಳಿಕೆಗೆ, ರಾಜ್ಯಸಭೆಯ ವಿರೋಧಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್​ಸಿಪಿಯ ಶರದ್​ ಪವಾರ್​, ಕಾಂಗ್ರೆಸ್​ನ ಆನಂದ್​ ಶರ್ಮಾ, ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ಸಂಸದ ಡೆರೆಕ್ ಒಬ್ರೇನ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಆರ್​ಜೆಡಿಯ ಮನೋ ಝಾ ಮತ್ತಿತರರು ಸಹಿ ಹಾಕಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಆರು ಸಂಸದರು ರಾಜ್ಯಸಭಾ ಕಲಾಪದಿಂದ ಹೊರಕ್ಕೆ

    “ದುರದೃಷ್ಟಕರ ಸಂಗತಿಯೆಂದರೆ, ಸಂಯೋಜಿತ ಪ್ರತಿಪಕ್ಷದ ಹೆಸರನ್ನು ಕೆಡಿಸುವ ಮತ್ತು ಸಂಸತ್ತಿನಲ್ಲಿ ಮುಂದುವರಿದ ಅಡಚಣೆಗಾಗಿ ಅದನ್ನು ದೂಷಿಸುವ ದಾರಿತಪ್ಪಿಸುವಂತಹ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಈ ಬಿಕ್ಕಟ್ಟಿನ ಹೊಣೆಗಾರಿಕೆಯು ಸರ್ಕಾರದ ಬಾಗಿಲಲ್ಲಿದೆ. ಏಕೆಂದರೆ ಅದು ಸೊಕ್ಕು ಮತ್ತು ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಾ, ಉಭಯ ಸದನಗಳಲ್ಲಿ ಮಾಹಿತಿಯುಕ್ತ ಚರ್ಚೆಯಾಗಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಸ್ವೀಕರಿಸಲು ನಿರಾಕರಿಸುತ್ತಿದೆ” ಎಂದು ಜಂಟಿಹೇಳಿಕೆಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

    ಕುಸ್ತಿಯಲ್ಲಿ ಫೈನಲ್ಸ್​ ತಲುಪಿದ ರವಿ ಕುಮಾರ್​! ರಜತವಂತೂ ಖಚಿತ!

    ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಕಂಚು; ಸೋತರೂ ಗೆದ್ದ ಲವ್ಲೀನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts