More

    ಸರ್ಕಾರದಿಂದಲೇ ಕಾಗುಣಿತ ಪರೀಕ್ಷಕ, ಲಿಪ್ಯಂತರಣ ತಂತ್ರಾಂಶ, ಫಾಂಟ್ ರಚನೆ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನದ ಇ- ಆಡಳಿತ ಕೇಂದ್ರವು ಕನ್ನಡ ತಂತ್ರಾಂಶ ಕುರಿತಂತೆ ಮಹತ್ವದ ಸಾಹಸವೊಂದಕ್ಕೆ ಕೈಹಾಕಿದೆ. ಕನ್ನಡ ಕಾಗುಣಿತ ಪರೀಕ್ಷಕ ತಂತ್ರಾಂಶ, ಲಿಪ್ಯಂತರ ತಂತ್ರಾಂಶ ಹಾಗೂ ಸ್ವಂತ ಫಾಂಟ್ ಅಭಿವೃದ್ಧಿಪಡಿಸಲು ಮುಂದಾಗಿದ್ದು ಸೇವಾ ಪೂರೈಕೆದಾರರಿಗೆ ಆಹ್ವಾನ ನೀಡಿದೆ.

    ಕನ್ನಡ ಉಳಿಸಿ ಬೆಳೆಸಲು ಸರ್ಕಾರದ ಕಡೆಯಿಂದ ಕನ್ನಡ ತಂತ್ರಾಂಶಕ್ಕೆ ವಿಶೇಷ ಆದ್ಯತೆ, ಗಮನ ಕೊಡಬೇಕು ಎಂಬ ಕೂಗು ಬಲವಾಗಿತ್ತು. ಕನ್ನಡ ಕಾರ್ಯಕರ್ತರು, ಸಾಹಿತಿಗಳು, ಹೋರಾಟಗಾರರು ಈ ಬೇಡಿಕೆ ಇಟ್ಟಿದ್ದರು. ಅದಕ್ಕೆ ಪೂರಕವಾಗಿ 2019ರಿಂದ ಪ್ರಯತ್ನ ಆರಂಭವಾಗಿ ಈಗ ಮಹತ್ವದ ಘಟ್ಟ ತಲುಪಿದೆ.

    ಇ-ಕನ್ನಡ ಯೋಜನೆಯ ಭಾಗವಾಗಿ ಈ ಮೂರು ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಎರಡು ವರ್ಷ ಹಿಂದೆ ಮೈಸೂರಿನಲ್ಲಿ ಐಟಿ ಕನ್ನಡ ಕಾರ್ಯಕರ್ತರಿಗೆ ಕಮ್ಮಟ ಏರ್ಪಡಿಸಿ ಭಾಷೆ ಬಗ್ಗೆ ಆಗಬೇಕಾದ ಕೆಲಸಗಳ ಕುರಿತು ವಿಚಾರ ವಿನಿಯಮ ನಡೆಸಲಾಗಿತ್ತು. ಬಳಿಕ ಸಮಿತಿಗಳನ್ನು ಮಾಡಿ ಯೋಜನಾ ವರದಿ ಮಾಡಿಸಿಕೊಳ್ಳಲಾಗಿತ್ತು. ಇನ್ನೊಂದು ಸಮಿತಿಯಿಂದ ಪರಿವೀಕ್ಷಣೆ ಮಾಡಿಸಿ ಅಂತಿಮ ರೂಪ ಕೊಡಲಾಗಿದೆ.

    ಯಾರಿಗಾಗಿ ಇದು?

    ಸರ್ಕಾರದ ಬಳಕೆಯ ಜತೆಗೆ ಇದು ಸಮುದಾಯದ ಬಳಕೆಗೂ ಅವಕಾಶ ದೊರೆಯುವಂತೆ ರೂಪು ನೀಡಲಾಗಿದೆ. ಓಪನ್ ಸೋರ್ಸ್ ಮಾದರಿಯಲ್ಲಿ ಮುಕ್ತತೆ ನೀಡುವ ಉದ್ದೇಶವನ್ನೂ ಹೊಂದಲಾಗಿದೆ. ಕನ್ನಡ ಐಟಿ ಕಾರ್ಯಕರ್ತರನ್ನು ಒಳಗೊಂಡು ಸಮುದಾಯವನ್ನು ಭಾಗ ಮಾಡಿಕೊಂಡು ಸರ್ಕಾರ ರೂಪಿಸುತ್ತಿರುವ ಪ್ರಯತ್ನ ಇದಾಗಿದೆ. ಪ್ರಸ್ತುತ ಕೊಟೇಶನ್ ಕರೆದು ತನ್ನ ಅಪೇಕ್ಷೆಯನ್ನು ತಂತ್ರಜ್ಞರ ಮುಂದೆ ಇಡಲಾಗಿದೆ.

    ಸರ್ಕಾರದಿಂದಲೇ ಕಾಗುಣಿತ ಪರೀಕ್ಷಕ, ಲಿಪ್ಯಂತರಣ ತಂತ್ರಾಂಶ, ಫಾಂಟ್ ರಚನೆಕನ್ನಡ ತಂತ್ರಾಂಶಕ್ಕೆ ವಿಶೇಷ ಆದ್ಯತೆ, ಗಮನ ಕೊಡಬೇಕು ಎಂಬ ಅಪೇಕ್ಷೆ ಇತ್ತು. ಸಮುದಾಯವನ್ನು ಸೇರಿಸಿಕೊಂಡು ಅವರ ಸಲಹೆಗಳನ್ನು ಪಡೆದು ಈಗ ಒಂದು ರೂಪಕ್ಕೆ ಬಂದಿದೆ. ಕನ್ನಡದ ಬಗ್ಗೆ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.

    | ಸುದರ್ಶನ ಬೇಳೂರು ಮುಖ್ಯಮಂತ್ರಿಯವರ ಸಲಹೆಗಾರರು (ಇ-ಆಡಳಿತ)

    1. ಕಾಗುಣಿತ ಪರೀಕ್ಷಕ

    ಕನ್ನಡ ಕಾಗುಣಿತ ಪರೀಕ್ಷಗಳು ಒಂದಷ್ಟಿವೆ. ಖಾಸಗಿ ಸಂಸ್ಥೆಗಳು ಮಾಡಿಕೊಂಡಿವೆ. ಆದರೆ, ಓಪನ್ ಸೋರ್ಸ್ ಆಗಿಲ್ಲ. ಸರ್ಕಾರದ್ದೇ ಒಂದು ಪರೀಕ್ಷಕದ ಅವಶ್ಯಕತೆ ಇದ್ದರೆ ಒಂದು ಸ್ಟ್ಯಾಂಡರ್ಡ್ ಇರಲಿದೆ ಮತ್ತು ಸಾರ್ವಜನಿಕರಿಗೂ ಮುಕ್ತವಾಗಿ ಬಳಸುವಂತಿರಬೇಕೆಂಬ ಅಪೇಕ್ಷೆ ಮೇಲೆ ಇದನ್ನು ಸಿದ್ಧಪಡಿಸಲಾಗುತ್ತಿದೆ.

    ಈ ತಂತ್ರಾಂಶವು ಯೂನಿಕೋಡ್ ಆಧಾರಿತವಾಗಿರಬೇಕು, ಪರೀಕ್ಷಕವು ಆಕರ ದತ್ತ ಸಂಚಯದಲ್ಲಿ ಮೂಲಪದಗಳ ರೂಪಗಳನ್ನು ಶೇಖರಿಸಬೇಕು, ಕಾಗುಣಿತ ಪರೀಕ್ಷಕವು ತನ್ನ ಆಕರ ದತ್ತ ಸಂಚಯದಲ್ಲಿ ಶೇಖರಿಸಿದ ಮೂಲಪದಗಳು ಕನ್ನಡದ ಪದ ರಚನಾ (ಮಾರ್ಫಲಾಜಿಕಲ್) ನಿಯಮಗಳನ್ನು ಅನುಸರಿಸಿ ಹೇಗೆ ವಿವಿಧ ರೂಪಗಳನ್ನು ತಳೆಯುತ್ತವೆ ಎಂಬುದನ್ನು ಆಧರಿಸಿ ಅದರ ಆಧಾರದ ಮೇಲೆ ಪದಗಳ ಕಾಗುಣಿತಗಳನ್ನು ಪರೀಕ್ಷಿಸಬೇಕು, ತಪ್ಪೆನಿಸಿದ ಪದ ರೂಪಗಳನ್ನು ಸರಿಪಡಿಸಲು ಸಲಹೆ ನೀಡಬೇಕು ಎಂಬಿತ್ಯಾದಿ ಷರತ್ತುಗಳನ್ನು ಸೇವಾದಾರರಿಗೆ ಹಾಕಲಾಗಿದೆ.

    ಉದ್ದೇಶಿತ ತಂತ್ರಾಂಶವನ್ನು ಬಳಸಲು ಒಂದು ವೆಬ್ ಆಧಾರಿತ ಇಂಟರ್ ಫೇಸ್ ನಿರ್ಮಾಣ ಮಾಡುವುದು, ಬಳಕೆದಾರರಿಗೂ ಹೊಸ ಪದಗಳನ್ನು ಆಕರ ದತ್ತ ಸಂಚಯಕ್ಕೆ ಸೇರಿಸುವ (ಆ್ಯಡ್ ಟು ಡಿಕ್ಷನರಿ) ಆಯ್ಕೆ ಒದಗಿಸಲು ಅವಕಾಶ ನೀಡುವುದು, ಪ್ರಚಲಿತ ಸರ್ಕಾರಿ ತಂತ್ರಾಂಶಗಳಲ್ಲಿ ಉದ್ದೇಶಿತ ಕಾಗುಣಿತ ಪರೀಕ್ಷಕ ತಂತ್ರಾಂಶವನ್ನು ಬಳಸುವಂತೆ ‘ರೆಸ್ಟ್ ಎಪಿಐ’ ನಿರ್ವಿುಸಿ ಮತ್ತು ಅದರ ಸೋರ್ಸ್ ಕೋಡ್ ಎಲ್ಲದರ ಒಡೆತನವನ್ನೂ ಸರ್ಕಾರವು ಹೊಂದಲಿದೆ.

    2. ಬುಕ್ ಫಾಂಟ್

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಹಿಂದೆ ಫಾಂಟ್​ಗಳು ರಚನೆಯಾಗಿತ್ತು. ಆದರೆ, ಅದರ ಬಳಕೆ ಹೆಚ್ಚಾಗಲಿಲ್ಲ. ಜತೆಗೆ ಅವು ಅಲಂಕಾರಿಕ ಫಾಂಟ್​ಗಳಾದವಷ್ಟೆ. ಹೆಡ್ಡಿಂಗ್​ಗೆಂದು ಯಾರೂ ಫಾಂಟ್ ಕಾಪಿಟ್ಟುಕೊಂಡಿರಲ್ಲ. ಬುಕ್ ಫಾಂಟ್ ರಚಿಸಿದರೆ ಹೆಚ್ಚೆಚ್ಚು ಬಳಕೆಯಾಗುತ್ತದೆ ಮತ್ತು ಅದರ ಅಗತ್ಯತೆ ಇದೆ, ಪ್ರಸ್ತುತ ಏಕರೂಪತೆಯೂ ಇಲ್ಲ ಎಂಬ ಕಾರಣಕ್ಕೆ ಸರ್ಕಾರಕ್ಕೇ ಒಂದು ಬುಕ್ ಫಾಂಟ್ ರಚಿಸಲು ಆಸಕ್ತಿ ವಹಿಸಲಾಗಿದೆ.

    3. ಲಿಪ್ಯಂತರಣ

    ಲಿಪ್ಯಂತರಣದಲ್ಲಿ ಮಹತ್ವದ ಅಪೇಕ್ಷೆ ಇಟ್ಟುಕೊಂಡು ತಂತ್ರಜ್ಞಾನ ಸಿದ್ಧವಾಗಬೇಕೆಂದು ಬಯಸಲಾಗಿದೆ. ಲಿಪ್ಯಂತರಣವು ಕನಿಷ್ಠ ಕನ್ನಡ, ರೋಮನ್, ದೇವನಾಗರಿ, ತೆಲುಗು ಮತ್ತು ಮಲಯಾಳಂ ಸೇರಿ ಪ್ರಮುಖ ಲಿಪಿಗಳನ್ನು ಪರಸ್ಪರ ಲಿಪ್ಯಂತರಿಸುವಂತೆ ರೂಪಿಸಲು ಬಯಸಲಾಗಿದೆ.

    ಕನ್ನಡದಿಂದ ಅಂತಆರಾಷ್ಟ್ರೀಯ ಧ್ವನಿ ಸಂಕೇತ (ಇಂಟರ್​ನ್ಯಾಷನಲ್ ಫೋನೆಟಿಕ್ ಆಲ್ಫಾಬೆಟ್) ಹಾಗೂ ಐಎಸ್​ಒ 15919 ಅಂತಾರಾಷ್ಟ್ರೀಯ ಪ್ರಮಾಣಕ ರೋಮನ್ ಲಿಪ್ಯಂತರಣವನ್ನೂ ಲಿಪ್ಯಂತರಿ ತಂತ್ರಾಂಶವು ಬೆಂಬಲಿಸುವಂತಿರಬೇಕೆಂಬ ಕಲ್ಪನೆ ಹೊಂದಲಾಗಿದೆ. ಪ್ರಸ್ತುತ ಖಾಸಗಿಯವರು ಬಳಸುವ ಲಿಪ್ಯಂತರಣ ಹೊರತಾಗಿ ಹೊಸ ದೃಷ್ಟಿಕೋನ, ಆಯಾಮದಲ್ಲಿ ರೂಪಿಸುವ ಗುರಿಹೊಂದಲಾಗಿದೆ.

    ‘ಬೆಳಗಾವಿ ಕರ್ನಾಟಕದ್ದೇ, ಇಲ್ಲಿಯ ಮೂಲಭಾಷೆ ಕನ್ನಡವೇ’: ಸಿಕ್ಕಿದೆ ಬ್ರಿಟಿಷರ ಕಾಲದ ಮತ್ತೊಂದು ಮಹತ್ವದ ಕನ್ನಡ ದಾಖಲೆ

    ಸ್ಟೇಟಸ್ ಹಾಕೋ ಮುನ್ನ ಯೋಚಿಸಿ; ರೌಡಿಶೀಟರ್, ಕಮ್ಯುನಲ್ ಗೂಂಡಾ ಕೇಸ್ ಬಿದ್ದೀತು ಎಚ್ಚರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts