More

    ಸರ್ಕಾರಿ ಶಾಲೆಗಳ ಜಾಗ ಹದ್ದುಬಸ್ತಿಗೆ ಕ್ರಮ: ತಾಪಂ ಸಾಮಾನ್ಯ ಸಭೆ ನಿರ್ಣಯ

    ದಾವಣಗೆರೆ: ತಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಜಾಗ ಹದ್ದುಬಸ್ತಿಗಾಗಿ ತಹಸೀಲ್ದಾರ್ ಅವರಿಗೆ ಪಟ್ಟಿ ಕಳುಹಿಸಲು ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯ ಸಾಮಾನ್ಯ ಸಭೆ ನಿರ್ಣಯಿಸಿದೆ.

    ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಸರ್ಕಾರಿ ಶಾಲೆಗಳ ಜಾಗದ ದಾಖಲಾತಿ ಕುರಿತು ದಕ್ಷಿಣವಲಯದ ಬಿಇಒ ಉಷಾಕುಮಾರಿ ನೀಡಿದ ಪಟ್ಟಿಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

    ಆಲೂರು ಶಾಲೆಯಲ್ಲಿ 8 ಎಕರೆ ಜಾಗವಿರುವುದಾಗಿ ತೋರಿಸಲಾಗಿದೆ. ಅಲ್ಲಿರುವುದೇ 2 ಎಕರೆ. ಹಿಂದೆಯೂ ಸಭೆಯ ಗಮನ ಸೆಳೆಯಲಾಗಿತ್ತು ಎಂದು ಸದಸ್ಯ ಆಲೂರು ನಿಂಗರಾಜ್ ಹೇಳಿದರು. ಪರಶುರಾಮಪುರ ಶಾಲೆ ಕಟ್ಟಡದ ವಿಚಾರದಲ್ಲೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್‌ನಾಯ್ಕ ಆಕ್ಷೇಪಿಸಿದರು.

    ಕಾಡಜ್ಜಿಯ ಅನುದಾನಿತ ಪ್ರೌಢಶಾಲೆಯಲ್ಲಿ ಶೌಚಗೃಹ ಇಲ್ಲದೆ ವಿದ್ಯಾರ್ಥಿನಿಯರು ತೋಟದತ್ತ ಹೋಗುತ್ತಿದ್ದಾರೆ. ಪರಿಶೀಲಿಸಲು ಆಗದಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡಿ. ತಾಪಂ ಸಭೆಗೆ ಬರಬೇಡಿ ಎಂದೂ ತರಾಟೆಗೆ ತೆಗೆದುಕೊಂಡರು. ಆ ಶಾಲೆಯ ಶಿಕ್ಷಕರ ಸಂಬಳ ತಡೆಹಿಡಿಯುವಂತೆ, ಶೌಚಗೃಹ ಒದಗಿಸಲು ಎಸ್‌ಡಿಎಂಸಿಗೆ ಪತ್ರ ಬರೆಯುವಂತೆ ಇಒ ದಾರುಕೇಶ್ ಸೂಚಿಸಿದರು.

    ಪ್ರಿಪರೇಟರಿಗೂ ಬೇರೆ ಪರೀಕ್ಷಾ ಕೇಂದ್ರ
    ಈ ಬಾರಿಯ ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ನಡೆಯಲಿದೆ. ವಿದ್ಯಾರ್ಥಿಗಳು ಗುರುತಿಸಲಾದ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಬರೆಯಬೇಕಿದೆ. ಉತ್ತರಪತ್ರಿಕೆಗಳನ್ನು ಬೇರೆ ಶಾಲೆಯವರು ಮೌಲ್ಯಮಾಪನ ಮಾಡಲಿದ್ದಾರೆ. ಪರೀಕ್ಷಾ ಭಯ ಹೋಗಲಾಡಿಸಲು ಶಿಕ್ಷಣ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಬಿಇಒ ಬಿ.ಸಿ. ಸಿದ್ದಪ್ಪ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts