More

    ನಾಳೆಯಿಂದ ಸರ್ಕಾರಿ ಕಚೇರಿಗಳ ಸಮಯದಲ್ಲಿ ಬದಲಾವಣೆ; ಯಾವ್ಯಾವ ಜಿಲ್ಲೆಗೆ ಎಷ್ಟು ದಿನ ಅನ್ವಯ? ಇಲ್ಲಿದೆ ಮಾಹಿತಿ..

    ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆ ತೀವ್ರಗೊಳ್ಳುತ್ತಿದ್ದು, ಇದು ಸರ್ಕಾರಿ ಕಚೇರಿಗಳ ದೈನಂದಿನ ವೇಳಾಪಟ್ಟಿ ಮೇಲೂ ಪರಿಣಾಮ ಬೀರಿದೆ. ಅರ್ಥಾತ್, ಬಿಸಿಲಿನ ಬೇಗೆ ಹಿನ್ನೆಲೆಯಲ್ಲಿ ಇದೀಗ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಸಮಯವೂ ಬದಲಾಗಲಿದ್ದು, ನಾಳೆಯಿಂದಲೇ ಜಾರಿ ಆಗಲಿದೆ.

    ಬಿಸಿಲಿನ ತಾಪಮಾನ ಗರಿಷ್ಠಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕಲಬುರಗಿ ವಿಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಆಗಲಿದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಈ ಮೇಲಿನ ಜಿಲ್ಲಾ ವ್ಯಾಪ್ತಿಗಳ ಸರ್ಕಾರಿ ಕಚೇರಿಗಳು ಏ.12ರಿಂದ ಮೇ 31ರ ವರೆಗೆ ಬದಲಾದ ವೇಳಾಪಟ್ಟಿ ಪ್ರಕಾರ ಕೆಲಸ ನಿರ್ವಹಿಸಲಿವೆ. ಅಂದರೆ ಇಲ್ಲಿನ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬೆಳಗ್ಗೆ 8ರಿಂದ ಮಧ್ಯಾನ 1.30ರ ವರೆಗೆ ಮಾತ್ರ ಇರಲಿವೆ. ಆದರೆ ಕರೊನಾ ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನದಂತೆ ಕೆಲಸ ನಿರ್ವಹಿಸಬೇಕು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎಸ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

    ದೇವರ ಜಮೀನಿಗೆ ಕನ್ನ: ದೇಗುಲಗಳಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಭೂಮಿ ಒತ್ತುವರಿ

    ಕೆಲಸದ ಒತ್ತಡ ತಾಳಲಾಗುತ್ತಿಲ್ಲ… ಸಾಯದೇ ದಾರಿ ಇಲ್ಲ… ಡೆತ್​ನೋಟ್​ ಬರೆದು ಬ್ಯಾಂಕ್​ ಮ್ಯಾನೇಜರ್​ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts