More

    ಏರ್​ ಇಂಡಿಯಾದಲ್ಲಿನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಏರ್​ ಇಂಡಿಯಾದಲ್ಲಿನ ತನ್ನ ಬಹುತೇಕ ಪಾಲನ್ನು 2018ರಲ್ಲಿ ಒಂದೇ ಹರಾಜಿನಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ವಿಫಲವಾಗಿತ್ತು. ಇದೀಗ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಸರ್ಕಾರ ಮತ್ತೊಮ್ಮೆ ಯೋಜನೆ ರೂಪಿಸಿದೆ.

    ಏರ್​ ಇಂಡಿಯಾದ ಮೇಲೆ ಒಲವು ಹೊಂದಿರುವವರು ದಾಖಲೆ ಸಲ್ಲಿಸಲು ಕೇಂದ್ರ ಸರ್ಕಾರ ಸೋಮವಾರ ಬಿಡ್ ಆಹ್ವಾನಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳೆರಡರಲ್ಲೂ ಸಂಚರಿಸುವ ಏರ್​ ಇಂಡಿಯಾದಲ್ಲಿನ ಶೇ 100 ರಷ್ಟು ಪಾಲನ್ನು ಭಾರತವು ಮಾರಾಟ ಮಾಡಲಿದೆ ಎಂದು ಸರ್ಕಾರ ತಿಳಿಸಿದೆ.

    ದಾಖಲಾತಿ ಸಲ್ಲಿಸಲು ಮಾರ್ಚ್​ 17ರವರೆಗೆ ಗಡುವು ನೀಡಿದ್ದು, ಯಾವುದೇ ಹರಾಜುದಾರ ಇತರೆ ಜವಾಬ್ದಾರಿಗಳೊಂದಿಗೆ 3.26 ಬಿಲಯನ್​ ಡಾಲರ್ ಸಾಲದಲ್ಲಿರುವ ಏರ್​ ಇಂಡಿಯಾವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.

    ಕೇಂದ್ರ ಸರ್ಕಾರ 2018ರಲ್ಲಿ ಏರ್​ ಇಂಡಿಯಾದಲ್ಲಿರುವ ತನ್ನ ಪಾಲಿನ ಶೇ 76 ರಷ್ಟನ್ನು ಮಾರಾಟ ಮಾಡಲು ಮುಂದಾಗಿತ್ತು. ಅಲ್ಲದೆ, ಆ ಸಮಯದಲ್ಲಿ ಏರ್​ ಇಂಡಿಯಾ 5.1 ಬಿಲಿಯನ್​ ಡಾಲರ್​ ಸಾಲದ ಸುಳಿಯಲ್ಲಿತ್ತು. ಆ ಸಮಯದಲ್ಲಿ ಖರೀದಿದಾರರ ಸಂಭವನೀಯತೆ ಕಡಿಮೆ ಎಂದು ತಿಳಿದು ವಾಪಸ್​ ಬಳಿಕ ಪಡೆದುಕೊಂಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts