More

    ಸರ್ಕಾರದ ನಿರ್ಲಕ್ಷೃಕ್ಕೆ ಖಂಡನೆ

    ಅಥಣಿ: ಕೇಂದ್ರ ಸರ್ಕಾರ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಆದೇಶಿಸಿದ್ದರೂ ರಾಜ್ಯಸರ್ಕಾರ ಎಸ್‌ಟಿ ಪ್ರಮಾಣ ಪತ್ರ ವಿತರಿಸದೆ ವಿಳಂಬ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿ ಶಿರಹಟ್ಟಿ ಗ್ರಾಮದ ತಳವಾರ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಪತ್ರ ಚಳವಳಿ ನಡೆಸಿದರು.

    ಸಮುದಾಯದ ತಾಲೂಕು ಸಮಿತಿ ಅಧ್ಯಕ್ಷ ರಾಜು ಜಮಖಂಡಿಕರ ಮಾತನಾಡಿ, ಈಗಾಗಲೆ ರಕ್ತದಿಂದ ಬರೆದ ಪತ್ರಗಳನ್ನು ಜನಪ್ರತಿನಿಧಿಗಳು ತಹಸೀಲ್ದಾರ್‌ಗೆ ಸಲ್ಲಿಸಿದ್ದೇವೆ. ಸರ್ಕಾರ ಶೀಘ್ರ ಸ್ಪಂದಿಸದಿದ್ದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಸುನೀತಾ ಈಟಿ ಮಾತನಾಡಿ, ತಾಲೂಕಿನಲ್ಲಿ ಅಂದಾಜು 15 ಸಾವಿರಕ್ಕೂ ಹೆಚ್ಚು ತಳವಾರ ಸಮುದಾಯಕ್ಕೆ ಸೇರಿದ ಕುಟುಂಬಗಳಿವೆ. ಮೊದಲ ಹಂತದಲ್ಲಿ ಶಿರಹಟ್ಟಿ ಗ್ರಾಮದಿಂದ ಚಳವಳಿ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿಯಲ್ಲಿರುವ ತಳವಾರ ಸಮುದಾಯ ದವರನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2 ಸಾವಿರ ಪತ್ರ ಕಳುಹಿಸಲಾಗುವುದು. ನಮ್ಮ ಹೋರಾಟ ನಿಲ್ಲದು ಎಂದರು.

    ಮುಖಂಡ ತಮ್ಮಣ ಮೀಶಿ ಮಾತನಾಡಿ, ಸರ್ಕಾರದ ನಿರ್ಲಕ್ಷೃದಿಂದ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹನುಮಂತ ಮೀಸಿ, ಬಸಪ್ಪ ಸನದಿ, ಉಮೇಶ ಕೋಳಿ, ಮೋಹನ ಸಲಗರ, ರಾಯಪ್ಪ ತಳವಾರ, ರಮೆಶ ತಳವಾರ, ಸುನೀಲ ಕೋರಿಕಾಯಿ, ಕುಮಾರ ಇದ್ದರು.

    ಅನುದಾನ ಬಿಡುಗಡೆ ಮಾಡಿ: ಅಥಣಿ ಪಟ್ಟಣದ ಗವಿಸಿದ್ದ ಮಡ್ಡಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಯ ಮೇಲ್ಛಾವಣಿ ಹಾಳಾಗಿದ್ದು, ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಎಸ್‌ಡಿಎಂಸಿ ಅಧ್ಯಕ್ಷ ಶ್ರೀಶೈಲ ಹಳ್ಳದಮಳ, ಶಿಕ್ಷಕರು ಶಾಸಕ ಮಹೇಶ ಕುಮಠಳ್ಳಿಗೆ ಮನವಿ ಸಲ್ಲಿಸಿದರು. ಶಾಸಕ ಕುಮಠಳ್ಳಿ, ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು. ವಿ.ಸಿ.ಉಪ್ಪಾರ, ಬಿ.ಎಂ.ಕನಾಳ, ಎಸ್.ಎಚ್.ಕೊಟಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts