More

    ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆಯಿರಿ

    ರಾಮದುರ್ಗ: ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮೋದಿ ಅವರು ಜಾರಿಗೆ ತಂದ ಬೇಟಿ ಬಚಾವೋ- ಬೇಟಿ ಪಢಾವೋ ಆಂದೋಲನಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕಿ ವೈಶಾಲಿ ಕುಲಕರ್ಣಿ ಹೇಳಿದ್ದಾರೆ.

    ಪಟ್ಟಣದ ಪುರಸಭೆಯಲ್ಲಿ ಡೇ-ನಲ್ಮ್ ಯೋಜನೆ ಹಾಗೂ ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ಈಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಡೇ-ನಲ್ಮ್ ಯೋಜನೆಯ ಸಮುದಾಯ ಸಂಘಟನಾಧಿಕಾರಿ ಮಧು ಕೌಜಲಗಿ, ಪುರಸಭೆ ವ್ಯವಸ್ಥಾಪಕಿ ಉಮಾದೇವಿ ಸವಣೂರ ಮಾತನಾಡಿದರು. ಸ್ವ-ಸಹಾಯ ಸಂಘಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿನಿಧಿಗಳನ್ನು, ಬೀದಿ ಬದಿ ವ್ಯಾಪಾರಿಗಳ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಸ್ವ-ಸಹಾಯ ಸಂಘದ ಸದಸ್ಯರಾದ ಸುಭದ್ರಾ ನಂದಿ, ಲಲಿತಾ ಕಾಟೂಕರ, ಗೀತಾ ಬೆನ್ನೂರ, ಸೌಮ್ಯಾ ಕಡ್ಡಿ, ವಿಜಯಲಕ್ಷ್ಮೀ ಗಂಜ್ಯಾಳ ಸೇರಿ ಹಲವರು ವೀರರಾಣಿ ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ಮತ್ತಿತರ ಮಹಿಳಾ ಸಾಧಕಿಯರ ವೇಷದಲ್ಲಿ ರಾರಾಜಿಸಿದರು. ಮೀನಾಕ್ಷಿ ಬಲಕುಂದಿ, ಗೀತಾ ಖಾನಪೇಠ ನಿರೂಪಿಸಿದರು.

    ಕಟಕೋಳ ವರದಿ: ಮಹಿಳೆ ಪ್ರತಿ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆಯುವ ಮೂಲಕ ಗೌರವಕ್ಕೆ ಪಾತ್ರಳಾಗಿದ್ದಾಳೆ ಎಂದು ಕಸ್ತೂರಿ ಬಾ ವಸತಿ ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ತಾರಿಬಾಗಿಲ ಹೇಳಿದ್ದಾರೆ. ಸ್ಥಳೀಯ ಎಸ್‌ಎಸ್‌ಎಸ್‌ವಿ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಉಡುಗೆ ತೊಡುಗೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾಂಸ್ಕೃತಿಕ ಹಾಗೂ ಧಾರ್ಮಿಕವಾಗಿ ಭಾರತ ಇಂದು ವಿಶ್ವ ಗುರುವಾಗಿದೆ. ಆದರೆ, ಭಾರತೀಯರು ಇಂದು ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿ, ಪರಂಪರೆ ಮರೆಯುತ್ತಿರುವುದು ಬೇಸರದ ವಿಚಾರ. ಈ ವಿಚಾರ ಬದಲಾಗಬೇಕು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಗೌರವಿಸುವ ಕಾರ್ಯವಾಗಬೇಕು ಎಂದರು.

    ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸಿ.ಎಸ್.ಹೊರಕೇರಿ, ಕವಿವ ಸಮಿತಿ ಅಧ್ಯಕ್ಷ ಎ.ಸಿ.ಸುರಗ, ಪ್ರಾಚಾರ್ಯ ಎಸ್.ಎಂ.ಹುದ್ದಾರ, ಮಹಿಳಾ ಘಟಕದ ಉಪಾಧ್ಯಕ್ಷೆ ಭಾರತಿ ತೆಗ್ಯಾಳ, ಕಾವ್ಯಾ ಅಂಗಡಿ, ಮಹಾದೇವಿ ಹೊರಟ್ಟಿ, ನಾಗರತ್ನಾ ಹಿರೂರ, ಕಾವ್ಯಾ ವಾಜಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts