More

    ರಾಷ್ಟ್ರಧ್ವಜಕ್ಕೆ ಅವಮಾನ; ಪ್ರಶ್ನಿಸಿದ್ದಕ್ಕೆ ಸಂಬಂಧಿತರಿಂದ ಬೇಕಾಬಿಟ್ಟಿ ಉತ್ತರ!

    ಹಾವೇರಿ: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಲ್ಲದೆ, ಅದನ್ನು ಪ್ರಶ್ನಿಸಿದ್ದಕ್ಕೆ ಬೇಕಾಬಿಟ್ಟಿ ಉತ್ತರಿಸಿ ಉಡಾಫೆ ತೋರಿದ ಪ್ರಸಂಗವೊಂದು ನಡೆದಿದೆ. ಹಾವೇರಿ ತಾಲೂಕು ಪಂಚಾಯಿತಿಯ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

    ಭಾರತ ರತ್ನ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನಲೆಯಲ್ಲಿ ಇಂದು ಮತ್ತು ನಾಳೆ ಶೋಕಾಚರಣೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವ ಬದಲು ಪೂರ್ಣಪ್ರಮಾಣದಲ್ಲಿ ಏರಿಸಿದ್ದ ತಾಲೂಕು ಪಂಚಾಯತ್ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ.

    ಇದನ್ನು ಪ್ರಶ್ನಿಸಿದ್ದಕ್ಕೆ ಕೂಡಲೇ ಧ್ವಜ ಇಳಿಸಿ ಕೋಣೆಗೆ ಕೊಂಡೊಯ್ದ ವ್ಯಕ್ತಿ, ಬಳಿಕ ಧ್ವಜ ಇಳಿಸಲು ಇನ್ನೂ ಸಮಯ ಬಾಕಿ ಇರುವುದರಿಂದ ವಾಪಸ್ ಬಂದು ಅದನ್ನು ಮತ್ತೆ ಏರಿಸಿದ್ದಾನೆ. ಹೇಗೆ ಬೇಕೋ ಹಾಗೆ ಹಾರಿಸುವ ಮೂಲಕ ಸಿಬ್ಬಂದಿ ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದಾನೆ.
    ಸಿಬ್ಬಂದಿಯ ಈ ನಡೆ ಕುರಿತು ಮಾಹಿತಿ ಕೇಳಿದರೆ ಇಒ ಬಸವರಾಜ್ ಹಾಗೂ ಮ್ಯಾನೇಜರ್ ರಮೇಶ್ ಅಕ್ಕಿ ಎಂಬ ಅಧಿಕಾರಿಗಳು ಮೊದಲಿಗೆ ಅಸಡ್ಡೆಯಿಂದ ಉತ್ತರಿಸಿದ್ದು, ನಂತರ ತಪ್ಪು ಒಪ್ಪಿಕೊಂಡು ಒಬ್ಬರ ಮೇಲೊಬ್ಬರು ಹಾರಿಕೆಯ ಉತ್ತರ ನೀಡಿದ್ದಾರೆ.

    ಅಂಗೈಯಲ್ಲೇ ದೇವಾಲಯ ದರ್ಶನ; ಮುಜರಾಯಿ ಇಲಾಖೆ ದೇಗುಲಗಳಿಗೆ ಡಿಜಿಟಲ್ ಸ್ಪರ್ಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts