More

    ಬೆಂಗಳೂರಲ್ಲಿ 215 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರಲಿದೆ ತ್ರಿವರ್ಣ ದ್ವಜ!

    ಬೆಂಗಳೂರು: ದೇಶಾದ್ಯಂತ ಗಣರಾಜ್ಯೋತ್ಸವಕ್ಕೆ ತಯಾರಿ ನಡೆದಿದ್ದು, ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಈ ಬಾರಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಮೆರಗು ನೀಡಲಿದೆ ವಿಜಯನಗರದ ಚಂದ್ರಾಲೇಔಟ್​ನಲ್ಲಿ ಸ್ಥಾಪನೆಯಾಗುತ್ತಿರುವ ಅತಿ ಎತ್ತರದ ಧ್ವಜಸ್ತಂಭ.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ವೇಳಾ ಪಟ್ಟಿ ಪ್ರಕಟ: ಯಾವ ದಿನ ಯಾವ ವಿಷಯ? ವಿವರ ಇಲ್ಲಿದೆ..

    ಪ್ರಸ್ತುತ ರಾಜಭವನದ ಬಳಿಯಿರುವ ರಾಷ್ಟ್ರೀಯ ಸೇನಾ ವಸ್ತುಸಂಗ್ರಹಾಲಯದ ಆವರಣದ 213 ಅಡಿ ಎತ್ತರದ ಧ್ವಜಸ್ತಂಭವಿದ್ದು, ಇದರಲ್ಲಿ ತಿರಂಗಾ ಹಾರುತ್ತಿರುತ್ತದೆ. ಇದರ ಜತೆಗೆ ಇದನ್ನೂ ಮೀರಿದ ಧ್ವಜಸ್ತಂಭ ವಿಜಯನಗರದ ಚಂದ್ರಾಲೇಔಟ್‌ನಲ್ಲಿ ಸ್ಥಾಪನೆಯಾಗುತ್ತಿದೆ.
    ಚಂದ್ರಾಲೇಔಟ್​ನಲ್ಲಿ 215 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪನೆಯಾಗುತ್ತಿದೆ. ಬೆಂಗಳೂರಿನಲ್ಲಿ ಇದು ಈ ಸಲ ಗಣರಾಜ್ಯೋತ್ಸವದ ಆಕರ್ಷಣೆಯಾಗಿರಲಿದೆ. ಈ ಅತಿ ಎತ್ತರದ ಧ್ವಜ ಸ್ತಂಭ ಸ್ಥಾಪಿಸುವ ಯೋಜನೆಯ ಗುತ್ತಿಗೆದಾರ ಹೇಮಂತ್ ಈ ಕುರಿತು ಮಾಹಿತಿ ನೀಡಿದ್ದಾರೆ.

    ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಈ ಧ್ವಜ ಸ್ತಂಭಕ್ಕೆ ಹಣಕಾಸು ನೆರವು ನೀಡಿದ್ದಾರೆ. ಇದು 210 ಅಡಿ ಎತ್ತರ ಇರಲಿದ್ದು, ಅದರ ಮೇಲೆ 5 ಅಡಿ ಅಶೋಕ ಚಕ್ರದ ಲಾಂಛನ ಇರಲಿದೆ. ಕಳೆದ ಡಿಸೆಂಬರ್‌ನಲ್ಲಿ 19 ಟನ್ ತೂಕದ ಕಂಬ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಕ್ರೇನ್ ಬಳಸಿ ಇದನ್ನು ನಿರ್ಮಿಸಲಾಯಿತು. ಧ್ವಜದ ಕಂಬದ ಸುತ್ತಲೂ ಕಾಂಕ್ರೀಟ್ ಮೆಟ್ಟಿಲುಗಳು ಇರಲಿದ್ದು, ಪ್ರಸ್ತುತ ಇದು ನಿರ್ಮಾಣ ಹಂತದಲ್ಲಿದೆ. ಜನವರಿ 25 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಧ್ವಜ ಸ್ತಂಭ ನಿರ್ಮಾಣದ ಯೋಜನಾ ವೆಚ್ಚ 1 ಕೋಟಿ ರೂಪಾಯಿ. ಕಳೆದ ವರ್ಷ ನವೆಂಬರ್ 30 ರಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಕಂಬದ ಮೇಲೆ ಅಳವಡಿಸುವ ರಾಷ್ಟ್ರ ಲಾಂಛನವಾಗಿರುವ 4 ತಲೆಯ ಸಿಂಹವನ್ನು ವಿಜಯನಗರ ನಿವಾಸಿಗಳಷ್ಟೇ ಅಲ್ಲ, ಅಕ್ಕಪಕ್ಕದ ವಿಧಾನಸಭಾ ಕ್ಷೇತ್ರಗಳವರಿಗೂ ಕಾಣಿಸಲಿದೆ ಎಂದು ಶಾಸಕ ಕೃಷ್ಣಪ್ಪ ಹೇಳಿರುವುದಾಗಿ ವರದಿಯಾಗಿದೆ.

    ರಾಷ್ಟ್ರಧ್ವಜ ಸಂಹಿತೆಗೆ ಅನುಗುಣವಾಗಿ ತ್ರಿವರ್ಣದ್ವಜವನ್ನು ಇಲ್ಲಿ ಹಾರಾಡಿಸಲಾಗುತ್ತದೆ. ಪ್ರತಿ ಎರಡು ತಿಂಗಳಿಗೆ ಒಮ್ಮೆ ಧ್ವಜವನ್ನು ಬದಲಾಯಿಸಲಾಗುತ್ತದೆ. ಧ್ವಜಾರೋಹಣ ಮತ್ತು ಅವರೋಹಣ ಕಾರ್ಯವಿಧಾನ ಕೈಗಳಿಂದ ಮಾಡಬಹುದು. ಅದೇ ರೀತಿ ಯಾಂತ್ರಿಕವಾಗಿ ಮಾಡುವುದಕ್ಕೆ ಮೋಟಾರನ್ನು ಕೂಡ ಅಳವಡಿಸಲಾಗಿದೆ. ಇದಕ್ಕಾಗಿ 8-ಎಂಎಂ ಸ್ಟೀಲ್ ವೈರ್, 3 ಎಚ್‌ಪಿ ಮೋಟಾರ್‌ ಅನ್ನು ಜೋಡಿಸಲಾಗಿದೆ. ಯೋಜನೆ ಪೂರ್ಣಗೊಂಡ ನಂತರ ವಾರ್ಷಿಕ ನಿರ್ವಹಣೆಗಾಗಿ ಬಿಬಿಎಂಪಿಗೆ ಹಸ್ತಾಂತರಿಸಲಾಗುವುದು ಎಂದು ಹೇಮಂತ್ ಎಚ್‌ಜಿ ತಿಳಿಸಿದ್ದಾರೆ.

    ಅಯೋಧ್ಯೆ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಗೆ 54 ದೇಶಗಳ 100 ಪ್ರತಿನಿಧಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts