More

    ಡಿಕೆಶಿ ಹಾಗೂ ಜಮೀರ್ ಅಹ್ಮದ್ ವಿರುದ್ಧ ಶೋಭಾ ಕರಂದ್ಲಾಜೆ ದೂರು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜಮೀರ್ ಅಹಮದ್ ವಿರುದ್ಧ  ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಗೆ ಶೋಭಾ ಕರಂದ್ಲಾಜೆ ದೂರು ನೀಡಿದ್ದಾರೆ.

    ಜಮೀರ್ ಅಹ್ಮದ್ ವಿರುದ್ಧ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು, ಡಿಕೆ ಶಿವಕುಮಾರ್ ಪೊಲೀಸರನ್ನು ಬೆದರಿಸಿದ್ದಾರೆ ಎಂದು ಆರೋಪಿಸಿ ಶೋಭಾ ಕರಂದ್ಲಾಜೆ ದೂರು ನೀಡಿದ್ದು ಬಳಿಕ ಹೇಳಿಕೆ ನೀಡಿದ್ದಾರೆ. ”ಡಿ.ಕೆ ಶಿವಕುಮಾರ್ ನೆನ್ನೆ ಚಿಕ್ಕಬಳ್ಳಾಪುರ ದಲ್ಲಿ ಪೊಲೀಸ್ ಗೆ ಧಮ್ಕಿ ಹಾಕಿದ್ದಾರೆ. ಪೊಲೀಸ್ ಎಲ್ಲಾ ನಾಯಕರು ಹೋದ್ರು ರಕ್ಷಣೆ ನೀಡ್ತಾರೆ. ಪೊಲೀಸರು ಪಕ್ಷಭೇದ ಇಲ್ಲದೆ ರಕ್ಷಣೆ ನೀಡ್ತಾರೆ.

    ಆದರೆ ಡಿಕೆ ಶಿವಕುಮಾರ್ ಪೊಲೀಸ್ ಗೆ ಧಮ್ಕಿ ಹಾಕಿದ್ದಾರೆ. ಖಾಕಿ ಬಿಚ್ಚಿಟ್ಟು ಕೆಲಸ ಮಾಡಿ, ನಮ್ಮ ಸರ್ಕಾರ ಬಂದಾಗ ನೋಡ್ಕೊತೇವೆ ಎಂದು ಡಿಕೆಶಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಹೆದರಿಸೋದು ನೀತಿ ಸಂಹಿತೆ ಉಲ್ಲಂಘನೆ. ಕೇಸ್ ಹಾಕುವಂತೆ ಆಯೋಗಕ್ಕೆ ದೂರು ನೀಡಿದ್ದೇವೆ”  ಎಂದು ಸುದ್ದಿಗಾರರಿಗೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

    ಇನ್ನು ಜಮೀರ್ ಅಹ್ಮದ್ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಕೇಂದ್ರ ಸಂಸದೆ, “ಕಾಂಗ್ರೆಸ್ ಗೆ ರಾಷ್ಟ್ರ ಧ್ವಜಕ್ಕೆ ಗೌರವ ಇಲ್ಲ. ರಾಷ್ಟ್ರ ನಾಯಕರ ಬಗ್ಗೆ ಅವರಿಗೆ ಗೌರವ ಇಲ್ಲ. ರಾಷ್ಟ್ರ ಧ್ವಜವನ್ನು ಪೋಡಿಯಂಗೆ ಸುತ್ತಿದ್ದಾರೆ. ದೇಶದ ಚಿಹ್ನೆಗೆ ಅಪಮಾನ ಮಾಡಿದ್ದು ಈ ಪ್ರಕರಣದಲ್ಲೂ ನೀತಿ ಸಂಹಿತೆ ಅಡಿ ಕೇಸ್ ಹಾಕುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ” ಎಂದು ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts