More

    ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ವೇಳಾ ಪಟ್ಟಿ ಪ್ರಕಟ: ಯಾವ ದಿನ ಯಾವ ವಿಷಯ? ವಿವರ ಇಲ್ಲಿದೆ..

    ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಲಾಗಿದೆ.

    ಇದನ್ನೂ ಓದಿ: ಅಯೋಧ್ಯೆ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಗೆ 54 ದೇಶಗಳ 100 ಪ್ರತಿನಿಧಿಗಳು!

    ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್‌ 25ರಂದು ಆರಂಭಗೊಂಡು ಏಪ್ರಿಲ್‌ 6ರಂದು ಮುಕ್ತಾಯಗೊಳ್ಳಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

    ಇನ್ನು ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ 1ರಂದು ಆರಂಭಗೊಂಡು ಮಾರ್ಚ್‌ 22ಕ್ಕೆ ಮುಕ್ತಾಯಗೊಳ್ಳಲಿವೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದ್ವಿತೀಯ ಪಿಯು ಯಾವ ಪರೀಕ್ಷೆ ಯಾವದಿನ?:
    ಮಾ.1ರಂದು ಕನ್ನಡ ಅರೇಬಿಕ್‌, ಮಾ.4- ಗಣಿತ, ಶಿಕ್ಷಣ ಶಾಸ್ತ್ರ, ಮಾ.5- ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ,
    ಮಾ. 6- ಮಾಹಿತಿ ತಂತ್ರಜ್ಞಾನ, ರಿಟೈಲ್‌, ಆಟೋಮೊಬೈಲ್ಸ್‌, ಹೆಲ್ತ್‌ ಕೇರ್‌, ಬ್ಯೂಟಿ ಅಂಡ್‌ ವೆಲ್‌ ನೆಸ್‌,
    ಮಾ. 7- ಇತಿಹಾಸ ಹಾಗೂ ಭೌತಶಾಸ್ತ್ರ, ಮಾ.9- ಐಚ್ಛಿಕ ಕನ್ನಡ, ಲೆಕ್ಕ ಶಾಸ್‌ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮಾ.11- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾ.13 ಇಂಗ್ಲಿಷ್‌, ಮಾ.15- ಹಿಂದೂಸ್ತಾನಿ ಸಂಗೀತ, ಮನಃ ಶಾಸ್ತ್ರ, ರಸಾಯನಶಾಸ್‌ರ, ಮೂಲ ಗಣಿತ, ಮಾ.16 ಅರ್ಥಶಾಸ್ತ್ರ, ಮಾ.18- ಭೂಗೋಳ ಶಾಸ್ತ್ರ, ಜೀವ ಶಾಸ್ತ್ರ, ಮಾ.20- ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮಾ.21-ತಮಿಳು, ತೆಲುಗು,ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌, ಮಾ. 22- ಹಿಂದಿ ಪರೀಕ್ಷೆ ನಡೆಯಲಿದೆ.

    ವಿಶ್ವ ಚಾಂಪಿಯನ್ ಡಿಂಗ್​ ಮಣಿಸಿ ನಂ.1 ಸ್ಥಾನಕ್ಕೇರಿದ ಪ್ರಜ್ಞಾನಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts