More

    ಅನಾರೋಗ್ಯದಿಂದ ಬಳಲುತ್ತಿದ್ದ ಸರ್ಕಾರಿ ವೈದ್ಯ ಸಾವಿಗೆ ಶರಣು!

    ಬೆಂಗಳೂರು: ಇದು ಅನಾರೋಗ್ಯದಲ್ಲಿ ಇರುವವರಿಗೆ ಧೈರ್ಯ ಹೇಳುವಂಥ ವೈದ್ಯರೇ ಧೈರ್ಯ ಕಳೆದುಕೊಂಡಂಥ ಪ್ರಕರಣ. ಅರ್ಥಾತ್, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥದ್ದೊಂದು ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

    ಇದನ್ನೂ ಓದಿ: ಪ್ಯಾನ್​-ಆಧಾರ್ ಲಿಂಕ್ ಗಡುವು ವಿಸ್ತರಣೆ: ನೀವೀಗ ಮಾಡಬೇಕಾದ್ದೇನು?

    ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯ, ಡಾ.ಎಸ್.ರೇಣುಕಾನಂದ (43) ಆತ್ಮಹತ್ಯೆ ಮಾಡಿಕೊಂಡವರು. ಮಕ್ಕಳ ವೈದ್ಯರಾಗಿದ್ದ ಇವರು, ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಈ ಪ್ರಕರಣ ನಡೆದಿದೆ.

    ಇದನ್ನೂ ಓದಿ: ಸಂಸತ್ತಿನಿಂದ ಮೊದ್ಲು ನನ್ನ ಭಾಷಣ, ಬಳಿಕ ನನ್ನನ್ನೇ ತೆಗೆದ್ರು; ಸತ್ಯ ಲೋಕಸಭೆಯಲ್ಲಷ್ಟೇ ಅಲ್ಲ, ಎಲ್ಲಿಯೂ ಹೇಳಬಹುದು: ರಾಹುಲ್ ಗಾಂಧಿ

    ಇವರು ಬೆಡ್​ಶೀಟ್​ನಿಂದ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕ್ಷಮಿಸಿ ಎಂದು ಕುಟುಂಬದವರಲ್ಲಿ ಕೇಳಿಕೊಂಡಿರುವ ಡೆತ್​ನೋಟ್ ಕೂಡ ಶವದ ಬಳಿ ಸಿಕ್ಕಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನಿಸಲಾಗಿದ್ದು, ತಿಲಕನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬಂಡಾಯ ಶಮನಕ್ಕಾಗಿ ಶಾಸಕರ ಕಾಲು ಹಿಡಿಯಲು ಹೋದ ಜೆಡಿಎಸ್ ಅಭ್ಯರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts