More

    VIDEO| ಉಡುಪಿ ವಡ್ಡರ್ಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ವಿಚಿತ್ರ ವಿದ್ಯಾಮಾನ: ವೈರಲ್​ ವಿಡಿಯೋಗೆ ಹೌಹಾರಿದ ಜನ!

    ಉಡುಪಿ: ಜಿಲ್ಲೆಯ ಕೋಟ ಸಮೀಪದ ವಡ್ಡರ್ಸೆ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಗೋರಿಲ್ಲವನ್ನು ಕಂಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ.

    ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಭಾರೀ ಗಾತ್ರದ ಗೋರಿಲ್ಲ ಕಾಣಿಸಿಕೊಂಡಿದೆಯಂತೆ. ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದಾಗ ಗೋರಿಲ್ಲ ಪತ್ತೆಯಾಗಲಿಲ್ಲ.

    ಇದನ್ನೂ ಓದಿರಿ: Web Exclusive | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!

    ಎಂಟು ಎಕರೆ ಪ್ರದೇಶದ ಈ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ನಂತರ ಗೋರಿಲ್ಲ ಪತ್ತೆಯಾಗಿಲ್ಲ. ಪಕ್ಕದಲ್ಲೇ ದಟ್ಟ ಅರಣ್ಯ ಪ್ರದೇಶವೂ ಇರುವುದರಿಂದ ಜನರ ಆತಂಕ ಹೆಚ್ಚಿದೆ. ಆದರೆ, ಈ ಭಾಗದಲ್ಲಿ ಈವರೆಗೆ ಯಾರೂ ಗೋರಿಲ್ಲವನ್ನು ಕಂಡಿರಲಿಲ್ಲ ಎನ್ನುತ್ತಾರೆ. ಮರದ ಮರೆಯಲ್ಲಿ ನಿಂತ ಭಾರೀ ಗಾತ್ರದ ಗೋರಿಲ್ಲ ಎನ್ನುವ ವಿಡಿಯೋ ಮಾತ್ರ ಎಲ್ಲೆಡೆ ಹರಿದಾಡುತ್ತಿದೆ.

    ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಗೋರಿಲ್ಲ ಕಾಣಿಸಿಕೊಳ್ಳುವ ಸಾಧ್ಯತೆ ಇರದ ಕಾರಣ ಇದೇನಾದರೂ ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯಾಗಬೇಕಿದೆ. ಬಹುಶಃ ಕರಡಿಯನ್ನು ನೋಡಿ ಗೊರಿಲ್ಲ ಅಂದುಕೊಂಡಿರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಗಂಡನ ಕಾಯಿಲೆ ಹೆಚ್ಚಿಸುತ್ತೇನೆಂದು ಹೆದರಿಸಿ ರೇಪ್​ ಮಾಡಿದ! ಬಾಬಾನ ನಿಜ ಬಣ್ಣ ಹೊರಗೆಳೆದ ಮಹಿಳೆ

    ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!

    ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ… ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts