More

    ದೆಹಲಿ ಪೊಲೀಸರ ವಶಕ್ಕೆ ಗುಜರಾತ್​ ಆಪ್ ಮುಖ್ಯಸ್ಥ ಗೋಪಾಲ್​ ಇಟಾಲಿಯಾ!

    ನವದೆಹಲಿ: ಗುಜರಾತ್​ನ ಆಪ್​(ಆಮ್​ ಆದ್ಮಿ ಪಾರ್ಟಿ) ಮುಖ್ಯಸ್ಥ ಗೋಪಾಲ್​ ಇಟಾಲಿಯಾರನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
    ಮಹಿಳೆಯರು ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಲ ದಿನಗಳ ಹಿಂದೆ ಗೋಪಾಲ್​ ಇಟಾಲಿಯಾ ಅವಹೇಳನಕಾರಿಯಾಗಿ ನಿಂದಿಸಿ ಮಾತನಾಡಿದ್ದರು. ಈ ವಿಡಿಯೋ ವೈರಲ್​ ಆಗಿತ್ತು. ಗೋಪಾಲ್​ ಇಟಾಲಿಯಾ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
    ವಿಡಿಯೋದಲ್ಲಿ ಏನಿತ್ತು?: ಪ್ರಧಾನಿ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸಿರುವ ಹಾಗೂ ದೇವಸ್ಥಾನಗಳು-ಪುರಾಣ ಕಥೆಗಳು ಶೋಶಣೆಯ ಮೂಲವಾಗಿವೆ. ತಾಯಂದಿರು ಮತ್ತು ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಅಭಿವೃದ್ಧಿ ಹಾಗೂ ಗೌರವ ಬೇಕಿದ್ದರೆ ಅವರುಗಳು ದೇವಸ್ಥಾನಗಳಿಗೆ ಹೋಗಬಾರದು’ ಎಂದು ಇಟಾಲಿಯಾ ವಿವಾದಾತ್ಮಕವಾಗಿ ಹೇಳಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ವೈರಲ್​ ಆದ ವಿಡಿಯೋ ಮಹಿಳಾ ಆಯೋಗದ ಗಮನಕ್ಕೆ ಬರುತ್ತಿದ್ದಂತೆ ಇಟಾಲಿಯಾ ಅವರನ್ನ ವಿಚಾರಣೆಗೆಂದು ಇಂದು(ಗುರುವಾರ) ನವದೆಹಲಿಗೆ ಕರೆಸಿಕೊಳ್ಳಲಾಗಿತ್ತು. ವಿಚಾರಣೆ ವೇಳೆ ಪೊಲೀಸರ ಬಳಿ ಬಾಯ್ಬಿಟ್ಟ ಇಟಾಲಿಯಾ, ಯಾರೋ ವಿಡಿಯೋವನ್ನು ಎಡಿಟ್​ ಮಾಡಿ ವೈರಲ್​ ಮಾಡಿದ್ದಾರೆ’ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts