More

    ಕಂಬಿ ಹಿಂದೆಯೇ ಬಿಕಿನಿ ಧರಿಸಿ ನಿಂತು ಭಾರತೀಯರಿಗೆ ಟಾಂಗ್​ ಕೊಟ್ಟ ಉರ್ಫಿ ಜಾವೇದ್​!

    ಮುಂಬೈ: ಉರ್ಫಿ ಜಾವೇದ್​ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ತುಂಬಾ ಗೊತ್ತಿರುವವರಿಗೆ ಆಕೆಯ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುವ ಈ ಬಾಲಿವುಡ್​ ನಟಿ, ಜಾಲತಾಣದಲ್ಲಿ ತಮ್ಮ ಅರೆಬರೆ ಬಟ್ಟೆಯಿಂದಲೇ ಫೇಮಸ್​ ಆಗಿದ್ದಾಳೆ.

    ಅರೆಬರೆ ದೇಹ ಕಾಣುವಂತೆ ಪ್ರತಿನಿತ್ಯ ವಿಭಿನ್ನ ಉಡುಗೆ ತೊಟ್ಟು ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್​ಸ್ಟಾಗ್ರಾಂ ಇಣುಕಿ ನೋಡಿದರೆ ಅಲ್ಲಿ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇತ್ತೀಚೆಗಷ್ಟೇ ದುಬೈಗೆ ಭೇಟಿ ನೀಡಿದ್ದ ಉರ್ಫಿ, ದುಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು.

    ಕಳೆದ ಮಂಗಳವಾರ (ಡಿ.20) ಫ್ಯಾಶನ್​ ಇನ್ಫ್ಲುಯೆನ್ಸರ್​ ಉರ್ಫಿ ಅವರನ್ನು ದುಬೈ ಅಧಿಕಾರಿಗಳು ಬಂಧಿಸಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿತ್ತು. ಎಂದಿನಂತೆ ತಮ್ಮ ಇನ್​ಸ್ಟಾಗ್ರಾಂಗೆ ವಿಡಿಯೋ ಮಾಡಲು ಉರ್ಫಿ, ದುಬೈನ ಸಾರ್ವಜನಿಕ ಪ್ರದೇಶದಲ್ಲಿ ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿತ್ತು. ಉರ್ಫಿ ವಿಡಿಯೋ ಮಾಡಲು ಹೋಗಿದ್ದ ಸ್ಥಳದಲ್ಲಿ ಅಶ್ಲೀಲತೆಗೆ ಆಸ್ಪದವಿರಲಿಲ್ಲ. ಹೀಗಾಗಿ ಆಕೆಯನ್ನು ದುಬೈ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.

    ಇದೀಗ ಆ ಸುದ್ದಿ ಪ್ರತಿಕ್ರಿಯಿಸಿರುವ ಉರ್ಫಿ, ವಿಡಿಯೋವೊಂದನ್ನು ಹರಿಬಿಡುವ ಮೂಲಕ ಬಂಧನದ ಸುದ್ದಿಯನ್ನು ಅಣಕಿಸಿದ್ದಾರೆ. ಜೈಲಿನ ಕಂಬಿಯ ಹಿಂದೆ ಇರುವ ಫಿಲ್ಟರ್​ ಉಪಯೋಗಿಸಿ ವಿಡಿಯೋ ಮಾಡಿರುವ ಉರ್ಫಿ, ಇಡೀ ಭಾರತ ನನ್ನನ್ನು ಈ ರೀತಿ ನೋಡಲು ಬಯಸುತ್ತಿದೆ ಎಂದು ಕುಹಕವಾಡಿದ್ದಾರೆ.

    ಉರ್ಫಿ ಜಾವೇದ್​ ಬಂಧನದ ಸುದ್ದಿಯನ್ನು ಯಾರೆಲ್ಲ ಸಂಭ್ರಮಿಸಿದರೋ ಅವರಿಗೆ ವಿಡಿಯೂ ಮೂಲಕವೇ ಉರ್ಫಿ ತಿರುಗೇಟು ನೀಡಿದ್ದಾರೆ. ವಿಡಿಯೋದಲ್ಲೂ ತಮ್ಮ ಗುರುತನ್ನು ಉರ್ಫಿ ಬಿಟ್ಟುಕೊಟ್ಟಿಲ್ಲ. ಬಿಕಿನಿ ಧರಿಸಿಕೊಂಡೇ ವಿಡಿಯೋ ಮಾಡುವ ಮೂಲಕ ನೀವೂ ಏನಾದರೂ ಮಾಡಿಕೊಳ್ಳಿ ನಾನು ಇರೋದು ಹೀಗೆ ಎಂಬ ಕಠಿಣ ಸಂದೇಶವನ್ನು ರವಾನಿಸಿದಂತಿದೆ.

    ಇನ್ನು ಬಂಧನದ ಸುದ್ದಿ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿರುವ ಉರ್ಫಿ, ಶೂಟಿಂಗ್​ ಸ್ಥಳದ ಬಗ್ಗೆ ಕೆಲವು ಸಮಸ್ಯೆಗಳಿದ್ದ ಕಾರಣ ಶೂಟಿಂಗ್ ನಿಲ್ಲಿಸಲು ಪೊಲೀಸರು ಬಂದಿದ್ದರು. ಆದರೆ, ಸಮಸ್ಯೆಗೆ ನನ್ನ ಬಟ್ಟೆ ಕಾರಣವಲ್ಲ ಎಂದು ಉರ್ಫಿ ಹೇಳಿದ್ದರು. ಇದೇ ಸಂದರ್ಭದಲ್ಲಿ ಉರ್ಫಿ ಜಾವೇದ್ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಕಳೆದ ದಿನ ಬಂಧಿಸಿದ್ದಾರೆ. (ಏಜೆನ್ಸೀಸ್​)

    View this post on Instagram

    A post shared by Voompla (@voompla)

    ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

    ಮೈಮಾಟ ಪ್ರದರ್ಶಿಸಲು ಹೋಗಿ ಎಡವಟ್ಟು: ದುಬೈನಲ್ಲಿ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​ ಬಂಧನ

    ನನ್ನ ಗುರಿ ಏನಿದ್ರು ರೆಸ್ಟ್ ಆಫ್ ದಿ ವರ್ಲ್ಡ್ ಎಂದು ಗುಡುಗಿದ ರಾಕಿ ಭಾಯ್​: ಜಗತ್ತು ಗೆಲ್ಲಲು ಹೊರಟ ಯಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts