More

    ಇಂಧನ ವೆಚ್ಚ ಉಳಿಸಲು ಹೊಸ ಫೀಚರ್​ ಪರಿಚಯಿಸಿದ ಗೂಗಲ್​ ಮ್ಯಾಪ್! ಇಲ್ಲಿದೆ ಮಾಹಿತಿ…​

    ನವದೆಹಲಿ: ನಿಮ್ಮ ಕಾರಿನ ಡೀಸೆಲ್​ ಅಥವಾ ಪೆಟ್ರೋಲ್​ ವೆಚ್ಚವನ್ನು ಕಡಿಮೆ ಮಾಡಲು ಗೂಗಲ್​ ಮ್ಯಾಪ್​ ಹೊಸ ಫೀಚರ್​ ಒಂದನ್ನು ಪರಿಚಯಿಸಿದೆ. ಈ ಹೊಸ ಫೀಚರ್​ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

    ಹೈದರಾಬಾದ್​ ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 100 ರೂ. ಮತ್ತು ಡೀಸೆಲ್​ ಬೆಲೆ 95 ರೂ. ದಾಟಿದೆ. ಇನ್ನು ನಮ್ಮ ವಾಹನಗಳ ಸ್ಥಿತಿಯನ್ನು ನೋಡಿದರೆ ಮೈಲೇಜ್ ತುಂಬಾ ಕಡಿಮೆ ಇವೆ. ಇದರಿಂದಾಗಿ ನಮ್ಮ ಜೇಬಿಗೆ ನಿರಂತರವಾಗಿ ಕತ್ತರಿ ಬೀಳುತ್ತಲೇ ಇದೆ. ಹಾಗಾಗಿ ನೀವು ಪೆಟ್ರೋಲ್​ ವೆಚ್ಚವನ್ನು ಕಡಿಮೆ ಮಾಡಲು ಬಯಸುವುದಾದರೆ ಗೂಗಲ್​ ಮ್ಯಾಪ್​ನ ಈ ಹೊಸ ಫೀಚರ್​ ನಿಮಗೆ ಸಹಾಯ ಮಾಡಲಿದೆ.

    ಟೆಕ್​ ಲೋಕದ ದೈತ್ಯ ಕಂಪನಿ ಗೂಗಲ್​ ತನ್ನ ಗೂಗಲ್​ ಮ್ಯಾಪ್​ನಲ್ಲಿ ಫ್ಯುಯೆಲ್ ಎಫಿಸಿಯಂಟ್ ಡ್ರೈವ್​ (ಇಂಧನ​​ ಸಮರ್ಥ ಚಾಲನೆ) ಹೆಸರಿನ ಹೊಸ ಫೀಚರ್​ ತಂದಿದೆ. ಆದರೆ, ಪ್ರಸ್ತುತ ಇದು ಕೆಲವೇ ದೇಶಗಳಲ್ಲಿ ಮಾತ್ರ ಬಳಕೆಯಲ್ಲಿದೆ. ಭಾರತದಲ್ಲಿ ಶೀಘ್ರದಲ್ಲೇ ಈ ಆ್ಯಪ್​ ದೊರೆಯಲಿದೆ.

    ನೀವು ಯಾವುದಾದರೊಂದು ಪ್ರವಾಸ ಕೈಗೊಂಡರೆ ಗೂಗಲ್​ ಮ್ಯಾಪ್​, ಫ್ಯುಯೆಲ್ ಎಫಿಸಿಯಂಟ್ ಮಾರ್ಗವನ್ನು ನಿಮಗೆ ಸೂಚಿಸಲಿದೆ. ಈಗಾಗಲೇ ಈ ಫೀಚರ್​ ಕೆನಡಾ, ಯುಕೆ ಮತ್ತು ಯುರೋಪಿಯನ್​​ ದೇಶಗಳಲ್ಲಿ ಚಾಲ್ತಿಯಲ್ಲಿದೆ. ಈ ಫೀಚರ್​ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗೂ ಕಾರ್ಯನಿರ್ವಹಿಸುತ್ತದೆ ಎಂಬುದು ಗಮನಾರ್ಹವಾಗಿದೆ.

    ಈ ಫೀಚರ್​ ಗೂಗಲ್​ ಮ್ಯಾಪ್ಸ್​ ಸೆಟ್ಟಿಂಗ್​ನಲ್ಲಿ ದೊರೆಯಲಿದೆ. ನಾವು ಚಾಲನೆ ಮಾಡುತ್ತಿರುವ ಕಾರಿನ ಎಂಜಿನ್ ವಿವರಗಳನ್ನು ಆಯ್ಕೆ ಮಾಡಬೇಕು. ನಂತರ, ಸ್ವಯಂಚಾಲಿತವಾಗಿ ಅದು ಅತ್ಯುತ್ತಮ ಫ್ಯುಯೆಲ್ ಎಫಿಸಿಯಂಟ್ ಮಾರ್ಗವನ್ನು ಕಂಡುಕೊಳ್ಳುತ್ತದೆ ಮತ್ತು ನಮಗೆ ಸೂಚನೆ ನೀಡುತ್ತದೆ. ಈ ಫೀಚರ್​ ಅನ್ನು ಆನ್ ಮಾಡಿದರೆ ಗೂಗಲ್ ಮ್ಯಾಪ್​ ಕೇವಲ ಇಂಧನ ದಕ್ಷತೆಯ ಮೇಲೆ ಮಾತ್ರ ಗಮನಹರಿಸುತ್ತದೆ. ಆದರೆ, ಇದು ನೈಜ ಸಮಯದ ಸಂಚಾರವನ್ನು ಹೊರತುಪಡಿಸಿ ಇತರ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಗೂಗಲ್​ ಹೇಳಿದೆ.

    ಆ್ಯಕ್ಟಿವೇಟ್​ ಮಾಡುವುದು ಹೀಗೆ….
    * ಗೂಗಲ್​ ಮ್ಯಾಪ್​ ಓಪನ್​ ಮಾಡಿ
    * ಗೂಗಲ್​ ಮ್ಯಾಪ್​ನಲ್ಲಿರುವ ನಿಮ್ಮ ಪ್ರೊಫೈಲ್​ ಐಕಾನ್​ ಮೇಲೆ ಕ್ಲಿಕ್​ ಮಾಡಿ
    * ನ್ಯಾವಿಗೇಶನ್​ ಸೆಟ್ಟಿಂಗ್ಸ್​ಗೆ ಹೋಗಿ. ಅಲ್ಲಿ ನೀವು ರೂಟ್​ ಆಪ್ಷನ್ಸ್​ ನೋಡುತ್ತೀರಿ
    * ಆಪ್ಷನ್​ಗಳಲ್ಲಿ ಫ್ಯುಯೆಲ್ ಎಫಿಸಿಯಂಟ್ ರೂಟ್​ ಮೇಲೆ ಕ್ಲಿಕ್​ ಮಾಡಿ. ನಂತರ ಪರಿಸರ ಸ್ನೇಹಿ ರೂಟಿಂಗ್​ ಮೇಲೆ ಕ್ಲಿಕ್​ ಮಾಡಿ.
    * ಇದಾದ ಬಳಿಕ ವಾಹನದ ಇಂಜಿನ್​ ಆಯ್ಕೆ ಮಾಡಿದರೆ ಆ್ಯಪ್​ ಆ್ಯಕ್ಟಿವೇಟ್​ ಆದಂತೆ!

    ನೀವು ನಿಮ್ಮ ವಾಹನದ ಎಂಜಿನ್ ವಿವರಗಳನ್ನು ಸರಿಯಾದ ತಿಳಿಸದಿದ್ದರೆ, ಗೂಗಲ್​ ಮ್ಯಾಪ್​ ಸ್ವಯಂಚಾಲಿತವಾಗಿ ಪೆಟ್ರೋಲ್ ಆಯ್ಕೆಯನ್ನು ಆರಿಸಿಕೊಳ್ಳುತ್ತದೆ. ತಮಗೆ ಲಭ್ಯವಿರುವ ಡೇಟಾವನ್ನು ಬಳಸಿಕೊಂಡು ಇಂಧನ ದಕ್ಷತೆಯನ್ನು ಲೆಕ್ಕಹಾಕಿ ಉತ್ತಮ ಮಾರ್ಗವನ್ನು ನೀಡುತ್ತದೆ ಎಂದು ಗೂಗಲ್ ಹೇಳುತ್ತದೆ. ಮತ್ತು ಇದು ಭಾರತೀಯ ರಸ್ತೆಗಳಲ್ಲಿ ಹೇಗೆ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಶಿಕ್ಷಕಿ ಜತೆ ಸರಸದಲ್ಲಿ ತೊಡಗಿದ್ದ ಪುತ್ರನನ್ನು ಹಿಡಿದುಕೊಟ್ಟ Life 360 ಆ್ಯಪ್​ ಹಿಂದಿದೆ ವಿವಾದದ ಕರಿನೆರಳು!

    ಮಹಿಳೆಯ ಕಿಡ್ನಿಯಲ್ಲಿತ್ತು 300ಕ್ಕೂ ಅಧಿಕ ಕಲ್ಲುಗಳು! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts