More

    8 ತಿಂಗಳ ಗರ್ಭಿಣಿಯನ್ನು ಕೆಲಸದಿಂದ ವಜಾ ಮಾಡಿದ ಗೂಗಲ್!

    ನವದೆಹಲಿ: 12,000 ಉದ್ಯೋಗಿಗಳನ್ನು ತೆಗೆದುಹಾಕುವ ನಿರ್ಧಾರದ ಮಧ್ಯೆ ಗೂಗಲ್​ ಉದ್ಯೋಗಿಗಳು ತಮ್ಮ ಕಥೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಗೂಗಲ್​ ನೊಂದಿಗೆ ಒಂದು ದಶಕಕ್ಕೂ ಹೆಚ್ಚು ಸಂಬಂಧ ಹೊಂದಿರುವ ನೌಕರರು ಸೇರಿದಂತೆ, ತಮ್ಮ ಕೆಲಸದ ಖಾತೆಗಳನ್ನು ಮಧ್ಯರಾತ್ರಿಯ ನಂತರ ಥಟ್ಟನೆ ಹೇಗೆ ನಿಷ್ಕ್ರಿಯಗೊಳಿಸಲಾಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.

    ಈ ಉದ್ಯೋಗಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಹೆರಿಗೆ ರಜೆ ಮೇಲೆ ತೆರಳುವ ಒಂದು ವಾರದ ಮೊದಲು ಇವರನ್ನು ವಜಾಗೊಳಿಸಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಈಕೆ ಗೂಗಲ್‌ನ ಪ್ರೊಗ್ರಾಮ್ ಮ್ಯಾನೇಜರ್ ಆಗಿದ್ದು, ಅವರು ಈ ಹಿಂದೆ ಉತ್ತಮ ಕಾರ್ಯಕ್ಷಮತೆಯ ವಿಮರ್ಶೆಗಳನ್ನು ಪಡೆದಿದ್ದು ಈಗ ವಜಾ ಆಗಿರುವ ಸುದ್ದಿ ಕೇಳಿ ದಿಗ್ಭ್ರಮೆಗೊಂಡಿದ್ದಾರೆ.

    ಅವರು ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ “ನನಗೆ ನೆಲ ಕುಸಿದ ಹಾಗೆ ಆಯಿತು. ನನ್ನ ಮನಸ್ಸಿಗೆ ಬಂದ ಮೊದಲ ಆಲೋಚನೆ ಎಂದರೆ ‘ನಾನೇ ಯಾಕೆ? ಈಗ ಯಾಕೆ?’. ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಿತ್ತು” ಎಂದು ಬರೆದಿದ್ದಾರೆ.

    ತನ್ನ ಹುಟ್ಟಲಿರುವ ಮಗುವಿನ ಸಲುವಾಗಿ ತನ್ನ ನಕಾರಾತ್ಮಕ ಭಾವನೆಗಳನ್ನು ನಿಗ್ರಹಿಸಬೇಕೆಂದು ಅವರು ಹೇಳಿದ್ದಾರೆ. “ಆದರೆ ನನ್ನ ನಡುಗುವ ಕೈಗಳನ್ನು ನಿಯಂತ್ರಿಸಲು ನನಗೆ ಸಾಧ್ಯವಾಗಲಿಲ್ಲ. ಇದು ತುಂಬಾ ಮಿಶ್ರ ಭಾವನೆ” ಎಂದು ಆ ಮಹಿಳೆ ಹೇಳಿದರು. ವಜಾಗೊಳಿಸಿದ ಸುದ್ದಿ ಹೊರ ಬಿದ್ದ ನಂತರ ಅವರು ಸಹೋದ್ಯೋಗಿಗಳಿಂದ ಸಂದೇಶಗಳ ಮತ್ತು ಫೋನ್ ಕರೆಗಳನ್ನು ಹೇಗೆ ಸ್ವೀಕರಿಸಿದರು ಎಂಬುದರ ಕುರಿತು ಬರೆದುಕೊಂಡಿದ್ದಾರೆ.

    “ನಾನು ಗೂಗಲ್​ ಅನ್ನು ಪ್ರೀತಿಸುತ್ತೇನೆ. ವಿಶೇಷವಾಗಿ ನನ್ನ ತಂಡ ಗೂಗಲ್​ಡೊಮೇನ್‌ಗಳನ್ನು ನಾನು ಪ್ರೀತಿಸುತ್ತೇನೆ. ಏಕೆಂದರೆ ನಾವು ಒಂದು ಕುಟುಂಬ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಬರೆದಿದ್ದು “ಈಗಲೂ ನನ್ನ ತಂಡ ನನ್ನನ್ನು ಬಿಟಟು ಹಾಕಿಲ್ಲ. ಇದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಅಂತಹ ಸವಾಲಿನ ಸಮಯದಲ್ಲಿಯೂ ಧನಾತ್ಮಕ ವ್ಯಾಪಾರ ಬೆಳವಣಿಗೆಯನ್ನು ಮಾಡುತ್ತಿರುವ ಕೆಲವರಲ್ಲಿ ಒಬ್ಬರಾಗಿರುವ ಸ್ಟಾರ್ಟಪ್ ತರಹದ ತಂಡದಲ್ಲಿ ಕೆಲಸ ಮಾಡಲು ನಾನು ಹೆಮ್ಮೆಪಡುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಅನೇಕ ಲಿಂಕ್ಡ್‌ಇನ್ ಬಳಕೆದಾರರು ಉದ್ಯೋಗಾವಕಾಶಗಳು ಮತ್ತು ಪ್ರೋತ್ಸಾಹದಾಯಕ ಸಂದೇಶಗಳನ್ನು ಅವರಿಗಾಗಿ ಬರೆದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts