More

    4.8 ಕೋಟಿ ರೂ. ಕದ್ದು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿ ತಪ್ಪಿಸಿಕೊಂಡರೂ 25 ವರ್ಷಗಳ ನಂತರ ಸಿಕ್ಕಿಹಾಕಿಕೊಂಡಳು!

    ಚೀನಾ: ಚೀನೀ ಅಧಿಕಾರಿಗಳು ಚೆನ್ ಯಿಲ್ ಎಂದು ಹೆಸರಿಸಲಾದ ಮಾಜಿ ಬ್ಯಾಂಕ್ ಗುಮಾಸ್ತೆ 25 ವರ್ಷಗಳ ನಂತರ ಈಗ ಸಿಕ್ಕಿಬಿದ್ದಿದ್ದು ಆಕೆಯ ಮೇಲೆ ಭ್ರಷ್ಟಾಚಾರ ಮತ್ತು ವಂಚನೆಯ ಆರೋಪ ಹೊರಿಸಿ ಪ್ರಕರಣ ದಾಖಲಾಗಿದೆ. ಯಿಲ್ ಹೆಸರಿನ ಈಕೆ, ತನ್ನ ಎಲ್ಲಾ ಅಪರಾಧಗಳನ್ನು ಒಪ್ಪಿಕೊಂಡಿದ್ದು ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಾಳೆ.

    ಯುಕ್ವಿಂಗ್ ಪೀಪಲ್ಸ್ ಪ್ರೊಕ್ಯುರೇಟರೇಟ್ ಪ್ರಕಾರ ಆಕೆಯನ್ನು ಪತ್ತೆಹಚ್ಚಲು ಇತರ ಸರ್ಕಾರಿ ಇಲಾಖೆಗಳೊಂದಿಗೆ ಪೊಲೀಸ್​ ಇಲಾಖೆ ಕೆಲಸ ಮಾಡಿದೆ. ಈ ವಾರ WeChat ಪೋಸ್ಟ್‌ನಲ್ಲಿ, Yueqing ನಗರದ ಪ್ರಾಸಿಕ್ಯೂಟರ್‌ಗಳು ಈಕೆಯ ಮೇಲಿನ ಆರೋಪಗಳನ್ನು ದೃಢಪಡಿಸಿದ್ದಾರೆ.

    ಮಿಸ್​ ಯೈಕ್​ ಪ್ರಕರಣವು 1997 ರಲ್ಲಿ ಪೂರ್ವ ಕರಾವಳಿ ನಗರವಾದ ಯುವೇಕ್ವಿಂಗ್​ನಲ್ಲಿ ಚೀನಾ ಕನ್ಸ್ಟ್ರಕ್ಷನ್ ಬ್ಯಾಂಕ್ ಶಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುವಾಗದ್ದು. ಒಂದು ದಿನ, 26 ವರ್ಷದ ಮಹಿಳೆ ಬ್ಯಾಂಕ್ ವ್ಯವಸ್ಥೆಯಲ್ಲಿ ದೋಷವನ್ನು ಕಂಡುಕೊಂಡಿದ್ದು, ನಗದು ಹಿಂಪಡೆಯುವ ಮೊದಲು ಖಾತೆಯಲ್ಲಿನ ಹಣವನ್ನು ಕದ್ದಿದ್ದಾಳೆ.

    ಅವಳು ಶೀಘ್ರದಲ್ಲೇ ತನ್ನ ಸ್ವಂತ ಬ್ಯಾಂಕ್ ಖಾತೆಗೆ ಕೃತಕವಾಗಿ ಹಣವನ್ನು ಹಾಕಿ ಹೊಸ ಜೀವನವನ್ನು ಪ್ರಾರಂಭಿಸುವ ಆಲೋಚನೆಯೊಂದಿಗೆ ಈ ಕೆಲಸ ಮಾಡಿದ್ದಾಳೆ. ಬ್ಯಾಂಕ್‌ನ ಹತ್ತಿರದ ಶಾಖೆಗಳಲ್ಲಿ ಖಾತಯೊಂದಕ್ಕೆ ಹಣ ವರ್ಗಾವಣೆಯಾದ ನಂತರ ಆಕೆ ಕಟ್ಟಡದೊಳಗೆ ನುಸುಳಲು ಯೋಜನೆಯನ್ನು ಸಿದ್ಧಪಡಿಸಿದ್ದಾಳೆ.

    ಅದೇ ವರ್ಷದ ಏಪ್ರಿಲ್ 12 ರಂದು, ಅವಳು ವಾರಾಂತ್ಯದಲ್ಲಿ ಬ್ಯಾಂಕ್​ ಒಳಕ್ಕೆ ನುಸುಳಿದ್ದು ಆಕೆಯ ಯೋಜನೆ ಫಲಿಸಿತ್ತು. ಆಕೆಯ ಬ್ಯಾಂಕ್ ಖಾತೆಗಳಿಗೆ ಹೊಸ ಸಂಖ್ಯೆಗಳನ್ನು ನಮೂದಿಸುವ ಮೂಲಕ ತನ್ನ ಹಣವನ್ನು 5.66 ಮಿಲಿಯನ್ ಯುವಾನ್ ಗೆ(4.8 ಕೋಟಿ ರೂ.) ಹೆಚ್ಚಿಸಲು ಸಾಧ್ಯವಾಯಿತು. ನಂತರ ಅವಳು ಒಂದಷ್ಟು ನಗದನ್ನು ಹಿಂಪಡೆಯಲು ಸೂಟ್‌ಕೇಸ್‌ನೊಂದಿಗೆ ನಗರದ ಬ್ಯಾಂಕುಗಳ ಸುತ್ತಲೂ ಓಡಾಡಿದ್ದಾಳೆ.

    ದರೋಡೆಯ ನಂತರ, ಅವಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಅಲ್ಲಿ ಆಕೆ ತನ್ನ ಗುರುತನ್ನು ಮರೆಮಾಚಿ ಪೋಲೀಸ್ ರೇಡಾರ್ ಅಡಿಯಲ್ಲಿ ತನ್ನ ಗುರುತನ್ನು ಬದಲಾಯಿಸಿದಳು. ಆಕೆ ಯಾವ ಶಸ್ತ್ರಚಿಕಿತ್ಸೆಗೆ ಒಳಗಾದಳು ಎಂಬುದು ನಿಖರವಾಗಿ ತಿಳಿದಿಲ್ಲ.

    ನಂತರ, ಹಣದೊಂದಿಗೆ, ಆಕೆ ತನ್ನ ಹೆತ್ತವರ ಮನೆಗೆ ಹಿಂದಿರುಗಿ ಹೊರಾಂಗಣ ಶೌಚಾಲಯ ಸೇರಿದಂತೆ ಕಟ್ಟಡದ ಸುತ್ತಲೂ ವಿವಿಧ ಸ್ಥಳಗಳಲ್ಲಿ 1.43 ಮಿಲಿಯನ್ ಯುವಾನ್ (£ 170,000) ಬಚ್ಚಿಟ್ಟಳು.

    ಉಳಿದ ಹಣದೊಂದಿಗೆ, ಚೆನ್ ನಂತರ ದಕ್ಷಿಣ ಚೀನಾಕ್ಕೆ ಹೊರಟು ಹತ್ತಿರದ ಪ್ರಾಂತ್ಯವಾದ ಫುಜಿಯಾನ್‌ನಲ್ಲಿರುವ ಬ್ಯಾಂಕ್‌ಗೆ ಭೇಟಿ ನೀಡಿದರು. ಅವರು 2.1 ಮಿಲಿಯನ್ ಯುವಾನ್ (£ 25,000)ಅನ್ನು ತನ್ನ ಮೂವರು ಒಡಹುಟ್ಟಿದವರ ಹೊಸದಾಗಿ ರಚಿಸಲಾದ ಜಂಟಿ ಬ್ಯಾಂಕ್ ಖಾತೆಗಳಿಗೆ ಹಾಕಿದರು.

    ಮೂರು ದಿನಗಳ ನಂತರ, ಅವರು ಮನೆಗೆ ಹೋಗಿ ತನ್ನ ಹೆತ್ತವರಿಗೆ ಏನಾಯಿತು ಎಂಬುದನ್ನು ಬಹಿರಂಗಪಡಿಸಿದಳು. ಅವಳು ಹಣವನ್ನು ಎಲ್ಲಿ ಮರೆಮಾಡಿದ್ದಾಳೆಂದು ತನ್ನ ಕುಟುಂಬಕ್ಕೆ ತಿಳಿಸಿ ಹೆಚ್ಚುವರಿ ಹಣವನ್ನು ಹಿಂಪಡೆಯಲು ನಾಲ್ಕು ಪಾಸ್‌ಬುಕ್‌ಗಳನ್ನು ಅಲ್ಲಿಯೇ ಇಟ್ಟಿದ್ದಳು. ನಂತರ ಈಗ ಈಕೆ ಸಿಕ್ಕಿ ಹಾಕಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ. (ಏಜೆನ್ಸೀಸ್)​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts