More

    ದೀರ್ಘಕಾಲದ ಕೆಮ್ಮು, ಸೋಂಕಿನ ಲಕ್ಷಣ ಆಗಿರಬಹುದು ಎಂದ ತಜ್ಞರು…

    ನವದೆಹಲಿ: ದೀರ್ಘಕಾಲದ ಕೆಮ್ಮು ಹಲವಾರು ಕಾರಣಗಳಿಂದ ಉಂಟಾಗಬಹುದು. ದೀರ್ಘಕಾಲದವರೆಗೆ ಸೋಂಕುಗಳು ಮತ್ತು ಅನಾರೋಗ್ಯದ ಆವರ್ತನದ ಹೆಚ್ಚಳವನ್ನು ವೈದ್ಯರು ಗಮನಿಸಿದ್ದಾರೆ. ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಜಿಪಿಗಳ ಸಂಶೋಧನೆಯ ಅಂಕಿ-ಅಂಶಗಳ ಪ್ರಕಾರ ಈ ರೀತಿಯ ದೀರ್ಘ ಕಾಲದ ಕೆಮ್ಮು ವಿಶೇಷವಾಗಿ ಚಳಿಗಾಲದಲ್ಲಿ ಶ್ವಾಸಕೋಶದ ಕೆಳ ಮತ್ತು ಮೇಲ್ಭಾಗದ ಸೋಂಕುಗಳಲ್ಲಿ ಕಂಡುಬರುತ್ತದೆ.

    “ಪ್ರಸ್ತುತ ಉಸಿರಾಟದ ಸೋಂಕುಗಳು ಸಾಮಾನ್ಯಕ್ಕಿಂತ ಹೆಚ್ಚು ಕಾಲ ಇರುವಂತೆ ತೋರುತ್ತಿರುವುದು ಏಕೆ ಎಂಬುದು ಸ್ಪಷ್ಟವಾಗಿಲ್ಲ. ಈ ರೀತಿಯ ಪ್ರಕರಣಗಳನ್ನು ವೈದ್ಯರು ಮತ್ತು ರೋಗಿಗಳು ಗಮನಿಸಿದ್ದಾರೆ. ಆದರೆ ಈ ರೀತಿ ಏಕೆ ನಡೆಯುತ್ತಿದೆ ಎಂದು ನಮಗೆ ಸಂಪೂರ್ಣವಾಗಿ ಖಚಿತವಾಗಿಲ್ಲ” ಎಂದು ಹಾಥಾರ್ನ್, ರಾಯಲ್ ಕಾಲೇಜ್ ಆಫ್ ಜಿಪಿಗಳ ಅಧ್ಯಕ್ಷೆಯಾಗಿರುವ ಪ್ರೊಫೆಸರ್ ಕಮಿಲಾ ಅವರನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಯುಕೆ ಹೇಳಿದೆ.

    ತಜ್ಞರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ COVID ನಿರ್ಬಂಧಗಳಿಂದ ಹೆಚ್ಚು ಸಾಮಾಜಿಕವಾಗಿ ಪ್ರತ್ಯೇಕಿಸಲ್ಪಟ್ಟಿರುವುದರಿಂದ ಸೋಂಕುಗಳ ವಿರುದ್ಧ ಜನರ ಪ್ರತಿರೋಧಕಲ ಶಕ್ತಿ ಕಡಿಮೆಯಾಗಿದೆ ಎಂಬುದು ಒಂದು ಮುಖ್ಯ ಅಂಶವಾಗಿ ಕಂಡುಬಂದಿದೆ.

    ಪ್ರೊಫೆಸರ್ ಹಾಥಾರ್ನ್ ಪ್ರಕಾರ “ಇದು ನಾವು ಒಂದರ ನಂತರ ಮತ್ತೊಂದು ಸೋಂಕಿಗೆ ತುತ್ತಾಗುವುದರಿಂದ ದೀರ್ಘಕಾಲದ ತನಕ ಕೆಮ್ಮಿನಿಂದ ಬಳಲುವ ಸಾಧ್ಯತೆ ಕೂಡ ಇರಬಹುದು. ಅವು ಬೇರೆ ಬೇರೆ ರೀತಿಯ ವೈರಸ್​ ಆಗಿರಬಹುದು. ಹೀಗಾಗಿ ಒಂದು ವೈರಸ್​ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಂಡರೂ ಮತ್ತೊಂದು ರೀತಿಯ ವೈರಸ್​ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿರಬೇಕು ಎಂದಿಲ್ಲ.”

    ಈ ವಿಭಿನ್ನ ರೀತಿಯ ಸೋಂಕುಗಳು ಮತ್ತು ನಿರಂತರವಾಗಿ ಕಾಣಿಸಿಕೊಳ್ಳುವ ರೋಗಲಕ್ಷಣಗಳನ್ನು ತಡೆಗಟ್ಟಲು ಸೂಕ್ತವಾದ ಕ್ರಮಗಳನ್ನು ಅನುಸರಿಸುವುದು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ತಜ್ಞರು ಶಿಫಾರಸು ಮಾಡಿದ ಸಲಹೆಗಳನ್ನು ಪಾಲಿಸಿದರೆ ಉತ್ತಮ.
    ಉದಾಹರಣೆಗೆ:
    1. ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯಿರಿ
    2. ತೊಳೆಯುವುದು ಸಾಧ್ಯವಾಗದಿದ್ದರೆ ಸ್ಯಾನಿಟೈಸರ್ ಬಳಸಿ
    3. ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸಿಕೊಳ್ಳಿ
    4. ಕೆಮ್ಮು, ಶೀತ ಅಥವಾ ಗಂಟಲು ನೋವಿಗೆ ಕಾರಣ ಆಗುವ ಆಹಾರವನ್ನು ತಪ್ಪಿಸಿ.
    5. ಸಾಕಷ್ಟು ನೀರನ್ನು ಕುಡಿಯಿರಿ
    6. ವಿಶ್ರಾಂತಿ ಪಡೆಯಿರಿ

    ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಕೆಲವೊಮ್ಮೆ ವೈರಲ್ ಸೋಂಕುಗಳು ತಾನಾಗಿಯೇ ನಿವಾರಣೆಯಾಗುತ್ತವೆ. ಆದರೂ ಪರಿಸ್ಥಿತಿ ಕೈ ಮೀರುವ ಲಕ್ಷಣ ಕಾಣಿಸಿದರೂ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಅದರಲ್ಲೂ ನೀವು ನಿರಂತರವಾಗಿ ಕೆಮ್ಮುತ್ತಿದ್ದರೆ ಅಥವಾ ದೀರ್ಘಕಾಲದಿಂದ ಕಫದ ಕಾರಣ ಬಳಲುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಲೇ ಬೇಕು.

    ಉಸಿರಾಟದ ತೊಂದರೆ, ಎದೆ ನೋವು ಅಥವಾ ಯಾವುದೇ ಕಾರಣವಿಲ್ಲದೆ ತೂಕವನ್ನು ಕಳೆದುಕೊಳ್ಳುವಂತಹ ಇತರ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೂ ನೀವು ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

    ನೀವು ಕೋವಿಡ್ ಸೋಂಕಿನಿಂದಾಗಿ ಕೆಮ್ಮುತ್ತಿದ್ದರೆ ಮತ್ತು ಆರಂಭಿಕ ಸೋಂಕಿನ ನಂತರ 4 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ಎದೆಯ ಎಕ್ಸ್-ರೇ ಅನ್ನು ಪಡೆಯುವುದು ಮುಖ್ಯ. ಕೋವಿಡ್ ಸೋಂಕು ಕೆಲವು ಜನರಲ್ಲಿ ಶ್ವಾಸಕೋಶದ ಗಾಯ ಮತ್ತು ಫೈಬ್ರೋಸಿಸ್‌ಗೆ ಕಾರಣವಾಗಬಹುದು. ದೀರ್ಘಕಾಲದ ಕೆಮ್ಮು ಕ್ಯಾನ್ಸರ್ ಮತ್ತು ದೀರ್ಘಕಾಲದ ಕೋವಿಡ್‌ನ ಸಂಕೇತ ಕೂಡ ಆಗಿರಬಹುದು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts