More

    ದೇಶದ ಮೊದಲ ವೈದ್ಯೆಗೆ ಗೂಗಲ್​ನಿಂದ ಡೂಡಲ್​ ನಮನ

    ನವದೆಹಲಿ: ಭಾರತದ ಮೊದಲ ವೈದ್ಯೆಯ 160ನೇ ಜನ್ಮದಿನಾಚರಣೆ ಪ್ರಯುಕ್ತ ಇಂದು ಡೂಡಲ್​ ಮೂಲಕ ಗೂಗಲ್​ ನಮನ ಸಲ್ಲಿಸಿದೆ. ಡಾ.ಕಾದಂಬಿನಿ ಗಂಗೂಲಿ ಅವರ ಚಿತ್ರದೊಂದಿಗೆ ಗೂಗಲ್ ತನ್ನ ಸರ್ಚ್​​ನ ಹೋಮ್​ ಪೇಜ್​ನಲ್ಲಿ ಡೂಡಲ್​ ಆಗಿಸಿ ಅವರನ್ನು ನೆನಪಿಸಿಕೊಂಡಿದೆ. ಇದರಲ್ಲಿ ಕೋಲ್ಕತ ಮೆಡಿಕಲ್​ ಕಾಲೇಜ್​ ಆ್ಯಂಡ್ ಹಾಸ್ಪಿಟಲ್​ನ ಚಿತ್ರವನ್ನೂ ಹಿನ್ನೆಲೆಯಾಗಿಸಿ ಇಡಲಾಗಿದೆ.

    ದೇಶದ ಮೊದಲ ವೈದ್ಯೆಗೆ ಗೂಗಲ್​ನಿಂದ ಡೂಡಲ್​ ನಮನಆನಂದಿ ಜೋಶಿ ಅವರೊಂದಿಗೆ ಕಾದಂಬಿನಿ ಗಂಗೂಲಿ ಕೂಡ ಭಾರತದ ಮೊದಲ ಮಹಿಳಾ ವೈದ್ಯೆ ಎಂದು ಗುರುತಿಸಿಕೊಂಡಿದ್ದರು. ಇಬ್ಬರೂ 1886ರಲ್ಲೇ ವೈದ್ಯ ಪದವಿ ಪಡೆದಿದ್ದರು. ಗಂಗೂಲಿ ಕ್ಯಾಲ್ಕಟ ಮೆಡಿಕಲ್ ಕಾಲೇಜ್​​ನಲ್ಲಿ ಹಾಗೂ ಜೋಶಿ ಅಮೆರಿಕದ ವಿಮೆನ್ಸ್ ಮೆಡಿಕಲ್​ ಕಾಲೇಜ್​ ಆಫ್​ ಪೆನ್ಸಿಲ್ವೇನಿಯಾದಲ್ಲಿ ವೈದ್ಯ ಪದವಿ ಪಡೆದಿದ್ದರು.

    ಕಾದಂಬಿನಿ ಗಂಗೂಲಿ 1861ರ ಜುಲೈ 18ರಂದು ಜನಿಸಿದ್ದು, ಚಂದ್ರಮುಖಿ ಬಸು ಎಂಬವರೊಂದಿಗೆ ಪದವಿ ಪಡೆದಿದ್ದ ಇವರು ದೇಶದ ಮೊದಲ ಮಹಿಳಾ ಪದವೀಧರೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಇವರು ಕೋಲ್ಕತದ ಬೆಥ್ಯೂನ್​ ಕಾಲೇಜ್​ನಲ್ಲಿ ಪದವಿ ಪಡೆದಿದ್ದರು.

    ವಾಹನ ತಡೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿದ ದಲಿತ ಸಂಘಟನೆ ಕಾರ್ಯಕರ್ತರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts