More

    ಭರದಿಂದ ನಡೆದಿದೆ ಭತ್ತ ಕಟಾವು

    ಸಿರವಾರ: ಬೇಸಿಗೆ ಹಂಗಾಮಿನ ಭತ್ತ ಕಟಾವು ಆರಂಭವಾಗಿದ್ದು, ಆರಂಭದಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆಯ ಭಾಗಕ್ಕೆ ಹಲವು ವರ್ಷಗಳಿಂದ ಎರಡು ಬೆಳೆ ಅಪರೂಪವಾಗಿತ್ತು. ಪ್ರಸ್ತುತ ಕೆಲವು ಭಾಗದಲ್ಲಿ ಮಾತ್ರ ಎರಡನೇ ಬೆಳೆಯಾಗಿ ವಿವಿಧ ತಳಿಯ ಭತ್ತವನ್ನು ರೈತರು ನಾಟಿ ಮಾಡಿದ್ದಾರೆ. ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದಾಗಿ ನಾಲೆಯ ಕೊನೆಯ ಭಾಗಕ್ಕೆ ಸಮಪರ್ಕವಾಗಿ ನೀರು ಬಾರದಿರುವುದರಿಂದ ಬೆಳೆ ಕೈಗೆ ಸೇರುವುದಿಲ್ಲ ಎಂಬ ಭಯ ರೈತರನ್ನು ಕಾಡುತ್ತಿತ್ತು.

    ಭದ್ರಾ ಅಣೆಕಟ್ಟೆಯಿಂದ ನೀರು ಹರಿಸಲು ಸರ್ಕಾರ ಕ್ರಮಕೈಗೊಂಡಿದ್ದರಿಂದ ನಾಲೆಯಲ್ಲಿ ನೀರು ಹರಿದು ಬೆಳೆ ಕೈ ಸೇರುವ ಹಂತಕ್ಕೆ ಬಂದಿದೆ. ಈಗ ಕಟಾವು ಮಾಡುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ. ಈ ಬಾರಿಯ ಎರಡನೇ ಬೆಳೆ, ಉತ್ತಮ ಇಳುವರಿಯೊಂದಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಿಂದಾಗಿ ರೈತರಲ್ಲಿ ಸಂತಸ ಮನೆ ಮಾಡಿದೆ.

    ಪ್ರತಿ ಕ್ವಿಂಟಾಲ್ ಕಾವೇರಿ ಸೋನಾ 1,600 ರೂ. ಆರ್, ಎನ್.ಆರ್ 1,800 ರೂ. ಖರೀದಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಲೆ ಸಿಗಲಿದೆ ಎಂಬ ನಿರೀಕ್ಷೆ ರೈತರದಾಗಿದೆ. ಕಳೆ ವಷರ್ ಆರ್.ಎನ್.ಆರ್ ಪ್ರತಿ ಕ್ವಿಂಟಾಲ್‌ಗೆ 2 ಸಾವಿರ ರೂಪಾಯಿಗೆ ಮಾರಾಟವಾಗಿತ್ತು.

    ಭತ್ತಕ್ಕೆ ಮಳೆಗಾಲದಲ್ಲಿ ಹೆಚ್ಚಿನ ಕೀಟ ಬಾಧೆ ಇರುತ್ತದೆ. ಇದರಿಂದಾಗಿ ಹೆಚ್ಚಿನ ರಸಗೊಬ್ಬರ ಹಾಕಬೇಕಾಗುತ್ತದೆ. ಆದರೆ, ಬೇಸಿಗೆಯಲ್ಲಿ ಕೀಟ ಬಾಧೆ ಕಡಿಮೆ ಇರುವುದರಿಂದ ಖರ್ಚು ಕಡಿಮೆ ಆಗುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇದೆ. ಆದರೆ, ಆಗಾಗ ಮೋಡ ಕವಿದ ವಾತಾವರಣದಿಂದಾಗಿ ಮಳೆ ಬಂದು ಭತ್ತ ನೆಲಕಚ್ಚುವ ಭಯದೊಂದಿಗೆ ಬೆಲೆ ಕುಸಿಯುವ ಭಯವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts