More

    ಉತ್ತಮ ಜೀವನ ನಿರ್ವಹಣೆಗೆ ಮುಂದಾಗಿ

    ಲಿಂಗಸುಗೂರು: ಮಕ್ಕಳು ಬದುಕಿನಲ್ಲಿ ಪ್ರಗತಿ ಸಾಧಿಸಲು ಶಾಲಾ ಪಠ್ಯ ಜತೆಗೆ ಜೀವನ ಮೌಲ್ಯಗಳು ಮತ್ತು ಕೌಶಲ್ಯಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಶಿಕ್ಷಕ ಗಿರೀಶ ಸೊಲ್ಲಾಪುರ ಹೇಳಿದರು.

    ಇದನ್ನೂ ಓದಿ: ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿರಲಿ:ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಸೂಚನೆ

    ತಾಲೂಕಿನ ಶೀಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗ್ ರಹಿತ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿ ದಿಸೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವಿನ ಜತೆಗೆ ದೂರವಿರಬೇಕು. ಅಮೂಲ್ಯವಾದ ಸಮಯವನ್ನ ವ್ಯರ್ಥಮಾಡದೆ ಸಾಧನೆ ಮಾಡಲು ಬದ್ಧರಾಗಿ ಎಂದರು.

    ಮುಖ್ಯಗುರು ಈರಪ್ಪ ತೆರದಾಳ ಮಾತನಾಡಿ, ದುಶ್ಚಟಗಳ ದಾಸರಾಗದೆ ಉತ್ತಮ ಬದಕು ನಿರ್ವಹಣೆಗೆ ಮುಂದಾಗಿ. ಸಿಗರೇಟ ನಾವು ಸುಟ್ಟರೆ ಮುಂದೆ ಅದೇ ನಮ್ಮ ಜೀವನವನ್ನು ಸುಟ್ಟು ಹಾಕಲಿದೆ. ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕೆಂದರು.

    ಮಾದಕ ದ್ರವ್ಯಗಳ ಕುರಿತ ಬಿತ್ತಿಚಿತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ವಿಜ್ಞಾನ ಶಿಕ್ಷಕ ಶಿವಕುಮಾರ, ಸಹಶಿಕ್ಷಕರಾದ ಭಾಗೀರತಿ, ದುರುಗಪ್ಪ, ರಾಚಪ್ಪ, ಅಮರೇಶ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts