More

    ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳ ಸೇವೆನೆ ಅಗತ್ಯ

    ಸಿಂದಗಿ: ಮನುಷ್ಯನ ಅನಾರೋಗ್ಯಕ್ಕೆ ಆಹಾರ ಪದ್ಧತಿಯೇ ಕಾರಣವಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಸತ್ವವುಳ್ಳ, ಪೌಷ್ಟಿಕ ಆಹಾರವನ್ನು ಸೇವಿಸುವ ಮೂಲಕ ಅನಿಮೀಯಾವನ್ನು ನಿಯಂತ್ರಿಸಬಹುದು ಎಂದು ವೈದ್ಯೆ ಶ್ವೇತಾ ನಂದಿಮಠ ಹೇಳಿದರು.

    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅನಿಮೀಯಾ ಮುಕ್ತ ಪೌಷ್ಟಿಕ ಕರ್ನಾಟಕ ಆರೋಗ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಅಪೌಷ್ಟಿಕತೆ ಹಾಗೂ ಅನಿಮೀಯಾದಿಂದ ಬಳಸಲುತ್ತಿರುವವರು ಹಸಿರು ತರಕಾರಿ ಹಾಗೂ ಹಣ್ಣು ಹಂಪುಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದರು.

    ಇದನ್ನೂ ಓದಿ: ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ, ಸವಾರರಿಗೆ ಧೂಳಾಭಿಷೇಕ

    ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಎ.ಎ. ಮಾಗಿ, ಜಿ.ಎಸ್. ಮೋರಟಗಿ ಡಾ. ಪ್ರಿಯಾಂಕಾ ಕುಂಬಾರ, ಪಿ.ವೈ. ಚೌಡಿಕಿ ಇದ್ದರು.

    ಎಸ್.ಎಸ್. ಸುರಪುರ, ಎಂ.ಎಂ. ಯಾಳಗಿ, ಎಸ್.ಎಸ್. ಅವಟಿ, ಜಿ.ಎನ್. ಹಿರೇಮಠ ಮತ್ತಿತರರಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಯಲ್ಲಾಲಿಂಗ ಕಟಕದೊಂಡ, ಬಸವರಾಜ ಶಹಾಪುರ, ಭರತೇಶ ಮುಕ್ತಿನ, ಸಾಯಬಣ್ಣ, ಸಿದ್ದು ಮುರಾಳ, ಚೇತನ ಬಿರಾದಾರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳಿದ್ದರು.

    ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ತ ಪರೀಕ್ಷೆ ಮಾಡಲಾಯಿತು. ಉಪನ್ಯಾಸಕ ಬಸನಗೌಡ ಬಿರಾದಾರ ನಿರೂಪಿಸಿದರು. ಅನೀಲ ರಜಪೂತ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts