More

    ಜಬರ್‌ಪುರದಲ್ಲಿ ಯೋಧ ರತನ್ ಬೋಪಣ್ಣ ಅಂತ್ಯಕ್ರಿಯೆ

    ಗೋಣಿಕೊಪ್ಪ: ಪೂನಾದ ಜಬರ್‌ಪುರದಲ್ಲಿ ತರಬೇತಿಯಲ್ಲಿದ್ದ ಸಂದರ್ಭ ಸಾವಿಗೀಡಾದ ಕೊಡಗಿನ ಯೋಧ ಚೀರಂಡ ರತನ್ ಬೋಪಣ್ಣ (22) ಅಂತ್ಯಕ್ರಿಯೆ ಜಬರ್‌ಪುರದ ಸಾರ್ವಜನಿಕ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು.

    ಸಹೋದರಿ ಕಾವೇರಮ್ಮ, ಬಂಧುಗಳಾದ ಚೀರಂಡ ಕಂದಾ ಸುಬ್ಬಯ್ಯ, ಕಟ್ಟೇಂಗಡ ದಿಲಿಪ್, ಮಾಜಿ ಸೈನಿಕ ಐನಂಡ ಮಂದಣ್ಣ, ಸೇನಾಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

    ಮುಗುಟಗೇರಿ ಗ್ರಾಮದ ಚೀರಂಡ ಪಿ.ಸೋಮಯ್ಯ, ಭಾರತಿ ದಂಪತಿ ಪುತ್ರ ಚೀರಂಡ ರತನ್ ಬೋಪಣ್ಣ ಪೂನಾದ ಜಬರ್‌ಪುರದ ಸಿಗ್ನಲ್ಸ್‌ನಲ್ಲಿ ಕ್ಲರಿಕಲ್ ಹುದ್ದೆ ತರಬೇತಿ ಪಡೆಯುತ್ತಿದ್ದರು. 5 ದಿನಗಳ ಹಿಂದೆಯಷ್ಟೆ ತರಬೇತಿ ನಡುವೆ ಕೇಂದ್ರದಿಂದ ಹೊರ ಹೋಗಲು ಅನುಮತಿ ಪಡೆದು ತೆರಳಿದ್ದ ಬೋಪಣ್ಣ, ಜಬರ್‌ಪುರ್ ವಸತಿಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

    ಕೊಳೆತ ಸ್ಥಿತಿಯಲ್ಲಿದ್ದ ಕಳೇಬರವನ್ನು ಹುಟ್ಟೂರಿಗೆ ತರಲು ಕಷ್ಟ ಸಾಧ್ಯ ಎಂಬ ಕಾರಣಕ್ಕೆ ಸೇನಾಧಿಕಾರಿಗಳ ಮನವಿಯಂತೆ ಜಬರ್‌ಪುರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.


    ಸಾವಿನ ಬಗ್ಗೆ ಸಂಶಯವಿದ್ದ ಕಾರಣ ಬೋಪಣ್ಣ ಬರೆದಿಟ್ಟಿದ್ದ ಡೆತ್‌ನೋಟ್‌ನ್ನು ಸಹೋದರಿ ಕಾವೇರಮ್ಮ ಓದಿ, ಅಕ್ಷರ ಸಹೋದರ ಬೋಪಣ್ಣ ಅವರದ್ದು ಎಂದು ದೃಢಪಡಿಸಿದ್ದಾರೆ. ನನ್ನ ಸಾವಿಗೆ ಯಾರನ್ನೂ ಹೊಣೆ ಮಾಡಬೇಡಿ. ನನ್ನ ಸ್ವಂತ ನಿರ್ಧಾರದಿಂದ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿರುವುದಾಗಿ ಪತ್ರದಲ್ಲಿ ತಿಳಿಸಲಾಗಿದೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts