More

    ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಸೈಟು, ಫ್ಲ್ಯಾಟು, ಮನೆಗಳು… ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

    ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ದಾಳಿ ನಡೆಸಿದ್ದ ನಾಲ್ವರು ಸರ್ಕಾರಿ ಅಧಿಕಾರಿಗಳ ಬಳಿ ಕೋಟ್ಯಂತರ ರೂ. ಆಸ್ತಿ ಪತ್ತೆಯಾಗಿದೆ.

    ಜೂ. 10ರಂದು ಎಸಿಬಿ ಅಧಿಕಾರಿಗಳು ವಿವಿಧ ಇಲಾಖೆಯ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮತ್ತು ಆಪ್ತರ ಮನೆಗಳು ಸೇರಿ 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಅಧಿಕಾರಿಗಳ ಬಳಿ ಕೋಟ್ಯಂತರ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆಯಾಗಿದೆ.

    ಇದನ್ನೂ ಓದಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಲ್. ಸತೀಶ್‌ಕುಮಾರ್‌ಗೆ ಸೇರಿದ ಮೈಸೂರಿನ ಸರಸ್ವತಿಪುರದಲ್ಲಿ 1 ವಾಸದ ಮನೆ, ಬೆಂಗಳೂರು ನಗರದಲ್ಲಿ 2 ್ಲಾಟ್, 5 ಸೈಟ್, 1.17 ಕೆಜಿ ಚಿನ್ನಾಭರಣ, 7 ಕೆಜಿ 290 ಗ್ರಾಂ ಬೆಳ್ಳಿ, 1 ಟೊಯೋಟಾ ಇನ್ನೋವಾ ಕಾರು, 1 ಹೋಂಡಾ ಅಮೇಜ್ ಕಾರು, 1 ಬೈಕ್ ಮತ್ತು 2.92 ಲಕ್ಷ ರೂ. ಪತ್ತೆಯಾಗಿದೆ.

    ಕೋಲಾರ ಜಿಲ್ಲೆ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಎನ್. ರಾಮಕೃಷ್ಣ ಬಳಿ ಕೋಲಾರದಲ್ಲಿ 1 ಮತ್ತು ಬೆಂಗಳೂರಿನಲ್ಲಿ 2 ವಾಸದ ಮನೆಗಳು, ಬೆಂಗಳೂರು ನಗರದಲ್ಲಿ 3 ಸೈಟು, ಬಂಗಾರಪೇಟೆ ತಾಲ್ಲೂಕು ಚಿನ್ನಕಾಮನಹಳ್ಳಿಯಲ್ಲಿ 1 ಎಕರೆ 23 ಗುಂಟೆ ಕೃಷಿ ಜಮೀನು, 877 ಗ್ರಾಂ. ಚಿನ್ನ, 1 ಕೆಜಿ 586 ಗ್ರಾಂ ಬೆಳ್ಳಿ, 1 ಮಾರುತಿ ಸ್ವಿಫ್ಟ್ ಕಾರ್, 3 ಬೈಕ್‌ಗಳು, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮತ್ತು 8.22 ಲಕ್ಷ ರೂ. 26.97 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

    ಇದನ್ನೂ ಓದಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯುವ ದಿನ ಲಾಕ್​ಡೌನ್​..! ಹೀಗಂತ ಮಾಜಿ ಶಿಕ್ಷಣ ಸಚಿವರು ಹೇಳಿದ್ದೇಕೆ?

    ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಯಾಂಪ್ ಆಲಮಟ್ಟಿ ಸಹಾಯಕ ಇಂಜಿನಿಯರ್ ರಾಘಪ್ಪ ಲಾಲಪ್ಪ ಲಮಾಣಿ ಬಳಿ ಬಾಗಲಕೋಟೆಯಲ್ಲಿ 2 ವಾಸದ ಮನೆಗಳು, 1 ಮಾರುತಿ ರಿಟ್ಜ್ ಕಾರ್, 1 ಬೈಕ್, 334 ಗ್ರಾಂ ಚಿನ್ನ, 1 ಕೆಜಿ 277 ಗ್ರಾಂ. ಬೆಳ್ಳಿ, ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿಗಳು, 2.88 ಲಕ್ಷ ರೂ., ಮತ್ತು 5 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

    ಪೆಟ್ರೋಲ್ ಬಂಕ್, ಟ್ರಾಕ್ಟರ್ ಷೋ ರೂಂ ಒಡೆಯ: ರಾಯಚೂರಿನ ಜಿಲ್ಲಾ ನಗರಾಭಿವೃದ್ಧಿ ಕಾರ್ಯನಿರ್ವಹಕ ಇಂಜಿನಿಯರ್ ಗೋಪಶೆಟ್ಟಿ ಮಲ್ಲಿಕಾರ್ಜುನ ಬಳಿ ರಾಯಚೂರಿನಲ್ಲಿ 3 ಮತ್ತು ಬೆಂಗಳೂರಿನಲ್ಲಿ 1 ಮನೆ, ರಾಯಚೂರಿನಲ್ಲಿ 2 ಫ್ಲಾಟ್, ರಾಯಚೂರಿನಲ್ಲಿ 1 ಮತ್ತು ಕೊಪ್ಪಳದಲ್ಲಿ 2 ಸೈಟುಗಳು, 1 ಕೆಜಿ 394 ಗ್ರಾಂ. ಚಿನ್ನ, 10 ಕೆಜಿ 925 ಗ್ರಾಂ ಬೆಳ್ಳಿ ಮತ್ತು 74 ಸಾವಿರ ರೂ. ರಾಯಚೂರು ಜಿಲ್ಲೆಯಲ್ಲಿ 1 ಪೆಟ್ರೋಲ್ ಬಂಕ್, 2 ಟ್ರಾಕ್ಟರ್ ಷೋ ರೂಂಗಳು, 8 ಎಕರೆ 38 ಗುಂಟೆ ಕೃಷಿ ಜಮೀನು, 1 ಹುಂಡೈ ಕಾರು, 1 ಟೊಯೋಟಾ ಇನ್ನೋವಾ ಕಾರು, 1 ಬೈಕ್ ಮತ್ತು 1.4 ಕೋಟಿ ರೂ. ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

    ಈ ನಾಲ್ವರ ವಿರುದ್ಧ ಪ್ರತ್ಯೇಕವಾಗಿ 4 ಪ್ರಕರಣಗಳು ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ. ಸರ್ಕಾರಿ ಅಧಿಕಾರಿಗಳು ಹೊಂದಿರುವ ಆಸ್ತಿ-ಪಾಸ್ತಿಗಳ ಮತ್ತು ಲಾಕರ್‌ಗಳ ಮೂಲದ ಬಗ್ಗೆ ತನಿಖೆ, ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    6 ಮತ್ತು 7ನೇ ತರಗತಿಗೆ ಆನ್​ಲೈನ್​ ಶಿಕ್ಷಣ ಇರುತ್ತಾ-ಇಲ್ವಾ?

    ಬೆಳ್ಳಂಬೆಳಗ್ಗೆಯೇ ಎಸಿಬಿ ದಾಳಿ: ರಾಯಚೂರು ನಗರಾಭಿವೃದ್ಧಿ ಯೋಜನಾ ಕೋಶದ ಇಇಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts