More

    Gold, Silver Price; ಚಿನ್ನ,ಬೆಳ್ಳಿ ಖರೀದಿಸುವುದಾದರೆ ಇಂದಿನ ಬೆಲೆ ಗಮನಿಸಿ

    ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
    22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,240 ರೂ.
    24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,450ರೂ.
    ಬೆಳ್ಳಿ ಬೆಲೆ 1 ಕೆಜಿ: 74,000 ರೂ.

    ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ,
    ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 56,250 ರೂಪಾಯಿ ಇತ್ತು. ಆದರೆ ಇಂದು 56,240 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 10 ರೂಪಾಯಿ ಇಳಿಕೆಯಾಗಿದೆ.

    ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 61.640 ರೂಪಾಯಿ ಇತ್ತು. ಆದರೆ ಇಂದು 61,360ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 90 ರೂಪಾಯಿ ಇಳಿಕೆಯಾಗಿದೆ.

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):
    ಬೆಂಗಳೂರು: 56,240 ರೂ.
    ಮುಂಬೈ: 56,240 ರೂ.
    ದೆಹಲಿ: 56,400 ರೂ.
    ಕೇರಳ: 56,240 ರೂ.
    ಅಹ್ಮದಾಬಾದ್: 56,290 ರೂ
    ಜೈಪುರ್: 56,400 ರೂ

    ಒಂದೆಡೆ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಭಾರತದಂತಹ ದೇಶಗಳಲ್ಲಿ ಆಭರಣಗಳ ಬೇಡಿಕೆ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಚಿನ್ನದ ದರ ತೂಗುಯ್ಯಾಲೆಯಲ್ಲಿ ಮುಂದುವರೆದಿದ್ದು, ನಿನ್ನೆಗೆ ಹೋಲಿಸಿದರೆ ಚಿನ್ನದ ದರ ತುಸು ಇಳಿಕೆಯಾಗಿದೆ.

    ಹಬ್ಬದ ದಿನಗಳು ಹತ್ತಿರ ಬಂದಾಗ ಚಿನ್ನ, ಬೆಳ್ಳಿ ಖರೀದಿ ಮಾಡುವುದು ಭಾರತೀಯ ಸಂಸ್ಕೃತಿಯ ಭಾಗವಾಗಿರುವುದು ಸುಳ್ಳಲ್ಲ. ಹಬ್ಬದ ದಿನಗಳಲ್ಲಿ ಚಿನ್ನಾಭರಣ ಖರೀದಿ ಮಾಡುವುದರಿಂದ ಶುಭವಾಗುತ್ತದೆ ಎಂಬುದು ನಂಬಿಕೆ. ಅಲ್ಲದೇ ಹೀಗೆ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂದೂ ನಂಬಲಾಗುತ್ತದೆ. ಈ ವರ್ಷ ದೀಪಾವಳಿ ಸಂಭ್ರಮ ಹೆಚ್ಚಲು ಚಿನ್ನದ ಬೆಲೆಯೂ ಕಾರಣವಾಗಬಹುದು. ಯಾಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರ ಕುಸಿತವಾಗುತ್ತಲೇ ಇದೆ. ಬೆಳ್ಳಿ ಕೂಡ ಇಳಿಕೆಯ ಹಾದಿಯಲ್ಲಿ ಸಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts