More

    2021ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 68 ಸಾವಿರ ರೂಪಾಯಿಗೆ ಹೆಚ್ಚಳ

    ನವದೆಹಲಿ: ಸದ್ಯ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 50 ಸಾವಿರ ರೂಪಾಯಿ ಆಸುಪಾಸಿನಲ್ಲಿದೆ. ಆದರೆ 2021ರ ವೇಳೆಗೆ ಇದು 68 ಸಾವಿರ ರೂಪಾಯಿ ತಲುಪುವ ಸಾಧ್ಯತೆ ಇದೆ ಎಂದು ಚಿನಿವಾರ ಪೇಟೆ ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಚಿನ್ನದ ಮೇಲೆ ಈಗ ಹೂಡಿಕೆ ಮಾಡುವುದು ಸೂಕ್ತ ಹೌದೋ ಅಲ್ಲವೋ ಎಂಬ ಬಗ್ಗೆ ಸದ್ಯ ಮೂಡಿರುವ ಜಿಜ್ಞಾಸೆಗೆ ಉತ್ತರ ಕಂಡುಕೊಡಲು ಯತ್ನಿಸಿದ್ದಾರೆ.

    ಚಿನಿವಾರ ಪೇಟೆಯ ಪ್ರಕಾರ ಭಾರತದಲ್ಲಿ ಚಿನ್ನದ ಬೆಲೆ ಕಳೆದ ಕೆಲವು ವರ್ಷಗಳಲ್ಲಿ ಶೇ.45 ಹೆಚ್ಚಳವಾಗಿದೆ. ಬೆಲೆಗಳು ಇದಕ್ಕಿಂತಲೂ ಹೆಚ್ಚಾಗುವ ಅವಕಾಶ ಇದೆಯೇ ಇಲ್ಲವೇ ಎಂಬ ಜಿಜ್ಞಾಸೆ ಎಲ್ಲರಲ್ಲೂ ಮೂಡಿದೆ. ಆದರೆ, ವಾಸ್ತವದಲ್ಲಿ ದರ ಹೆಚ್ಚಳಕ್ಕೆ ಸದ್ಯದ ಜಾಗತಿಕ ಪರಿಸ್ಥಿತಿ ಪೂರಕವಾಗಿದೆ ಎಂದೇ ತಜ್ಞರು ಹೇಳುತ್ತಿದ್ದಾರೆ.

    ನಿಜ ಹೇಳಬೇಕೆಂದರೆ, ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗಲು ಪೂರಕವಾದ ವಾತಾವರಣ ಸದ್ಯ ಇದೆ. ಮಧ್ಯಂತರ ಅವಧಿಗೆ ಇದರ ಮೇಲೆ ಹೂಡಿಕೆ ಮಾಡುವುದು ಸೂಕ್ತ ಎಂದು ಖಾಸಗಿ ಹೂಡಿಕೆದಾರ ಸಲಹಾ ಸಂಸ್ಥೆಯ ಉಪಾಧ್ಯಕ್ಷ ನವನೀತ್​ ದಮಾನಿ ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: Photos: ಲಡಾಖ್​ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ಮೋದಿ ಭೇಟಿ

    ಇವರ ಪ್ರಕಾರ ವಿಶ್ವದ ಪ್ರಮುಖ ಬ್ಯಾಂಕ್​ಗಳು ಬಡ್ಡಿ ದರವನ್ನು ಶೂನ್ಯ ದರಕ್ಕೆ ಇಳಿಸಿವೆ. ಮುಂದಿನ ದಿನಗಳಲ್ಲಿ ಇದು ಮೈನಸ್​ಗೂ ಇಳಿಯುವ ಸಾಧ್ಯತೆ ಇದೆ. ನಗದು ಚಲಾವಣೆಗೆ ಪೂರಕವಾಗುವಂತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದೆಲ್ಲದರ ಪರಿಣಾಮವಾಗಿ ಹಳದಿ ಲೋಹದ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ.

    ಕೇಂದ್ರೀಯ ಬ್ಯಾಂಕ್​ಗಳು ನಗದು ಚಲಾವಣೆಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ 24ರಿಂದ 36 ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಷೇರುಪೇಟೆಯ ಹೂಡಿಕೆಗಳ ಮೌಲ್ಯ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ, ಅತ್ಯಂತ ಸುರಕ್ಷಿತ ಎನಿಸಿದ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ವಿಶ್ವದ ಎಲ್ಲ ಕರೆನ್ಸಿಗಳ ಮೌಲ್ಯವೂ ಸ್ಥಿರೀಕರಣಗೊಂಡರೂ ಚಿನ್ನಕ್ಕೆ ಹೋಲಿಸಿದರೆ ಅವುಗಳ ಮೌಲ್ಯ ಕಡಿಮೆಯಾಗುವ ಅಂದಾಜಿದೆ.

    ಇದನ್ನೂ ಓದಿ: ದೇಶದಲ್ಲಿ ಸ್ಥಿರವಾಗಿ ಕ್ಷೀಣಿಸುತ್ತಿದೆ ಯುವಶಕ್ತಿ, ಹಿರಿಯ ನಾಗರಿಕರ ದೇಶವಾಗುತ್ತಾ ಭಾರತ?

    ಹಾಗಾಗಿ ದೇಶಿಯವಾಗಿ ಚಿನ್ನದ ಬೆಲೆ 2020ರಲ್ಲಿ ಸರ್ವಕಾಲಿಕ ದಾಖಲೆಯ 53 ಸಾವಿರ ರೂ.ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ, 2021ರ ಕೊನೆಯ ವೇಳೆಗೆ 68 ಸಾವಿರ ರೂಪಾಯಿ ತಲುಪಿದರೂ ಅಚ್ಚರಿಯೇನಿಲ್ಲ ಎಂದು ದಮಾನಿ ಹೇಳಿದ್ದಾರೆ.

    ಭಾರತೀಯರು ಸಾಮಾನ್ಯವಾಗಿ ಮದುವೆ, ಹಬ್ಬ-ಹರಿದಿನಗಳಂದು ಚಿನ್ನವನ್ನು ಖರೀದಿಸುತ್ತಾರೆ. ಅವರ ಪ್ರಕಾರ ಚಿನ್ನದ ಖರೀದಿ ಹೂಡಿಕೆಗಿಂತಲೂ ಹೆಚ್ಚಿನದಾಗಿ ಅವಶ್ಯಕತೆಯ ಆಧಾರವಾಗಿರುತ್ತದೆ. ಹಾಗಾಗಿ ಭಾರತೀಯರ ಪಾಲಿಗೆ ಚಿನ್ನದ ಖರೀದಿಗೆ ಸೂಕ್ತ ಸಮಯ ಎಂಬುದೇ ಇಲ್ಲ ಎಂದರೂ ತಪ್ಪಾಗುವುದಿಲ್ಲ. ಆದರೆ ಹೂಡಿಕೆದಾರರ ವಿಷಯವಾಗಿ ಹೇಳುವುದಾದರೆ, ಕೋವಿಡ್​-19ರಂಥ ತುಂಬಾ ಅನಿಶ್ಚಿತತೆಯ ಸಮಯದಲ್ಲೂ ಚಿನ್ನ ಎರಡು ಅಂಕಿಗಳ ಲಾಭವನ್ನು ತಂದುಕೊಟ್ಟಿದೆ. ಹಾಗಾಗಿ, ಹೂಡಿಕೆದಾರರಿಗೆ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಗಣ್ಯರ ಹತ್ಯೆಗೂ ಸ್ಕೆಚ್ ಹಾಕಿದ್ದ ದುಬೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts