More

    ಮಹಿಳೆಯರಿಗೆ ಕೋಟ್ಯಂತರ ರೂ. ವಂಚನೆ, ಮಂಗಳಮುಖಿಯಿಂದ ಬಯಲಾಯ್ತು ಸ್ಫೋಟಕ ರಹಸ್ಯ!

    ಮಂಡ್ಯ: ಅವನ ಬ್ಯಾಂಕ್​ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ 20%, ತಿಂಗಳಿಗೆ 40% ಬಡ್ಡಿ ಕೊಡ್ತಾನೆ..!

    ಮಂಗಳಮುಖಿ ಸೇರಿದಂತೆ ಆರ್ಥಿಕ ಸ್ಥಿತಿವಂತ ನಾರಿಯರು ಮನೆಯಲ್ಲಿದ್ದ ಚಿನ್ನಾಭರಣ, ಲಕ್ಷ ಲಕ್ಷ ನಗದನ್ನು ಅವನ ಬ್ಯಾಂಕಿನಲ್ಲಿ ಸುರಿದರು. ಆರಂಭದಲ್ಲಿ ಎಲ್ಲವೂ ಅಂದುಕೊಂಡಂತೆ ಚೆನ್ನಾಗಿಯೇ ಇತ್ತು. ತದನಂತರ ತನ್ನ ಚಿನ್ನಾಭರಣ ವಾಪಸ್​ ಕೊಡುವಂತೆ ಮಂಗಳಮುಖಿಯೊಬ್ಬರು ಆತನಿಗೆ ದುಂಬಾಲು ಬೀಳುತ್ತಿದ್ದಂತೆ ಬಯಲಾಯ್ತು ಮಂಡ್ಯ ಜಿಲ್ಲೆಯಲ್ಲಿ ಸುಮಾರು 20 ಕೋಟಿ ರೂ. ವಂಚನೆ ಪ್ರಕರಣ.

    ಗುತ್ತಲು ಬಡಾವಣೆಯ ಸೋಮಶೇಖರ್ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಂಗಳಮುಖಿಯರನ್ನೇ ಟಾರ್ಗೆಟ್ ಮಾಡಿ ವ್ಯವಹಾರ ಕುದುರಿಸಿ ಕೋಟ್ಯಂತರ ರೂ. ಲಪಟಾಯಿಸಿದ್ದಾನೆ. ಖಾಸಗಿ ಫೈನಾನ್ಸ್​ನ ಎಕ್ಸಿಕ್ಯೂಟೀವ್ ಆಗಿದ್ದ ಸೋಮಶೇಖರ್, ಶೋಕಿಗೆಂದು ಹಣ ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಅಧಿಕ ಬಡ್ಡಿ ಕೊಡುವುದಾಗಿ ಹೇಳಿ ಪರಿಚಯಸ್ಥ ಮಹಿಳೆಯರಿಂದ ಚಿನ್ನಾಭರಣ ಸಂಗ್ರಹಿಸುತ್ತಿದ್ದ. ಬೇರೆಯವರಿಂದಲೂ ಆಭರಣ ಕೊಡಿಸಿದರೆ ಕಮಿಷನ್​ ಕೊಡುವುದಾಗಿ ಹೇಳಿ, ಒಂದೆರಡು ತಿಂಗಳಷ್ಟೆ ಹಣ ಕೊಡುತ್ತಿದ್ದ. ಆದರೆ, ಆಭರಣ ನೀಡಿದ್ದಕ್ಕೆ ಅವರಿಗೆ ಯಾವುದೇ ದಾಖಲೆ ಕೊಡುತ್ತಿರಲಿಲ್ಲ. ಕೇಳಿದವರಿಗೆ ಫೈನಾನ್ಸ್​ನಲ್ಲಿಯೇ ಅಡವಿಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದ. ಅಧಿಕ ಬಡ್ಡಿ ಕೊಡುವ ಆಸೆ ಹುಟ್ಟಿಸಿ ಕೆಲವರಿಂದ ಲಕ್ಷಾಂತರ ರೂ. ಪಡೆದುಕೊಂಡಿದ್ದಾನೆ. ಈ ರೀತಿ ಯಾಮಾರಿಸುತ್ತಿದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಜತೆಗೆ ನಗರದಲ್ಲಿ ಮನೆ ಕಟ್ಟಿಸುತ್ತಿದ್ದ.

    ಮಹಿಳೆಯರಿಗೆ ಕೋಟ್ಯಂತರ ರೂ. ವಂಚನೆ, ಮಂಗಳಮುಖಿಯಿಂದ ಬಯಲಾಯ್ತು ಸ್ಫೋಟಕ ರಹಸ್ಯ!ಚಿನ್ನಾಭರಣ, ಹಣ ಪಡೆದವರಿಗೆ ಆಗಸ್ಟ್​ನಿಂದ ಹಣ ಕೊಡುವುದನ್ನು ನಿಲ್ಲಿಸಿದ್ದಾನೆ. ಇದರಿಂದಾಗಿ ಚಿನ್ನ ಹಾಗೂ ಹಣ ಕೊಟ್ಟವರು ಈತನನ್ನು ಹುಡುಕಲಾರಂಭಿಸಿದ್ದಾರೆ. ಈ ನಡುವೆ ಮಂಗಳಮುಖಿಯೊಬ್ಬರು ಆಭರಣ ಬಿಡಿಸಿಕೊಡುವಂತೆ ಹಲವು ಬಾರಿ ಒತ್ತಾಯಿಸಲು ಶುರು ಮಾಡಿದಾಗ ಒಂದು ತಿಂಗಳ ಹಿಂದೆ ಮನೆಯಿಂದ ಪರಾರಿಯಾಗಿದ್ದ. ಈತನ ತಾಯಿ ತನ್ನ ಪುತ್ರ ಕಾಣೆಯಾಗಿದ್ದಾನೆಂದು ದೂರು ಕೂಡ ಕೊಟ್ಟಿದ್ದರು. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು, ಮಂಗಳಮುಖಿಯನ್ನು ವಿಚಾರಣೆ ನಡೆಸಿದಾಗ ಅರ್ಧ ಕೆಜಿ ಚಿನ್ನ ಕೊಡದೆ ವಂಚಿಸಿದ್ದಾನೆಂದು ಸೋಮಶೇಖರ್​ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರುತ್ತಿದ್ದಂತೆ ಬಯಲಾಗಿದೆ ಮಹಾ ವಂಚನೆ!

    ಮಂಡ್ಯ ಪಶ್ಚಿಮ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಗೆದಷ್ಟು ಬಯಲಾಗ್ತಿದೆ ವಂಚಕನ ಬೃಹತ್ ದೋಖಾ! ದೊಡ್ಡ ದೊಡ್ಡ ಕುಟುಂಬದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆತ, ಅವರಿಂದ ಹಣ-ಆಭರಣ ಪೀಕಿದ್ದ. ಮಣಪ್ಪುರಂ ಗೋಲ್ಡ್ ಲೋನ್​ನ ಸಿಬ್ಬಂದಿಯನ್ನೂ ಆತ ಯಾಮಾರಿಸಿದ್ದಾನೆ.

    ಇನ್ನು ಲಾಕ್​ಡೌನ್​ ಸಮಯದಲ್ಲಿಯೇ ಈತ ಮಹಿಳೆಯರಿಂದ ಹೆಚ್ಚು ಆಭರಣ ಹಾಗೂ ಹಣ ವಸೂಲಿ ಮಾಡಿದ್ದಾನೆ. ಮಂಗಳಮುಖಿ, ಖಾಸಗಿ ಬ್ಯಾಂಕ್​ ಉದ್ಯೋಗಿ, ಗೃಹಿಣಿಯರು ಸೇರಿದ್ದಾರೆ. ಕೆಲವರು ಮರ್ಯಾದೆಗೆ ಅಂಜಿ, ಕುಟುಂಬಸ್ಥರಿಗೆ ಗೊತ್ತಿಲ್ಲದೆ ವ್ಯವಹಾರ ಮಾಡಿದ್ದ ಅದೆಷ್ಟೋ ಮಂದಿ ಮೋಸದ ಬಗ್ಗೆ ಹೇಳಿಕೊಳ್ಳುತ್ತಿಲ್ಲ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸದ್ಯ 33 ಮಂದಿ ಹಣ-ಆಭರಣ ಹೂಡಿಕೆ ಮಾಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಜತೆಗೆ ನಗರದ ಚಿನ್ನಾಭರಣ ಮಾರಾಟಗಾರರ ಮನೆಯ ಮಹಿಳೆಯೊಬ್ಬರು ಶಾಮೀಲಾಗಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಆದರೆ ಇದಕ್ಕೆ ಇನ್ನು ಖಚಿತ ಸಾಕ್ಷ್ಯ ಸಿಕ್ಕಿಲ್ಲ ಎನ್ನುತ್ತಾರೆ ಪೊಲೀಸರು.

    ಮಹಿಳೆಯರನ್ನು ಯಾಮಾರಿಸಿ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ್ದಾನೆಂಬ ಆರೋಪದಲ್ಲಿ ಸೋಮಶೇಖರ್​ ಎಂಬಾತನನ್ನು ಬಂಧಿಸಲಾಗಿದೆ. ಸದ್ಯಕ್ಕೆ ತೀವ್ರ ವಿಚಾರಣೆ ನಡೆಯುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಮೋಸವಾಗಿದೆ ಎನ್ನುವುದು ತಿಳಿಯಬೇಕಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದ್ದಾರೆ.

    ಪಿಪಿಇ ಕಿಟ್​ ಧರಿಸಿ ಬಂದ ಗೆಳೆಯನೊಂದಿಗೆ ಟೆಕ್ಕಿ ಪತ್ನಿ ಎಸ್ಕೇಪ್​! ಬೆಚ್ಚಿ ಬೀಳ್ತೀರಿ ಆಕೆಯ ಮಾಸ್ಟರ್​ ಪ್ಲ್ಯಾನ್​ ಕೇಳಿದ್ರೆ…

    ಗದ್ದುಗೆ ಒಳಗೆ ಮಗು ಅಳುವ ಶಬ್ದ ಕೇಳಿಸುತ್ತಿತ್ತು… ಕುತೂಹಲದಿಂದ ಹೋದವರಿಗೆ ಶಾಕ್​ ಕಾದಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts