More

    ವೈಜ್ಞಾನಿಕ ಕೃಷಿಗೆ ಮಹತ್ವ ನೀಡಿ

    ಗೊಳಸಂಗಿ: ಅನ್ನದಾತರು ಆದಿಕಾಲದ ಬೆಳೆಗಳಿಗೆ ಜೋತು ಬೀಳದೆ ವೈಜ್ಞಾನಿಕ ಕೃಷಿಗೆ ಒತ್ತು ನೀಡಿ ತಮ್ಮ ಬದುಕನ್ನು ಬಂಗಾರವಾನ್ನಾಗಿಸಿಕೊಳ್ಳಬೇಕೆಂದು ಶಾಸಕ, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದರು.
    ಸಮೀಪದ ಮುತ್ತಗಿ ಗ್ರಾಮದಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ವೈಜ್ಞಾನಿಕ ಬೆಳೆಗಳಾದ ದಾಳಿಂಬೆ, ದ್ರಾಕ್ಷಿ, ಎಲೆಬಳ್ಳಿ, ಈರುಳ್ಳಿ, ಕಬ್ಬು ಸಲು ರೈತರ ಸಂಕಷ್ಟ ನಿವಾರಣೆಗೆ ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿರುವ 14 ಸಕ್ಕರೆ ಕಾರ್ಖಾನೆಗಳ ಪೈಕಿ ನಂದಿ ಸಕ್ಕರೆ ಕಾರ್ಖಾನೆ ಈ ಬಾರಿ ಹೆಚ್ಚಿನ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಯ್ದಿದೆ. ಜತೆಗೆ ಸ್ವತಃ ತಾನೇ ಪೆಟ್ರೊಲೀಯಂ ಉತ್ಪಾದನೆಯನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ರಾಜ್ಯದಲ್ಲಿರುವ 14 ಹಾಲು ಒಕ್ಕೂಟಗಳ ಪೈಕಿ ವಿಜಯಪುರ ಜಿಲ್ಲೆಯ ಒಕ್ಕೂಟ ಮಾತ್ರ ಈ ವರ್ಷ 4 ಕೋಟಿ ರೂ., ಲಾಭ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ರೈತರು ಸಂಘಕ್ಕೆ ನೀಡುವ ಪ್ರತಿ ಲೀಟರ್ ಹಾಲಿಗೆ 5 ರೂ., ಪ್ರೋತ್ಸಾಹ ಧನ ಸಿಗುತ್ತಿದ್ದು, ಹೈನುಗಾರಿಕೆಯಿಂದಲೂ ತಮ್ಮ ಬದುಕಿನಲ್ಲಿ ಬೆಳಕು ಕಾಣಬಹುದಾಗಿದೆ.

    ಸಹಕಾರಿ ಸಂಘದಲ್ಲಿ ಪಡೆದ ರೈತರು ಪಡೆದಂತ ಸಾಲ ಜಿಲ್ಲೆಯಲ್ಲಿ ಈ ಬಾರಿ 1300 ಕೋಟಿ ರೂ., ಮನ್ನಾ ಮಾಡಿರುವುದು ನಮ್ಮ ಹೆಗ್ಗಳಿಕೆಯಾಗಿದೆ. 2021ಕ್ಕೆ ಶತಮಾನ ಪೂರೈಸಲಿರುವ ಮುತ್ತಗಿ ಪಿಕೆಪಿಎಸ್ ನೂತನ ಕಟ್ಟಡವೂ ಸೇರಿ ಸ್ಥಳೀಕರ ಬೇಡಿಕೆಯಂತೆ ಗೋದಾಮು ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು. ಮುತ್ತಗಿ-ಪಾಂಡುರನಾ ಸಂಸ್ಥಾನ ಹಿರೇಮಠದ ವೀರ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪಿಕೆಪಿಎಸ್ ಅಧ್ಯಕ್ಷ ರಮೇಶ ಸೂಳಿಬಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಮಾತನಾಡಿದರು.
    ಸಂಘದ ಉಪಾಧ್ಯಕ್ಷ ಶಿವಶಂಕರಗೌಡ ಬಿರಾದಾರ, ಭೀಮಶಿ ಜಗ್ಗಲ, ಜಗದೇವಪ್ಪ ಮನಹಳ್ಳಿ, ವೈ.ಎ. ಗೊಲ್ಲರ, ಪಿಕೆಪಿಎಸ್ ನಿರ್ದೇಶಕರು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts