More

    ವದಂತಿಗೆ ಕಿವಿಗೊಡದಿರಿ

    ಗೊಳಸಂಗಿ: ಭೂಮಿಯಲ್ಲಿ ಅಂತರ್ಜಲ ಹೆಚ್ಚಾದ ಪರಿಣಾಮ ಭೂಕಂಪನದಂತಹ ಸ್ಫೋಟಕ ಶಬ್ದಗಳು ಕೇಳಿ ಬರುವುದು ಸಾಮಾನ್ಯ. ಅದನ್ನೇ ತಪ್ಪಾಗಿ ಭಾವಿಸಿ ಭೀತಿಗೊಳಪಡಬಾರದೆಂದು ಉಪವಿಭಾಗಾಧಿಕಾರಿ ಬಲರಾಮ ನಾಯಕ ಹೇಳಿದರು.
    ಸಮೀಪದ ಮಸೂತಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಭಾರಿ ಕರ್ಕಶವಾದ ಶಬ್ದ ಕೇಳಿ ಬರುವ ಜತೆಗೆ ಭೂಕಂಪನ ಆಗಿದೆ ಎಂಬ ಮಾಹಿತಿ ಮೇರೆಗೆ ಮಂಗಳವಾರ ಮಸೂತಿ ಗ್ರಾಮದ ತಳೇವಾಡ, ಕಲಗುರ್ಕಿ ರಸ್ತೆಯಲ್ಲಿರುವ ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಗ್ರಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
    ಅದಕ್ಕೂ ಮುನ್ನ ಗ್ರಾಮದ ಮುಖಂಡರಾದ ಕೆ.ವಿ. ಕುಲಕರ್ಣಿ, ಎಸ್.ಎಸ್.ಗರಸಂಗಿ, ಎಸ್.ಕೆ. ಹಂಗರಗಿ, ಭೀಮು ಪತ್ತಾರ ಮಾತನಾಡಿ, ಈಗಾಗಲೇ ನಮ್ಮೂರ ಪಕ್ಕದ ಮಲಘಾಣ, ಕೂಡಗಿ ಗ್ರಾಮಗಳಲ್ಲಿ ಭೂಕಂಪನ ಆಗಿರುವ ಸುದ್ದಿ ಇದೆ. ಈಗ ಆ ಭೀತಿ ನಮ್ಮ ಗ್ರಾಮವನ್ನೇ ಆವರಿಸಿರುವುದು ಗ್ರಾಮಸ್ಥರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.
    ಕೊಲ್ಹಾರ ತಹಸೀಲ್ದಾರ್ ಎಂ.ಎ.ಎಸ್. ಬಾಗವಾನ್, ಎಪಿಎಂಸಿ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಸಿ.ಪಿ. ಪಾಟೀಲ, ತಾಪಂ ಸದಸ್ಯ ಗುರಲಿಂಗ ಯರಂತೇಲಿ, ಪಿಡಿಒ ಐ.ಜಿ. ಹೊಸಮಠ, ಭೀಮಾಶಂಕರ ಬಿಸ್ಟಗೊಂಡ, ಚನ್ನಪ್ಪ ಸಾಲಳ್ಳಿ, ಆನಂದ ಬಿಸ್ಟಗೊಂಡ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts