More

    ಜಾತಿಭೇದ ಅಳಿಯಲು ದಾಸ ಸಾಹಿತ್ಯ ಪೂರಕ

    ಗೊಳಸಂಗಿ: ಜಗತ್ತಿನಾದ್ಯಂತ ವಿಷಬೀಜದಂತೆ ಹೆಮ್ಮರವಾಗಿ ಬೆಳೆದ ಜಾತಿ ಭೇದವನ್ನಳಿಸಲು ಕನಕದಾಸರ ವಚನ ಸಾಹಿತ್ಯ ಇಂದಿಗೂ ಜನಜನಿತವಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಸ್ಮರಿಸಿದರು.
    ಗ್ರಾಮದಲ್ಲಿ ಬೀರಲಿಂಗೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಶುಕ್ರವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

    ಹಾಲಿನಷ್ಟೇ ಮೃದು ಸ್ವಭಾವದ ಹಾಲುಮತ ಸಮಾಜ ಬಾಂಧವರ ಏಕತೆಯಿಂದಾಗಿ ಸಿದ್ದರಾಮಯ್ಯರಂಥ ವ್ಯಕ್ತಿಯೊಬ್ಬ ದೈತ್ಯ ಶಕ್ತಿಯಾಗಿ ಬೆಳೆದು ಈ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದ ಶಾಸಕರು, ನೂತನ ದೇವಮಂದಿರ ಕಿಡಿಗೇಡಿಗಳ ಕೆಟ್ಟ ದುರಭ್ಯಾಸಗಳ ತಾಣವಾಗದೆ ಶಾಂತಿಯ ಪ್ರತೀಕವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
    ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಲದೇವ ಬೀರಲಿಂಗೇಶ್ವರ ಗುಡಿ ಕಟ್ಟಿದ ಸಮಾಜ ಬಾಂಧವರು ಶೈಕ್ಷಣಿಕ ರಂಗದಲ್ಲಿಯೂ ಮುನ್ನೆಲೆಗೆ ಬಂದು ತಮ್ಮ ಮಕ್ಕಳ ಭವಿಷ್ಯದ ದಾರಿಗೆ ಬೆಳಕಾಗಬೇಕೆಂದರು.
    ಬಸವನ ಸಂಗೋಳಗಿ- ತಳೇವಾಡ ಸೋಮೇಶ್ವರ, ಅಮೋಘ ಸಿದ್ಧೇಶ್ವರ ಸಿದ್ದಯೋಗಾಶ್ರಮದ ಅಭಿನವ ಸಿದ್ದರತ್ನ ಮದಗೊಂಡ ಮಹಾರಾಜರು ಆಶೀರ್ವಚನ ನೀಡಿದರು.

    ಮುತ್ತಗಿ ಗೌರಿಶಂಕರ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಮೇಶ ಸೂಳಿಬಾವಿ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ರಾಜು ಕಂಬಾಗಿ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಂಗಮೇಶ ಓಲೇಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು.
    ಜಿಪಂ ಸದಸ್ಯರಾದ ಸಂತೋಷ ನಾಯಕ, ಶಾಂತಾಬಾಯಿ ನಾಗರಾಳ, ಕಲ್ಲಪ್ಪ ಮಟ್ಟಿ, ಬೀರಪ್ಪ ಸಾಸನೂರ, ತಾಪಂ ಸದಸ್ಯರಾದ ಅಮೃತ ಯಾಧವ, ಈಶ್ವರ ಜಾಧವ, ಶಿವಾನಂದ ಅಂಗಡಿ, ಎಪಿಎಂಸಿ ಸದಸ್ಯ ಸುರೇಶ ತಳವಾರ, ಪಿಎಪಿಎಂಸಿ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ, ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ರಾಜು ಯರನಾಳ, ಸಾಹಿತಿ ಕಾ.ಹು. ಬಿಜಾಪುರ ಮತ್ತಿತರರಿದ್ದರು.
    ಎಸ್‌ಆರ್‌ಎಡಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ ಸ್ವಾಗತಿಸಿದರು. ಶಿಕ್ಷಕರಾದ ಮಹೇಶ ಗಾಳಪ್ಪಗೋಳ ನಿರೂಪಿಸಿದರು. ವಿರುಪಾಕ್ಷಿ ದಳವಾಯಿ ವಂದಿಸಿದರು.

    ಮನಸೂರೆಗೊಂಡ ಗ್ರಾಮೀಣ ಕ್ರೀಡೆಗಳು

    ಜಾತ್ರಾ ನಿಮಿತ್ತ ಶನಿವಾರ ನಡೆದ ಗ್ರಾಮೀಣ ಕ್ರೀಡೆಗಳಾದ ತೆಕ್ಕಿ ಬಡಿದು ಚೀಲ ಎತ್ತುವ ಸ್ಪರ್ಧೆ, ಗುಂಡು ಎತ್ತುವ ಸ್ಪರ್ಧೆ, ಸಿಡಿಗಲ್ಲು ಎತ್ತುವ ಸ್ಪರ್ಧೆ ಮತ್ತು ಡೊಳ್ಳಿನ ಹಾಡುಗಾರಿಕೆ ಅಸಂಖ್ಯಾತ ಭಕ್ತರ ಮನಸೂರೆಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts