More

    500 ಎಕರೆ ಜಮೀನಿಗೆ ನೀರಾವರಿ

    ಗೊಳಸಂಗಿ: ಬಸವನಬಾಗೇವಾಡಿ ಮತಕ್ಷೇತ್ರ ವ್ಯಾಪ್ತಿಯ ಮುಳವಾಡ ಏತ ನೀರಾವರಿ 3ನೇ ಹಂತದಡಿ ಹೂವಿನಹಿಪ್ಪರಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ ಮೂಲಕ ಮುತ್ತಗಿ ಜಿಲ್ಲಾ ಪಂಚಾಯಿತಿ ಮಾರ್ಗವಾಗಿ ಹರಿಸಲಾಗುವ ನೀರಿನಿಂದ ಈ ಭಾಗದ 500 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ಸಮೀಪದ ಮುತ್ತಗಿ ಬಳಿ 38.64ಲಕ್ಷ ರೂ.ವೆಚ್ಚದಲ್ಲಿ ಕೆರೆ ತುಂಬುವ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
    ಬರದ ನಾಡೆನಿಸಿದ್ದ ವಿಜಯಪುರ ಜಿಲ್ಲೆ ಇಂದು ಬಂಗಾರ ಖಣಿ ಆಗುವ ಸುಯೋಗ ಒದಗಿಬಂದಿದೆ. ಇದಕ್ಕೆಲ್ಲ ಬಸವನಬಾಗೇವಾಡಿ ತಾಲೂಕಿನ ರೈತರ ತ್ಯಾಗವೇ ಕಾರಣ. ಇಲ್ಲಿನ ರೈತರು ಆಲಮಟ್ಟಿ ಅಣೆಕಟ್ಟು, ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಮತ್ತು ಪವನ ವಿದ್ಯುತ್ ಸ್ಥಾವರಕ್ಕೆ ತಮ್ಮ ಫಲವತ್ತಾದ ಭೂಮಿ ತ್ಯಾಗ ಮಾಡಿದ್ದಾರೆ ಎಂದರು.

    ಗೌರಿಶಂಕರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರಮೇಶ ಸೂಳಿಬಾವಿ, ಟಿಎಪಿಎಂಎಸ್ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ಉಣ್ಣಿಬಾವಿ ಅಧ್ಯಕ್ಷತೆ ವಹಿಸಿದ್ದರು. ಅಪ್ಪುಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ನಿರ್ದೇಶಕಿ ಡಾ.ಪದ್ಮಾವತಿ ದೊಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಭೀಮಶಿ ಜಗ್ಗಲ, ಗ್ರಾಪಂ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ಎಚ್.ಜಿ.ಕಮತಗಿ ಇತರರಿದ್ದರು.

    ಕುರಿಗಾರರಿಗೆ ಪರಿಹಾರ ವಿತರಣೆ
    ಕೂಡಗಿ ಬಳಿ ರೈಲು ಹಾಯ್ದು ಇತ್ತೀಚೆಗೆ ಮೃತಪಟ್ಟಿದ್ದ 96 ಕುರಿಗಳ ಮಾಲೀಕರಾದ ತಳೇವಾಡ ಗ್ರಾಮದ 4 ಜನ ಸಂತ್ರಸ್ತ ಕುರಿಗಾರರಿಗೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರದ ಧನದ ಚೆಕ್ ವಿತರಿಸಲಾಯಿತು. ಶಿವಪ್ಪ ಮೂಕನವರ ಅವರಿಗೆ 98,500 ರೂ., ಚಂದಪ್ಪ ಕರಿಗೇರ ಅವರಿಗೆ 2.09 ಲಕ್ಷ ರೂ., ಶೇಕಪ್ಪ ಮೂಕನವರ ಅವರಿಗೆ 1.12 ಲಕ್ಷ ರೂ., ಮಲ್ಲಪ್ಪ ಕಾಡಸಿದ್ಧ ಅವರಿಗೆ 5,000 ರೂ. ಮೊತ್ತದ ಚೆಕ್ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts