More

    ‘ಹೆಚ್ಚು ಮದ್ಯ ಕುಡಿಸಿ, ಹೆಚ್ಚು ಆದಾಯ ಗಳಿಸಿ’; ಸರ್ಕಾರದಿಂದ ಅಬಕಾರಿ ಆದಾಯ ಗುರಿ

    ಬೆಂಗಳೂರು: ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದಾಯ ಸಂಗ್ರಹ ಗುರಿಯಲ್ಲಿ 4,420 ಕೋಟಿ ರೂ. ಹೆಚ್ಚಿಸಿದೆ. ಪ್ರಸಕ್ತ ವರ್ಷ ಬಜೆಟ್‌ನಲ್ಲಿಯೂ ಮದ್ಯ ದರವನ್ನು ಹೆಚ್ಚಿಸಿಲ್ಲ. ಹೀಗಿದ್ದರೂ, ದರ ಏರಿಸುವ ಬದಲು ‘ಜನರಿಗೆ ಹೆಚ್ಚು ಮದ್ಯ ಕುಡಿಸಿ, ಹೆಚ್ಚು ಆದಾಯ ಗಳಿಸಿ’ ತತ್ವವನ್ನು ಸರ್ಕಾರ ಅಳವಡಿಸಿಕೊಂಡಿದೆ.

    ಇದರಿಂದಾಗಿ ರಾಜ್ಯದ ಶೇ.85 ಹಳ್ಳಿಗಳಲ್ಲಿ ಈಗಾಗಲೇ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಇನ್ನಷ್ಟು ಶಕ್ತಿಯನ್ನು ಸರ್ಕಾರವೇ ನೀಡಿದಂತಾಗಿದೆ. ಪ್ರತಿ ವರ್ಷ ಸಾವಿರಾರು ಪ್ರಕರಣಗಳು ದಾಖಲಾದರೂ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿಲ್ಲ. ನಾಮ್‌ಕೇವಾಸ್ತೆ ಎಂಬಂತೆ ಅಧಿಕಾರಿಗಳು ಲಂಚ ಪಡೆದು ದಾಖಲಿಸಿದ ಪ್ರಕರಣಗಳನ್ನು ಮುಚ್ಚು ಹಾಕುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮದ್ಯದ ನಶೆಯಿಂದ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಿರುವುದು ಆತಂಕ ಮೂಡಿದೆ.

    ಇದನ್ನೂ ಓದಿ: ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ

    ಅಬಕಾರಿ ಆದಾಯದಲ್ಲಿ ಹೆಚ್ಚಳ: ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆ ಮೀರಿ ಹೆಚ್ಚು ಮದ್ಯ ಆದಾಯ ಹರಿದು ಬಂದಿದೆ. 2021-22 ರಲ್ಲಿ ಅಬಕಾರಿ ಇಲಾಖೆಗೆ ಸರ್ಕಾರ ನೀಡಿದ್ದ 24,580 ಕೋಟಿ ರೂ. ರಾಜಸ್ವ ಗುರಿಕ್ಕಿಂತ 26,276 ಕೋಟಿ ರೂ. ಆದಾಯ ಸಂಗ್ರಹಿಸಿದ್ದು, ಇದರಲ್ಲಿ 1,697 ಕೋಟಿ ರೂ. ನಿಗದಿತ ಗುರಿಕ್ಕಿಂತ ಹೆಚ್ಚು ಆದಾಯ ಬಂದಿದೆ. 2020-21ನೇ ಸಾಲಿಗೆ ಹೋಲಿಸಿದರೆ ಈ ಬಾರಿ ಮದ್ಯದ ಆದಾಯದಲ್ಲಿ ಶೇ.12.62 ಹೆಚ್ಚಳವಾಗಿದೆ. 2022-23ನೇ ಸಾಲಿನಲ್ಲಿ ಇಲಾಖೆಗೆ ಸರ್ಕಾರ 29 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಿದೆ. 2021ರ ಏಪ್ರಿಲ್‌ನಿಂದ 22ರ ಮಾರ್ಚ್‌ವರೆಗೆ 660 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ 268 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದೆ. 2021ರ ಏಪ್ರಿಲ್‌ನಲ್ಲಿ 2,202 ಕೋಟಿ ರೂ., ಮೇನಲ್ಲಿ 1,474 ಕೋಟಿ ರೂ., ಜೂನ್‌ನಲ್ಲಿ 2,231 ಕೋಟಿ ರೂ, ಜುಲೈನಲ್ಲಿ 2,223 ಕೋಟಿ ರೂ, ಆಗಸ್ಟ್‌ನಲ್ಲಿ 2,094 ಕೋಟಿ ರೂ., ಸೆಪ್ಟಂಬರ್‌ನಲ್ಲಿ 2,172 ಕೋಟಿ ರೂ., ಅಕ್ಟೋಬರ್‌ನಲ್ಲಿ 2,219 ಕೋಟಿ ರೂ., ನವೆಂಬರ್‌ನಲ್ಲಿ 2,221 ಕೋಟಿ ರೂ., ಡಿಸೆಂಬರ್‌ನಲ್ಲಿ 2,598 ಕೋಟಿ ರೂ., ಜನವರಿಯಲ್ಲಿ 2,116 ಕೋಟಿ ರೂ., ಫೆಬ್ರವರಿಯಲ್ಲಿ 2,175 ಕೋಟಿ ರೂ. ಹಾಗೂ ಮಾರ್ಚ್‌ನಲ್ಲಿ 2,552 ಕೋಟಿ ರೂ. ಆದಾಯ ಮದ್ಯ ವಹಿವಾಟುಗಳಿಂದ ಬಂದಿದೆ.

    ಇದನ್ನೂ ಓದಿ: ಕಿಚ್ಚ ನಮ್ಮ ‘ಕಬ್ಜ’ದಲ್ಲೇ ಇದ್ದಾರೆ; ನಿರ್ದೇಶಕ ಚಂದ್ರು ಹೀಗಂದಿದ್ಯಾಕೆ?

    11,565 ಮದ್ಯದಂಗಡಿ: ರಾಜ್ಯದಲ್ಲಿ ಸದ್ಯ 11,565 ಮದ್ಯದಂಗಡಿಗಳಿವೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಂಗಳೂರಲ್ಲೇ ಅತಿ ಹೆಚ್ಚು ಶೇ. 45 ಮದ್ಯದಂಗಡಿಗಳಿವೆ. 3,974 ವೈನ್‌ಶಾಪ್ (ಸಿಎಲ್2), 266 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 1,636 ಹೋಟೆಲ್ ಮತ್ತು ವಸತಿ ಗೃಹ, 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,622 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 917 ಎಂಎಸ್‌ಐಎಲ್(ಸಿಎಲ್11ಸಿ), 610 ಆರ್‌ವಿಬಿ ಸೇರಿ ಒಟ್ಟಾರೆ 11,565 ಮದ್ಯದಂಗಡಿಗಳಿವೆ. ಸಿಎಲ್2 ಹಾಗೂ ಸಿಎಲ್9 ಹೊರತುಪಡಿಸಿ ಉಳಿದ ಮಾದರಿಯ ಮದ್ಯದಂಗಡಿಗಳನ್ನು ತೆರೆಯಲು ಇಲಾಖೆ ಲೈಸೆನ್ಸ್ ನೀಡುತ್ತಿದೆ.

    ಇನ್ನು ಮ್ಯಾಂಗೋ ವಾರ್!?: ಹಲಾಲ್​-ಜಟ್ಕಾ ಬಳಿಕ ಮಾವಿಗೂ ಬಂತು ಧರ್ಮಸಂಘರ್ಷ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts