More

    ಏನಾಗುತ್ತೆ ವಾಟ್ಸ್​ಆ್ಯಪ್​, ಫೇಸ್​ಬುಕ್, ಟ್ವಿಟರ್ ಭವಿಷ್ಯ?; ಕೇಂದ್ರ ಸರ್ಕಾರದಿಂದ ಹೊರಬಿತ್ತು ಮತ್ತೊಂದು ಸೂಚನೆ..

    ನವದೆಹಲಿ: ಟ್ವಿಟರ್, ಫೇಸ್​ಬುಕ್​, ವಾಟ್ಸ್​ಆ್ಯಪ್​ ಸೇರಿ ಹಲವು ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ಆ್ಯಪ್​ಗಳ ಭವಿಷ್ಯ ಭಾರತದ ಮಟ್ಟಿಗೆ ಸದ್ಯ ಆತಂಕದಲ್ಲಿದ್ದು, ಇವು ನಿಷೇಧಗೊಳ್ಳಲಿದೆಯೇ ಎಂಬ ಕುತೂಹಲ ಎರಡು ದಿನಗಳಿಂದ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ನಡುವೆ ಇವೆಲ್ಲವುಗಳಿಗೆ ಸರ್ಕಾರ ಮತ್ತೊಂದು ಸೂಚನೆ ಕೊಟ್ಟಿದ್ದು, ಇವತ್ತೇ ತಮ್ಮ ಅಭಿಪ್ರಾಯ ತಿಳಿಸಬೇಕು ಎಂದು ಸರ್ಕಾರ ಸೂಚಿಸಿದೆ.

    ಕೇಂದ್ರ ಸರ್ಕಾರ ತಂದಿರುವ ಹೊಸ ಇನ್​ಫಾರ್ಮೇಷನ್​ ಟೆಕ್ನಾಲಜಿ ರೂಲ್ಸ್​ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಇಂಟರ್​ಮೀಡಿಯರಿ ಕಂಪನಿಗಳಿಗೆ ಅರ್ಥಾತ್​ ಫೇಸ್​ಬುಕ್​, ಟ್ವಿಟರ್ ಮುಂತಾದ ಕಂಪನಿಗಳಿಗೆ ಫೆಬ್ರವರಿಯಲ್ಲೇ ಸೂಚನೆ ನೀಡಿ ಮೂರು ತಿಂಗಳ ಕಾಲಾವಕಾಶ ನೀಡಿತ್ತು. ಆ ಗಡುವು ನಿನ್ನೆಗೇ ಮುಗಿದಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾ ಇಂಟರ್​​ಮೀಡಿಯರಿ ಕಂಪನಿಗಳಿಂದ ಸರಿಯಾದ ಸ್ಪಷ್ಟನೆಗಳು ಸಿಗದ ಕಾರಣ ಸರ್ಕಾರ ಇಂದು ಮತ್ತೊಂದು ಸೂಚನೆ ಹೊರಡಿಸಿದೆ. ಕಾನೂನುಪಾಲನೆ ಕುರಿತು ಸಂಸ್ಥೆಗಳ ನಿಲುವು, ಕಂಪನಿಗಳ ವಿವರ, ಸಂಪರ್ಕಿಸಬೇಕಾದ ಅಧಿಕಾರಿಗಳ ಮಾಹಿತಿ ಎಲ್ಲವನ್ನೂ ಒದಗಿಸುವಂತೆ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್​ ಆ್ಯಂಡ್ ಇನ್​ಫಾರ್ಮೇಷನ್​ ಟೆಕ್ನಾಲಜಿ ನೋಟಿಸ್ ರವಾನಿಸಿದೆ. ಮಾತ್ರವಲ್ಲ ಈ ಬಗ್ಗೆ ಆದಷ್ಟು ಬೇಗ, ಅದರಲ್ಲೂ ಇಂದೇ ಮಾಹಿತಿ ನೀಡಲು ಆದ್ಯತೆ ನೀಡುವಂತೆ ಆಗ್ರಹಿಸಿ ಸೂಚನೆ ನೀಡಿದೆ.

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ವಾಟ್ಸ್​ಆ್ಯಪ್​ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಬರಲಿದೆಯೇ?; ಪ್ರೈವೆಸಿಗಾಗಿ ದೆಹಲಿ ಹೈಕೋರ್ಟ್​ ಮೊರೆ ಹೋದ ಕಂಪನಿ..

    ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts