More

    ಮಹಿಳಾ ಉದ್ಯೋಗಿಯನ್ನು ಎಲ್ಲೆಲ್ಲೋ ಮುಟ್ಟುತ್ತಿದ್ದ ಮ್ಯಾನೇಜರ್​ ಬಂಧನ

    ಪುಣೆ: ತನ್ನ ಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯನ್ನು ಲೈಂಗಿಕ ಶೋಷಣೆ ಮಾಡಿದ ಗೋಡೌನ್ ಮ್ಯಾನೇಜರ್​​ ಒಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಮಂತರ್​ವಾಡಿಯ ನಿವಾಸಿ ಮಂಗೇಶ್ ಬದೋಳೆ(32 ವರ್ಷ) ಎಂಬುವ ಬಂಧಿತ ಆರೋಪಿ.

    ಕಳೆದ ಹಲವು ತಿಂಗಳಿಂದ 32 ವರ್ಷದ ಸಂತ್ರಸ್ತೆ ಕೆಲಸ ಮಾಡುತ್ತಿದ್ದ ಗೋಡೌನಿನ ಮ್ಯಾನೇಜರ್​ ಆದ ಆರೋಪಿಯು, ಆಕೆಯನ್ನು ಹೇಗ್ಹೇಗೋ ಮುಟ್ಟುತ್ತಾ ಹಿಂಸಿಸುತ್ತಿದ್ದ. ಸೆಪ್ಟೆಂಬರ್ 11 ರಂದು ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುವ ಪ್ರಯತ್ನ ನಡೆಸಿದಾಗ ರೋಸಿಹೋದ ಆಕೆ, ಲೋನಿ ಕಲಭೋರ್​ ಠಾಣೆ ಪೊಲೀಸರಿಗೆ ದೂರು ನೀಡಿದಳು. ಸಂತ್ರಸ್ತೆಯ ದೂರಿನ ಮೇರೆಗೆ ಕಾಮುಕ ಮ್ಯಾನೇಜರನ್ನು ಬಂಧಿಸಿದ ಪೊಲೀಸರು, ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ತಾಯಿಯ ತೋಳಿನಲ್ಲೇ ಕಣ್ಮುಚ್ಚಿದ ಪುಟ್ಟ ಕಂದಮ್ಮ… ಗಂಡ ಹೆಂಡಿರ ಜಗಳಕ್ಕೆ ಕೂಸು ಬಲಿಯಾಯ್ತು

    ಗಾಂಧಿ ಕನಸು ಸಾಕಾರಗೊಳಿಸಲು ಈ ಕೆಲಸ ಮಾಡಿ: ಸಿಎಂ ಸೇರಿ ಎಲ್ಲಾ ಸಚಿವ-ಶಾಸಕರಿಗೆ ಎಂಟಿಬಿ ನಾಗರಾಜು ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts