More

    ರೂಲ್ಸ್‌ ಅಂದ್ರೆ ಇದಪ್ಪಾ…ಮೇಕೆಯಾಯ್ತು ಅರೆಸ್ಟ್‌! ಏಕೆ ಗೊತ್ತಾ?

    ಕಾನ್ಪುರ (ಉತ್ತರ ಪ್ರದೇಶ): ಕರೊನಾ ವೈರಸ್‌ ಹಾವಳಿಯಿಂದಾಗಿ ಇದೀಗ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ಮಾಸ್ಕ್‌ ಧರಿಸದೇ ಬೀದಿಗೆ ಇಳಿದವರಿಗೆ ಹಲವು ರಾಜ್ಯ ಸರ್ಕಾರಗಳು ದಂಡ ವಿಧಿಸಿರುವ ಉದಾಹರಣೆಗಳಿವೆ.

    ಇಂಥದ್ದೊಂದು ರೂಲ್ಸ್‌ ಫಾಲೋ ಮಾಡಲು ಪೊಲೀಸರಿಗೆ ಸರ್ಕಾರಗಳು ಆದೇಶ ನೀಡಿರುತ್ತವೆ. ಮಾಸ್ಕ್‌ ಧರಿಸದೇ ಓಡಾಟ ನಡೆಸುವವರಿಗೆ ದಂಡ ಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

    ಹಾಗೆಂದು ಮೇಕೆಯ ಮೇಲೂ ಈ ನಿಯಮ ಉಪಯೋಗಿಸಿದರೆ ಹೇಗಿರುತ್ತೆ? ಎಲ್ಲಾದ್ರೂ ಉಂಟೆ ಎಂದು ಕೇಳಬೇಡಿ. ಮೇಕೆಯೊಂದು ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

    ಕಾನ್ಪುರದ ಅನ್ವರ್ ಗಂಜ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಇದೀಗ ಸಕತ್‌ ಕಾಮಿಡಿಯಾಗಿ ಎಲ್ಲೆಡೆ ಪ್ರಚಾರವಾಗುತ್ತಿದೆ. ಬೆಕನ್ ಗಂಜ್ ಪ್ರದೇಶದಲ್ಲಿ ಮೇಕೆಯೊಂದು ಓಡಾಡುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ತಮ್ಮ ಜೀಪಿನಲ್ಲಿ ಎತ್ತಿಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಇದನ್ನೂ ಓದಿ: ಮತ್ತೆ ಬ್ಯಾನ್‌ ಆಯ್ತು 47 ಆ್ಯಪ್‌: ಸುಸ್ತಾದ ಚೀನಾ

    ಪೊಲೀಸರು ತನ್ನ ಮೇಕೆಯನ್ನು ಕರೆದುಕೊಂಡು ಹೋದ ವಿಷಯ ತಿಳಿದ ಮೇಕೆ ಮಾಲೀಕ ಠಾಣೆಗೆ ದೌಡಾಯಿಸಿದ್ದಾನೆ. ಠಾಣೆಯ ಎದುರು ಕಟ್ಟಿಹಾಕಿದ್ದ ಮೇಕೆಯನ್ನು ಅದರ ಮಾಲೀಕನಿಗೆ ಒಪ್ಪಿಸಿದ ಪೊಲೀಸರು, ರಸ್ತೆಯಲ್ಲಿ ಪ್ರಾಣಿಗಳನ್ನು ಓಡಾಡಲು ಬಿಡಬಾರದು ಎಂದು ಎಚ್ಚರಿಸಿ ಕಳುಹಿಸಿದ್ದಾರೆ.

    ವ್ಯಕ್ತಿಯೋರ್ವ ಮಾಸ್ಕ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದ. ಮೇಕೆಯೂ ಆತನ ಜೊತೆ ಬರುತ್ತಿತ್ತು. ಪೊಲೀಸರನ್ನು ಕಂಡಕೂಡಲೇ ಆತ ಅಲ್ಲಿಂದ ಕಾಲ್ಕಿತ್ತ. ಹಾಗಾಗಿ ಮೇಕೆಯನ್ನು ಹಿಡಿದುಕೊಂಡು ಬಂದಿರುವುದಾಗಿ ಠಾಣಾಧಿಕಾರಿ ಸೈಫುದ್ದೀನ್ ಬೈಗ್ ಹೇಳಿದ್ದಾರೆ.
    ಆದರೆ ಮೇಕೆಯನ್ನು ಬಂಧಿಸಿದ ಪೊಲೀಸ್ ಮಾತ್ರ ಭಿನ್ನ ಹೇಳಿಕೆ ಕೊಟ್ಟಿದ್ದಾರೆ. . ಜನರು ಈಗ ತಮ್ಮ ನಾಯಿಗಳಿಗೂ ಮಾಸ್ಕ್ ಹಾಕುತ್ತಾರೆ. ಆದರೆ ಮೇಕೆಗೆ ಯಾಕೆ ಹಾಕುವುದಿಲ್ಲ. ಹಾಗಾಗಿ ಬಂಧಿಸಿದ್ದೇನೆ ಎನ್ನುತ್ತಾರೆ.

    ಕಾಂಗ್ರೆಸ್‌ಗೆ ಬಿಕ್‌ ಶಾಕ್! ಭ್ರಷ್ಟಾಚಾರದ ತನಿಖೆಗೆ ಗ್ರೀನ್‌ ಸಿಗ್ನಲ್ ಕೊಟ್ಟ ಹರಿಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts