More

    ಮತ್ತೆ ಬ್ಯಾನ್‌ ಆಯ್ತು 47 ಆ್ಯಪ್‌: ಸುಸ್ತಾದ ಚೀನಾ

    ನವದೆಹಲಿ: ಲಡಾಖ್‌ನಲ್ಲಿ ಗಡಿ ಸಂಘರ್ಷಕ್ಕೆ ಇಳಿಯುವ ಮೂಲಕ ಚೀನಾ ಇದಾಗಲೇ ಭಾರತದಿಂದ ಭಾರಿ ನಷ್ಟ ಅನುಭವಿಸುತ್ತಿದೆ.
    ಈಗಾಗಲೇ 59 ಚೀನಿ ಆ್ಯಪ್‌ಗಳ ಮೇಲೆ ಭಾರತ ಸರ್ಕಾರ ನಿಷೇಧ ಹೇಳಿದ್ದು, ಇದೀಗ ಹೊಸದಾಗಿ 47 ಆ್ಯಪ್‌ಗಳನ್ನು ಬ್ಯಾನ್‌ ಮಾಡಿದೆ. ಈ ಹಿಂದೆ ಬ್ಯಾನ್‌ ಆಗಿರುವ ಆ್ಯಪ್‌ಗಳ ಹೊಸ ಅವತರಣಿಕೆಗಳು (ಅಪ್‌ಡೇಟೆಡ್‌ ವರ್ಷನ್ಸ್‌) ಈ 47 ಆ್ಯಪ್‌ಗಳು.

    ಇದರಿಂದಾಗಿ ಚೀನಾಗೆ ಭಾರೀ ಆಘಾತ ನೀಡಲಾಗಿದೆ. ಇಷ್ಟೇ ಅಲ್ಲದೇ 250ಕ್ಕೂ ಅಧಿಕ ಚೀನಿ ಆ್ಯಪ್‌ಗಳ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಇವುಗಳನ್ನು ನಿಷೇಧಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

    ಈ ಆ್ಯಪ್‌ಗಳ ಸಹಾಯದಿಂದ ವೈಯಕ್ತಿಕ ಡಾಟಾಗಳನ್ನು ಕದಿಯುವ ಮೂಲಕ ಬೇರೆ ದೇಶಗಳ ಪ್ರಜೆಗಳ ಮೇಲೆ ನಿಗಾವಹಿಸುತ್ತಿರುವ ಚೀನಾದ ಕುತಂತ್ರ ಬುದ್ಧಿಯಿಂದಾಗಿ ಸುರಕ್ಷತೆ ದೃಷ್ಟಿಯಲ್ಲಿ ಚೀನಾದ 47 ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಸ್ಪಷ್ಟಪಡಿಸಿದ್ದಾರೆ.

    ಈ ಮೂಲಕ ಒಟ್ಟು 106 ಚೀನಿ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಿದಂತಾಗಿದೆ. ರಾಷ್ಟ್ರೀಯ ಭದ್ರತೆ, ಮಾಹಿತಿ ಸೋರಿಕೆ, ಗೌಪ್ಯತೆ ನಿಯಮ ಉಲ್ಲಂಘನೆ ಇತ್ಯಾದಿಗಳನ್ನು ಮಾಡುವ ಅಪಾಯ ಇರುವ ಆ್ಯಪ್​ಗಳ ಪಟ್ಟಿ ಸಿದ್ಧವಾಗುತ್ತಿದೆ. ಇಂಥ 250ಕ್ಕೂ ಅಧಿಕ ಆ್ಯಪ್​ಗಳ ಪಟ್ಟಿ ಮಾಡಲಾಗಿದೆ. ಇವುಗಳ ಮೇಲೆ ನಿಗಾ ಇರಿಸಲಾಗಿದ್ದು, ಅಪಾಯಕಾರಿವಾಗಿರುವವನ್ನು ನಿಷೇಧಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

    ಮೂಲಗಳ ಪ್ರಕಾರ, ಭಾರತ ಸೇರಿ ವಿಶ್ವಾದ್ಯಂತ ಜನಪ್ರಿಯವಾಗಿರುವ ಪಬ್​ಜಿ ಗೇಮ್ ಆ್ಯಪ್ ಅನ್ನು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನು ದಕ್ಷಿಣ ಕೊರಿಯಾದ ಬ್ಲೂಹೋಲ್ ಸಂಸ್ಥೆ ರಚಿಸಿದೆಯಾದರೂ ಚೀನಾದ ಟೆನ್ಸೆಂಟ್ ಸಂಸ್ಥೆಗೆ ಇದರಲ್ಲಿ ದೊಡ್ಡ ಪಾಲು ಇದೆ. ಭಾರತವೊಂದರಲ್ಲೇ ಈ ಆ್ಯಪ್ ಒಂದೂವರೆ ಕೋಟಿಯಷ್ಟು ಡೌನ್​​ಲೋಡ್ ಆಗಿದೆ.

    ಇದನ್ನೂ ಓದಿ: ಒಂದು ಆಸ್ಪತ್ರೆಯಲ್ಲಿ ಪಾಸಿಟಿವ್‌, ಇನ್ನೊಂದರಲ್ಲಿ ನೆಗೆಟಿವ್‌: ಯಾವುದು ನಂಬ್ಲಿ ಸರ್‌?

    ಇದರ ಜತೆಗೆ, ಇ-ಕಾಮರ್ಸ್ ಆ್ಯಪ್ ಆಗಿರುವ ಅಲಿಎಕ್ಸ್​ಪ್ರೆಸ್ ಲೂಡೋ ವರ್ಲ್ಡ್ ಗೇಮ್ ಆ್ಯಪ್ ಇತ್ಯಾದಿಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದೂ ತಿಳಿದುಬಂದಿದ್ದು, ಇವುಗಳ ಕುರಿತು ಅಧಿಕೃತ ಮಾಹಿತಿ ಬರಬೇಕಿದೆಯಷ್ಟೇ.

    ಇದರಿಂದಾಗಿ ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವ ಅನಿವಾರ್ಯತೆಗೆ ಚೀನಾ ಸಿಲುಕಿದೆ. ಗಡಿಯಿಂದ ಸೈನ್ಯ ಹಿಂಪಡೆಯಲು ಮೀನಮೇಷ ಎಣಿಸುತ್ತಿರುವ ಚೀನಾವನ್ನು ಸರಿ ದಾರಿಗೆ ತರಲು ಆ್ಯಪ್ ನಿಷೇಧ ಎಂಬ ಅಸ್ತ್ರವನ್ನು ಮೋದಿ ಸರ್ಕಾರ ಎರಡನೇ ಬಾರಿ ಪ್ರಯೋಗವಾಗಿದ್ದು ಚೀನಾದ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

    ಕಾಂಗ್ರೆಸ್‌ಗೆ ಬಿಕ್‌ ಶಾಕ್! ಭ್ರಷ್ಟಾಚಾರದ ತನಿಖೆಗೆ ಗ್ರೀನ್‌ ಸಿಗ್ನಲ್ ಕೊಟ್ಟ ಹರಿಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts