More

    ಫೆಬ್ರವರಿ 1ರಿಂದ ಗೋವಾ ನಿವಾಸಿಗಳಿಗೆ ಕ್ಯಾಸಿನೊಗೆ ಪ್ರವೇಶ ನಿರ್ಬಂಧ; ಮುಖ್ಯಮಂತ್ರಿ ಪ್ರಮೋದ್​ ಸಾವಂತ್​

    ಪಣಜಿ: ಫೆಬ್ರವರಿ 1ರಿಂದ ಗೋವಾದಲ್ಲಿನ ಕ್ಯಾಸಿನೊಗಳಿಗೆ ಸ್ಥಳೀಯರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ.

    ಕ್ಯಾಸಿನೊ ಉದ್ಯಮದ ಕಾಯ್ದೆಗಳನ್ನು ಮರು ಪರಿಶೀಲಿಸಲು ಮತ್ತು ಉದ್ಯಮವನ್ನು ನಿಯಂತ್ರಿಸಲು ರಾಜ್ಯ ಮಾರಾಟ ತೆರಿಗೆ ಆಯುಕ್ತರನ್ನು ನೇಮಿಸಲಾಗುವುದು ಎಂದು ಹೇಳಿದರು.

    ಗೇಮಿಂಗ್​ ಕಮೀಷನ್​ನ್ನು ಆರಂಭಿಸಿ ಅದಕ್ಕೆ ತೆರಿಗೆ ಆಯುಕ್ತರನ್ನು ನೇಮಿಸಲಾಗುವುದು. ಮತ್ತು ಫೆಬ್ರವರಿ 1ರಿಂದ ಸ್ಥಳೀಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರಮವನ್ನು ಸ್ಥಳೀಯರ ಒತ್ತಾಯದ ಮೇರೆಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಗೇಮಿಂಗ್​ ಕಮೀಷನ್​ ಜಾರಿಗೆ ಬಂದ ಮೇಲೆ ಅದಕ್ಕೆ ಕ್ಯಾಸಿನೊ ಉದ್ದಿಮೆಯ ನೀತಿ ಬದಲಾವಣೆಗೆ ಅಧಿಕಾರ ನೀಡಲಾಗುತ್ತದೆ ಮತ್ತು ಅದೇ ಆಯೋಗವು ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುತ್ತದೆ ಎಂದು ಸಾವಂತ್ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts