More

    ಮಸಾಲ ಟೀ ಕುಡಿಯಿರಿ ಕರೊನಾ ಓಡಿಸಿ- ಗೋವಾ ಏರ್ಪೋರ್ಟ್ ಹೊಸ ಸೂತ್ರ!

    ಕರೊನಾದಿಂದ ಪಾರಾಗಲು ಅನೇಕರು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳತೊಡಗಿದ್ದಾರೆ. ಈಗಾಗಲೇ ದೆಹಲಿ, ತೆಲಂಗಾಣ ಸೇರಿ ಕೆಲವು ರಾಜ್ಯಗಳಲ್ಲಿ ಪೊಲೀಸರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಕಷಾಯ, ಆಯುರ್ವೇದದ ಮೊರೆ ಹೋಗಿದ್ದಾರೆ.
    ಹಾಗೇ ಗೋವಾದ ಡಬೋಲಿಮ್​ ಏರ್​ಪೋರ್ಟ್​ನ ಅಧಿಕಾರಿಗಳು ಹೊಸ ಐಡಿಯಾದ ಮೂಲಕ ಕರೊನಾದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುತ್ತಿದ್ದಾರೆ.

    ಈ ಏರ್​ಪೋರ್ಟ್​ನಲ್ಲಿ ಯಾವುದೇ ಕಷಾಯ ಸರಬರಾಜು ಮಾಡಲಾಗುತ್ತಿಲ್ಲ. ಬದಲಿಗೆ ಔಷಧೀಯ ಅಂಶಗಳುಳ್ಳ ಚಹಾವನ್ನು ಸಿಬ್ಬಂದಿಗೆ ನೀಡಲಾಗುತ್ತಿದೆ. ಏರ್​ಪೋರ್ಟ್​ನಲ್ಲಿರುವವರು ಕರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಅತ್ಯಂತ ಹೆಚ್ಚಾಗಿರುತ್ತದೆ. ಹಾಗಾಗಿ ತಮ್ಮ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ಅಧಿಕಾರಿಗಳು ಈ ದಾರಿ ಕಂಡುಕೊಂಡಿದ್ದಾರೆ.
    ಈ ಮೆಡಿಸಿನ್​ಯುಕ್ತ ಚಹಾ ತಯಾರಿಕೆಯನ್ನು ಭಾರತೀಯ ಏರ್​ಪೋರ್ಟ್​ ಪ್ರಾಧಿಕಾರ ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯೂರಿಟಿ ಫೋರ್ಸ್​ ಸಹಯೋಗದೊಂದಿಗೆ ಶುರು ಮಾಡಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಬಿಗೊ ಬ್ಯಾನ್​; ಟಿಕ್​ಟಾಕ್​ಗೆ ಕೊನೇ ಎಚ್ಚರಿಕೆ ರವಾನೆ

    ಏರ್​ಪೋರ್ಟ್​ನಲ್ಲಿ ಕೆಲಸ ಮಾಡುತ್ತಿರುವವರ ಆರೋಗ್ಯದ ದೃಷ್ಟಿಯಿಂದ, ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ಪ್ರಯತ್ನಕ್ಕೆ ಕೈ ಹಾಕಲಾಗಿದೆ ಎಂದು ಡಬೋಲಿಮ್ ಏರ್​ಪೋರ್ಟ್​ನ ಅಧಿಕೃತ ಟ್ವಿಟರ್​ ಖಾತೆಯಿಂದ ಟ್ವೀಟ್​ ಮಾಡಲಾಗಿದೆ. (ಏಜೆನ್ಸೀಸ್​)

    VIDEO: ಮಾಸ್ಕ್​​​​ ತೆಗೆಯದೆ ತಿಂಡಿ ತಿನ್ನುವ ಸುಲಭ ವಿಧಾನ ಹೇಳಿಕೊಟ್ಟ ಬ್ರಿಟಿಷ್​ ಮಾಡೆಲ್​…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts