More

    ಆ.15ಕ್ಕೆ ದೇಶೀಯ ಕರೊನಾ ಲಸಿಕೆ; ಜಾಗತಿಕ ಮಾನದಂಡದಂತೆ ಕ್ಲಿನಿಕಲ್ ಟ್ರಯಲ್​; ಐಸಿಎಂಆರ್​ ಸ್ಪಷ್ಟನೆ

    ನವದೆಹಲಿ: ಭಾರತದ ಮೊಟ್ಟ ಮೊದಲ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ನಲ್ಲಿ ಯಾವುದೇ ತರಾತುರಿ ಮಾಡಲಾಗುತ್ತಿಲ್ಲ. ಬದಲಾಗಿ ಅಂತಾರಾಷ್ಟ್ರಿಯವಾಗಿ ಸ್ವೀಕಾರಾರ್ಹವಾಗಿರುವ ಮಾನದಂಡಗಳ ಅನುಸಾರವಾಗಿಯೇ ನಡೆದುಕೊಳ್ಳಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸ್ಪಷ್ಟನೆ ನೀಡಿದೆ.

    ಆಗಸ್ಟ್​ 15ರಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಘೋಷಣೆ ಮಾಡಲು ಅನುಕೂಲವಾಗುವಂತೆ ಆತುರಾತುರವಾಗಿ ಒಂದೇ ತಿಂಗಳಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಜತೆಗೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರು ಕೂಡ ಅನುಮಾನ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ; ಸ್ವದೇಶಿ ಕರೊನಾ ಲಸಿಕೆಗೆ ಅಪಸ್ವರಗಳೆದ್ದಿರೋದೇಕೆ? ಆಗಸ್ಟ್​ 15ಕ್ಕೆ ಲಸಿಕೆ ಸಜ್ಜು ಎನ್ನುವುದು ಅವಾಸ್ತವಿಕವೇ? 

    ಆ.15ಕ್ಕೆ ದೇಶೀಯ ಕರೊನಾ ಲಸಿಕೆ; ಜಾಗತಿಕ ಮಾನದಂಡದಂತೆ ಕ್ಲಿನಿಕಲ್ ಟ್ರಯಲ್​; ಐಸಿಎಂಆರ್​ ಸ್ಪಷ್ಟನೆ

    ಇದಕ್ಕೆಲ್ಲ ಉತ್ತರ ನೀಡಿರುವ ಪುಣೆಯ ಐಸಿಎಂಆರ್​ನ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಸ್ಪಷ್ಟನೆ ನೀಡಿದೆ. ಭಾರತ್​ ಬಯೋಟೆಕ್​ ಇಂಟರ್​ ನ್ಯಾಷನಲ್​ ಸಂಸ್ಥೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕಂಪನಿ ಕಂಡುಹಿಡಿದಿರುವ ಕೊವಾಕ್ಸಿನ್​ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲುದು ಎಂಬ ಭರವಸೆ ಮೂಡಿಸಿದೆ. ಈ ಕಾರಣಕ್ಕಾಗಿ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಲಾಗಿದೆ ಎಂದು ಐಸಿಎಂಆರ್​ ಹೇಳಿದೆ.

    ಜಗತ್ತಿನ ವಿವಿಧ ದೇಶಗಳಲ್ಲಿ ಅಭಿವೃದ್ಧಿ ಹಂತದಲ್ಲಿರುವ ಎಲ್ಲ ಲಸಿಕೆಗಳನ್ನು ವೇಗವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಂತೆಯೇ ದೇಶಿಯ ಲಸಿಕೆಗೂ ಇದೇ ಮಾನದಂಡಗಳು ಅನ್ವಯವಾಗಲಿವೆ ಎಂದು ತಿಳಿಸಿದೆ.

    ಇದನ್ನೂ ಓದಿ; ಬೆಳಗಾವಿ ರೋಗಿಗಳು ಪಡೆಯಲಿದ್ದಾರೆ ದೇಶದ ಮೊಟ್ಟ ಮೊದಲ ಕರೊನಾ ಲಸಿಕೆ; ಕ್ಲಿನಿಕಲ್​ ಟ್ರಯಲ್​ಗೆ 12 ಸಂಸ್ಥೆಗಳ ಆಯ್ಕೆ 

    ಪ್ರಿ ಕ್ಲಿನಿಕಲ್​ ಹಂತದ ವಿಸ್ತೃತ ಮಾಹಿತಿಯನ್ನು ಪರಿಗಣಿಸಿ ಭಾರತೀಯ ಔಷಧ ಮಹಾನಿಯಂತ್ರಕರು ಒಂದು ಮತ್ತು ಎರಡನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ನಿಡಿದ್ದಾರೆ. ಅದರಂತೆ ಕ್ಲಿನಿಕಲ್​ ಟ್ರಯಲ್​ ಹಂತದಲ್ಲಿ ಐಸಿಎಂಆರ್​ ಸಹಕಾರ ನೀಡುತ್ತಿದೆ. ಇದಕ್ಕಾಗಿ ಬೆಳಗಾವಿ ಸೇರಿ ದೇಶದ 12 ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸಲಾಗಿದೆ.

    ಸಂಬಳ ಕೋಡೋಕೆ ಕಾಸಿಲ್ಲ ಎನ್ನುವ ಸರ್ಕಾರಕ್ಕೆ ಇದ್ಯಾಕೆ ಬೇಕು..? ಸಾಮಾನ್ಯರ ಆಕ್ರೋಶಕ್ಕೂ ಕಾರಣವಿಲ್ಲದಿಲ್ಲ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts