More

    ಸಾಮೂಹಿಕ ಸೂರ್ಯ ನಮಸ್ಕಾರ ಅಭಿಯಾನ ನಾಳೆ

    ಹುಬ್ಬಳ್ಳಿ : ರಥಸಪ್ತಮಿ ಅಂಗವಾಗಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ಯ ಮಾಧ್ಯಮ ಸಹಯೋಗದೊಂದಿಗೆ ಯೋಗಸ್ಪರ್ಶ ಪ್ರತಿಷ್ಠಾನ, ಎಸ್​ಪಿವೈಎಸ್​ಎಸ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಹುಬ್ಬಳ್ಳಿ ಶಾಖೆಯ ಸಹಯೋಗದೊಂದಿಗೆ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ಅಭಿಯಾನವನ್ನು ಫೆ. 16ರಂದು ಆಯೋಜಿಸಿದೆ.

    ಇಲ್ಲಿನ ಇಂದಿರಾ ಗಾಜಿನ ಮನೆ (ಗ್ಲಾಸ್ ಹೌಸ್)ಯಲ್ಲಿ ಅಂದು ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ 7.30 ರಿಂದ 8.15ರವರೆಗೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ.

    ಹರಿಶ್ಚಂದ್ರ ಘಾಟನ ನಿರ್ವಾಹಕ ದೇವದಾನಂ ಅತಿಥಿಯಾಗಿದ್ದು, ಎಸ್​ಪಿವೈಎಸ್​ಎಸ್ ಕೃಷ್ಣಾ ವಲಯದ ಸಂಚಾಲಕ ಸುಧಾಕರ ದಿವಟೆ ಅಧ್ಯಕ್ಷತೆ ವಹಿಸುವರು. ಸಮಾಜ ಸೇವಕಿ ರಾಜಶ್ರೀ ಜಡಿ ವಕ್ತಾರರಾಗಿ ಪಾಲ್ಗೊಳ್ಳುವರು.

    ಈ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರ ಅಭಿಯಾನದಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಈ ಅಭಿಯಾನದ ಅಂಗವಾಗಿ ಗ್ಲಾಸ್ ಹೌಸ್, ಗಣೇಶಪೇಟ, ಗೋಕುಲ ರಸ್ತೆ, ವಿದ್ಯಾನಗರ, ಕೇಶ್ವಾಪುರ, ಹಳೇ ಹುಬ್ಬಳ್ಳಿಯಲ್ಲಿ ನುರಿತ ಯೋಗ ಶಿಕ್ಷಕರಿಂದ ಉಚಿತವಾಗಿ ಸೂರ್ಯ ನಮಸ್ಕಾರದ ತರಬೇತಿ ನೀಡಲಾಗುತ್ತಿದೆ. 500ಕ್ಕೂ ಹೆಚ್ಚು ಜನರು ವಿವಿಧೆಡೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

    ರಥಸಪ್ತಿಯನ್ನು ಸೂರ್ಯ ಜಯಂತಿ ಎಂದೂ ಕರೆಯುತ್ತಾರೆ. ರಥ ಸಪ್ತಮಿಯು ಸೂರ್ಯುರಾಧನೆಯ ಉತ್ಸವ. ಹಾಗೆಂದೇ ಈ ದಿನ ಸೂರ್ಯ ನಮಸ್ಕಾರಕ್ಕೆ ವೀಶೇಷ ಮಹತ್ವ ಇದೆ. ಸೂರ್ಯ ನಮಸ್ಕಾರ ನಿತ್ಯದ ಅಭ್ಯಾಸವಾಗಬೇಕು.

    ಸೂರ್ಯನಮಸ್ಕಾರ ಸ್ನಾಯುಗಳಿಗೆ ಬಲ ತುಂಬುತ್ತದೆ. ಕೊಬ್ಬು ಕರಗಿಸುತ್ತದೆ. ರಥಸಪ್ತಮಿ ದಿನದಂದು ಈ ಅಭಿಯಾನ ಹಮ್ಮಿಕೊಂಡಿರುವ ಪ್ರಮುಖ ಉದ್ದೇಶವೆಂದರೆ ಪ್ರತಿಯೊಬ್ಬರನ್ನೂ ಸೂರ್ಯನಮಸ್ಕಾರ ಮಾಡಲು ಉತ್ತೇಜಿಸುವುದು, ಅದರ ಬಗ್ಗೆ ಜಾಗೃತಿ ಮೂಡಿಸುವುದು ಆಗಿದೆ ಎನ್ನುತ್ತಾರೆ ಪ್ರತಿಷ್ಠಾನದ ಹುಬ್ಬಳ್ಳಿ ಅಧ್ಯಕ್ಷ ದಯಾನಂದ ಮಗಜಿಕೊಂಡಿ ಅವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts